Advertisement
ಗೋಣಿಕೊಪ್ಪಲು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ, ಪಶುಪಾಲನೆ ಮತ್ತು ಪಶು ವೈದ್ಯಸೇವೆ, ಮೀನುಗಾರಿಕೆ ಹಾಗೂ ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ಆತ್ಮ ಯೋಜನೆಯಡಿಯಲ್ಲಿ ಗೋಣಿಕೊಪ್ಪದ ಅತ್ತೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕಿಸಾನ್ ಮೇಳ ಹಾಗೂ ಪೊನ್ನಂಪೇಟೆ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Related Articles
Advertisement
ಭಾರತೀಯ ತೋಟಗಾರಿಕಾ ಸಂಶೋ ಧನ ಸಂಸ್ಥೆಯ ನಿರ್ದೇಶಕ ಡಾ| ಎಂ.ಆರ್. ದಿನೇಶ್, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ| ಸಾಜೂ ಜಾರ್ಜ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ. ರಾಜು, ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ| ಸಿ.ಜಿ. ಕುಶಾಲಪ್ಪ ಮಾತನಾಡಿದರು.
ವಿರಾಜಪೇಟೆ ತಾ.ಪಂ.ಉಪಾಧ್ಯಕ್ಷೆ ಆಶಾ ಜೇಮ್ಸ್, ಪಶುಪಾಲನ ಇಲಾಖೆ ಉಪ ನಿರ್ದೇಶಕ ಡಾ| ತಮ್ಮಯ್ಯ, ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆಯ ಪ್ರಧಾನ ವಿಜ್ಞಾನಿ ವೆಂಕಟ್ ಕುಮಾರ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಡಾ| ಶಶಿಧರ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಕೃಷಿ ಇಲಾಖೆಯ ಸ.ನಿರ್ದೇಶಕ ರಾಜಶೇಖರ್, ತೋಟಗಾರಿಕಾ ಇಲಾಖೆಯ ಹಿರಿಯ ಸ. ನಿರ್ದೇಶಕ ಡೀನಾ, ಕೃಷಿ ಇಲಾಖೆಯ ಸ. ನಿರ್ದೇಶಕ ಶಿವಮೂರ್ತಿ, ಕೃಷಿ ಅಧಿಕಾರಿ ರೀನಾ ಮತ್ತಿತರರು ಉಪಸ್ಥಿತರಿದ್ದರು.
ಕೃಷಿ ಅಧಿಕಾರಿ ಗಿರೀಶ್ ಸ್ವಾಗತಿಸಿದರು. ಸರೋಜ ಪ್ರಾರ್ಥಿಸಿದರು. ಹಿರಿಯ ಕೃಷಿ ವಿಜ್ಞಾನಿಗಳಾದ ಡಾ| ಬಿ. ಪ್ರಭಾಕರ್ ನಿರೂಪಿಸಿದರು, ಡಾ| ಕೆ.ವಿ. ವೀರೇಂದ್ರ ಕುಮಾರ್ ವಂದಿಸಿದರು.
ಕಾಫಿ, ಕಾಳುಮೆಣಸು, ಶುಂಠಿಯ ನೂತನ ತಾಂತ್ರಿಕತೆ ಕುರಿತು ಸಮಾವೇಶ ನಡೆಯಿತು. ಈ ನಿಟ್ಟಿನಲ್ಲಿ ಕಾಫಿಯಲ್ಲಿ ನೀರಾವರಿ ಮತ್ತು ಸುಣ್ಣದ ಬಳಕೆಯ ಮಹತ್ವದ ಕುರಿತು ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ಉಪ ನಿರ್ದೇಶಕ ಡಾ| ಪಿ.ಶಿವಪ್ರಸಾದ್ ವಿಚಾರ ಮಂಡನೆ ಮಾಡಿದರು.
ಕಾಳುಮೆಣಸಿನಲ್ಲಿ ಒಂಟಿಕಣ್ಣಿನ ಸಸ್ಯಾ ಭಿವೃದ್ಧಿ ವಿಧಾನದಿಂದ ಸಸಿಗಳ ಉತ್ಪಾದನೆ ವಿಷಯವಾಗಿ ಗೋಣಿಕೊಪ್ಪಲು ಕೆ.ವಿ.ಕೆ ತೋಟಗಾರಿಕಾ ವಿಭಾಗದ ವಿಷಯ ತಜ್ಞ ಡಾ| ಕೆ.ಎ. ದೇವಯ್ಯ, ಸುಧಾರಿತ ಶುಂಠಿ ಬೇಸಾಯ ಕ್ರಮಗಳು ವಿಚಾರವಾಗಿ ಗೋಣಿಕೊಪ್ಪಲು ಕೆ.ವಿ.ಕೆ. ತೋಟಗಾರಿಕಾ ವಿಭಾಗದ ವಿಷಯತಜ್ಞ ಡಾ| ಪ್ರಭಾಕರ ಬಿ., ವಿವಿಧ ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ವಿಚಾರವಾಗಿ ಗೋಣಿಕೊಪ್ಪಲು ಕೆ.ವಿ.ಕೆ.ಯ ಸಸ್ಯ ಸಂರಕ್ಷಣೆ ವಿಷಯ ತಜ್ಞ ಡಾ| ವೀರೇಂದ್ರ ಕುಮಾರ್ ಕೆ.ವಿ, ಭತ್ತದ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯ ಬಗ್ಗೆ ನಲ್ಲೂರು ಗ್ರಾಮದ ಕೃಷಿ ಪಂಡಿತ ತಮ್ಮಯ್ಯ ಅವರಿಂದ ವಿಚಾರ ಮಂಡನೆ ನೆರವೇರಿತು.
ಪುಸ್ತಕಗಳ ಬಿಡುಗಡೆಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ಹಾಗೂ ಕೃಷಿ ಇಲಾಖೆ ವತಿಯಿಂದ ಹೊರ ತಂದಿರುವ ತಾಂತ್ರಿಕ ಕೃಷಿ ಕೈಪಿಡಿ ಹಾಗೂ ಸಾವಯವ ಗೊಬ್ಬರ ಮತ್ತು ಜಲಾನಯನ ಅಭಿವೃದ್ಧಿ ಕುರಿತ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.