ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಹೆಸರುಗಳು ಬಹಳ ಹೊಸತಾಗಿರುತ್ತವೆ. ಅಂಕಿಅಂಶ, ದಾಖಲೆಗಳು, ಪರೀಕ್ಷಿಸಲ್ಪಟ್ಟ ವಿಚಾರಗಳನ್ನು ಆಧರಿಸಿದ ವಿಷಯವನ್ನು ವೈಜ್ಞಾನಿಕ ವಿಚಾರ ಎನ್ನುವುದು ವಾಡಿಕೆ.
ಈ ಭೂಮಿ ಮೇಲೆ ಮಾನವಲೋಕವು ಹೇಗೆ ಅಭಿವೃದ್ಧಿ ಹೊಂದಿತು ಎಂಬುದನ್ನು ಅಧ್ಯಯನ ಮಾಡುವ ಶಾಖೆಗೆ anthropology ಎನ್ನುತ್ತಾರೆ. ಇದರ ಮೂಲಪದ anthropos (mankind). logos ಎಂದರೆ ವಿಜ್ಞಾನ ಅಥವಾ ಅಧ್ಯಯನ. ಈ ಕ್ಷೇತ್ರದಲ್ಲಿ ಅಧ್ಯಯನ ಮಾಡುವವರು anthropologist.
ಭಾರತೀಯರಂತೆಯೇ ಗ್ರೀಕರಿಗೆ ಆಕಾಶ ಕಾಯಗಳ ಬಗ್ಗೆ ಬಹಳ ಕುತೂಹಲವಿತ್ತು. ನಕ್ಷತ್ರಕ್ಕೆ astron ಎನ್ನುತ್ತಿದ್ದರು. ಒಪ್ಪಓರಣವಾಗಿ ಶ್ರೇಣೀಕರಣ ಮಾಡುವ ಕೌಶಲವನ್ನು ಅವರು nomos ಎನ್ನುವುದು. ನಕ್ಷತ್ರ (ಆಕಾಶ ಕಾಯ)ಗಳನ್ನು ಶ್ರೇಣೀಕರಣ ಮಾಡಿ ಅಧ್ಯಯನ ನಡೆಸುವವರಿಗೆ astronomer ಎಂಬ ಹೆಸರು ಬಂತು. ಈ ಕ್ಷೇತ್ರದ ವೈಜ್ಞಾನಿಕ ಅಧ್ಯಯನಕ್ಕೆ astrology ಎಂಬ ಹೆಸರು. ಭೂಮಿಯ ಮೇಲೆ ನಕ್ಷತ್ರಗಳು ಬೀರುವ ಪರಿಣಾಮಗಳೇನು ಎಂಬ ಅಧ್ಯಯನ. ಅಂತಹ ಅಧ್ಯಯನ ನಡೆಸುವ ವ್ಯಕ್ತಿ astrology ಎಂದಾಯಿತು ಅಲ್ಲವೇ.
astronaut ಎಂಬ ಪದದ ಅರ್ಥ ಕಂಡುಹಿಡಿಯುವುದು ಈಗ ಸುಲಭವಾದೀತು. ಗ್ರೀಕರಿಗೆ ಸಮುದ್ರಯಾನವೂ ಅಷ್ಟೇ ಪ್ರಿಯ. ಸಮುದ್ರ ಪ್ರಯಾಣಕ್ಕೆ ದಿಕ್ಕು ತೋರಿಸುವುದು ಈ ನಕ್ಷತ್ರಗಳೇ ತಾನೆ. ಅದರಲ್ಲಿಯೂ ಧ್ರುವನಕ್ಷತ್ರವೆಂದರೆ ಸಮುದ್ರಯಾನಿಗಳ ಮಾರ್ಗದರ್ಶಕನೇ ಸರಿ. naut ಎಂದರೆ ನಾವಿಕ. ಯಾಕೆಂದರೆ ಗ್ರೀಕ್ ಭಾಷೆಯಲ್ಲಿ naus ಎಂದರೆ ಹಡಗು. ಇದೇ ಪದವನ್ನಾಧರಿಸಿ nautical ಎಂಬ ಪದ ಸೃಷ್ಟಿಯಾಗಿದೆ. ಸಮುದ್ರ ಪ್ರಯಾಣ ದೂರವನ್ನು ಲೆಕ್ಕ ಹಾಕುವುದು ನಾಟಿಕಲ್ ಮೈಲಿ ಎಂಬುದಾಗಿ.
ಆಕಾಶಕಾಯಕ್ಕೂ ಸಮುದ್ರಕ್ಕೂ ಇರುವ ಈ ನಂಟನ್ನು ಅನುಸರಿಸಿದರೆ ಇನ್ನಷ್ಟು ಪದಗಳು ಹೊಳೆಯುತ್ತವೆ.
ಸ್ವಯಂಪ್ರಭಾ ಕೆ.