Advertisement

ಅತಿಥಿ ಶಿಕ್ಷಕರ ನೇಮಕ ಚುರುಕುಗೊಳಿಸಿ

01:59 PM Jul 13, 2017 | Team Udayavani |

ಬೀದರ: ಶಿಕ್ಷಕರ ಕೊರತೆ ಇರುವ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು
ಎಂದು ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಕ್ಷೇತ್ರಗಳಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಪಾಠ ಬೋಧನೆಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಕೂಡಲೇ ಪರಿಹಾರ ಸಿಗಬೇಕು ಎಂದು ಎಲ್ಲ ಸದಸ್ಯರು ಒತ್ತಾಯಿಸಿದ್ದಾರೆ. ಆದ್ದರಿಂದ ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಅಧಿಕಾರಿ, ಆದ್ಯತೆ ಅನುಸಾರ ಕ್ರಮ ಕೈಗೊಂಡು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಇರುವ ಶಿಕ್ಷಕರ ಕೊರತೆ ತಪ್ಪಿಸಲಾಗುವುದು. ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಸಂಬಂ ಧಿಸಿದಂತೆ ತಾಲೂಕುವಾರು ಹಂಚಿಕೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳನ್ನು ಗೌರವಧನ ಆಧಾರದ ಮೇಲೆ ನೇಮಿಸಿಕೊಳ್ಳಲು ಆಯಾ ಶಾಲೆಗಳ ಮುಖ್ಯ ಗುರುಗಳಿಗೆ ಈಗಾಗಲೇ ಸೂಚಿಸಲಾಗಿದೆ. ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ ವಿಷಯಗಳಿಗೆ ಪ್ರಥಮ ಆದ್ಯತೆ ನೀಡಲು ತಿಳಿಸಲಾಗಿದೆ.
ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಇರುವ ಹೆಚ್ಚುವರಿ ಶಿಕ್ಷಕರನ್ನು ಅವಶ್ಯವಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮರು ಹೊಂದಾಣಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಇನ್ನು ಕುಡಿಯುವ ನೀರಿನ ಕ್ರಿಯಾ ಯೋಜನೆ ಮಾಡಿದಿಲ್ಲ. ಕುಡಿವ ನೀರಿಗೆ ಸಂಬಂ ಧಿಸಿದ ಕಾಮಗಾರಿಗಳು ಸಾಕಷ್ಟು 
ವಿಳಂಬವಾಗುತ್ತಿವೆ ಎಂದು ಸಭೆಯಲ್ಲಿದ್ದ ಕೆಲವು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಮಕೃಷ್ಣ ಆರ್‌ಡಿಪಿಆರ್‌ನ ಪ್ರಧಾನ ಕಾರ್ಯದರ್ಶಿಗಳು ಜಿಲ್ಲೆಯ ಪರಿವೀಕ್ಷಣಾ ಸಭೆಯಲ್ಲಿ ಕುಡಿಯುವ ನೀರಿನ ಕ್ರಿಯಾಯೋಜನೆ ಸಿದ್ದಪಡಿಸಿ ಜುಲೈ ಅಂತ್ಯದೊಳಗೆ ಅನುಮೋದನೆ ಪಡೆದುಕೊಳ್ಳಲು ಸೂಚಿಸಿದ್ದರು. ಆದ್ದರಿಂದ ತಕ್ಷಣ ಸ್ಥಳೀಯ ಅವಶ್ಯಕತೆ ಆಧರಿಸಿ ಚುನಾಯಿತ ಜನಪ್ರತಿನಿಗಳೊಂದಿಗೆ ಸಮಾಲೋಚಿಸಿ ನಿಯಮಾನುಸಾರ ಪ್ರಸ್ತಾವಣೆ ತಯಾರಿಸಬೇಕಿದೆ ಎಂದು ಹೇಳಿದರು. ಪ್ರಸಕ್ತ ಸಾಲಿಗೆ ಈಗಾಗಲೇ ಅನು ಮೋದನೆಯಾಗಿ
ಅನುಷ್ಠಾನವಾಗುತ್ತಿರುವ ಮುಂದುವರಿದಿರುವ ಕುಡಿಯುವ ನೀರಿನ ಯೋಜನೆಗಳಿಗೆ 80 ಕೋಟಿ ರೂ. ಅನುದಾನದ 
ಅವಶ್ಯಕತೆ ಇರುವುದಾಗಿ ಹಿಂದಿನ ಕುಡಿಯುವ ನೀರಿನ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರಿಂದ ತಿಳಿದುಬಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಅನುದಾನ ಹಂಚಿಕೆಯಾಗಿಲ್ಲ, ಇದಕ್ಕೆ ಸದ್ಯಕ್ಕೆ ಅವಕಾಶವಿಲ್ಲ ಎಂದು ಇಲಾಖೆ ಆಯುಕ್ತರು ಮೌಖೀಕವಾಗಿ ತಿಳಿಸಿದ್ದಾರೆ.

ಆದಾಗ್ಯೂ ಮಳೆ ಮುನ್ನ ಹಾಗೂ ನಂತರ ನೀರಿನ ಲಭ್ಯತೆ ಆಧರಿಸಿ, ನೀರಿನ ಗುಣಮಟ್ಟದ ಸಮಸ್ಯೆ ಇದ್ದಲ್ಲಿ ಅಂತಹ ಜನವಸತಿಗಳಿಗೆ ಆದ್ಯತೆ ಮೇರೆಗೆ 2017-18ರ ಕ್ರಿಯಾಯೋಜನೆಯಡಿ ಅಗತ್ಯವಿರುವ ನೀರಿನ ಯೋಜನೆಗಳ  ಕ್ರಿಯಾ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಜಿಪಂ ಸಾಮಾನ್ಯ ಸಭೆ ಅನುಮೋದನೆಯೊಂದಿಗೆ ಪ್ರಸ್ತಾವನೆ ಕಳಿಹಿಸಬಹುದು ಎಂದು  ರಾಮಕೃಷ್ಣ ಸಭೆಗೆ ಹೇಳಿದರು.

Advertisement

ಕೈಪಿಡಿ ವಿತರಣೆ: ಹಿಂದಿನ ಸಭೆಯಲ್ಲಿ ಸೂಚಿಸಿದಂತೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌- ರಾಜೀವ ಚೈತನ್ಯ ಯೋಜನೆ ಸೇರಿದಂತೆ ಮತ್ತಿತರ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿ ಸಿದ ಮಾಹಿತಿಯನ್ನೊಳಗೊಂಡ ಕೈಪಿಡಿಯನ್ನು ಸಭೆಯಲ್ಲಿರುವ ಎಲ್ಲ ಸದಸ್ಯರಿಗೆ ವಿತರಿಸಲಾಯಿತು. ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಸಿಇಒ ಡಾ| ಸೆಲ್ವಮಣಿ, ಸದದ್ಯರು ಹಾಗೂ ಜಿಲ್ಲಾಮಟ್ಟದ ಅ ಧಿಕಾರಿಗಳು ಹಾಜರಿದ್ದರು. ಜುಲೈನಲ್ಲಿ ಮಳೆ ಕೊರತೆ ಜುಲೈನಲ್ಲಿ ಮಳೆ ಕೊರತೆ ಜಿಲ್ಲೆಯಲ್ಲಿ ಜೂನ್‌ ತಿಂಗಳಲ್ಲಿ 122 ಮಿಮೀ ಮಳೆಯಾಗಬೇಕಿದ್ದು, 204 ಮಿಮೀ ನಷ್ಟು ಬಿದ್ದಿದೆ. ಜುಲೈನಲ್ಲಿ ಮಳೆ ಕೊರತೆಯಾಗಿದೆ. 3 ವಾರಗಳಿಂದ
ಒಣ ಹವೆ ಮುಂದುವರಿದಿದೆ. ಜಿಲ್ಲೆಯಲ್ಲಿ ಇದುವರೆಗೆ 3.05 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. 27ಸಾವಿರ ಹೆಕ್ಟೇರ್‌ನಲ್ಲಿ ಹೈಬ್ರಿಡ್‌ ಜೋಳ, 63 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ, 20 ಸಾವಿರ ಹೆಕ್ಟೇರ್‌ನಲ್ಲಿ ಉದ್ದು, 27 ಸಾವಿರ ಹೆಕ್ಟೇರ್‌ನಲ್ಲಿ ಹೆಸರು, 1.21 ಲಕ್ಷ ಹೆಕ್ಟೇರ್‌ನಲ್ಲಿ ಸೋಯಾಬಿನ್‌ ಬಿತ್ತನೆಯಾಗಿದೆ. 45 ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ, ಕಬ್ಬು, ಎಳ್ಳು ಸೇರಿದಂತೆ
ಇನ್ನಿತರ ಬೆಳೆಗಳ ಬೀಜ ಬಿತ್ತನೆಯಾಗಿದೆ. ಜಿಲ್ಲೆಗೆ ಈವರೆಗೆ 133 ಕೋಟಿ ರೂ.ನಷ್ಟು ಬೆಳೆವಿಮೆ ಸಿಕ್ಕಿದೆ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next