Advertisement

ಇಂಗ್ಲಿಷ್‌ ಪದಕತೆ: ಆಲ್ಟರ್‌

09:53 AM Mar 07, 2020 | mahesh |

ಈಗೋ ego ಎಂಬ ಪದವು ಲ್ಯಾಟಿನ್‌ ಮೂಲದಿಂದ ಬಂದಿದೆ. egoist ಅಥವಾ ಅಹಂಭಾವಿಯೊಬ್ಬನ ಮನಸ್ಸಿನಲ್ಲಿ ತನ್ನ ವಿಚಾರಕ್ಕೇ ಹೆಚ್ಚು ಮಹತ್ವ. ಎಲ್ಲ ವಿಚಾರಗಳೂ ತನ್ನೊಬ್ಬನನ್ನೇ ಕೇಂದ್ರೀಕರಿಸಿದಂತೆ ಮಾತನಾಡುವ ಸ್ವಭಾವ ಇರುವ ವ್ಯಕ್ತಿಯನ್ನು ಇನ್ನಷ್ಟು ಸ್ಪಷ್ಟವಾಗಿ ಉಲ್ಲೇಖೀಸಲು egocentric (ಸ್ವಕೇಂದ್ರಿತ) ಎಂದು ಬಳಸಬಹುದು. ಇದು ಈಗೋಯಿಸ್ಟ್‌ ಎಂಬ ಪದಕ್ಕಿಂತಲೂ ಹೆಚ್ಚು ತೀವ್ರತೆಯನ್ನು ಉಲ್ಲೇಖೀಸುತ್ತದೆ. ಹಾಗಂತ ಸ್ವಾರ್ಥಕ್ಕೆ ಇತಿಮಿತಿ ಎಲ್ಲಿದೆ ಹೇಳಿ. ಅತಿಯಾದ ಸ್ವಾರ್ಥ ಇರುವ ವ್ಯಕ್ತಿಯನ್ನು ಅವನೊಬ್ಬ egomaniac (ಮಹಾದುರಹಂಕಾರಿ) ಎಂದು ಬೈಯ್ಯುವುದುಂಟು. ಆಡುಮಾತಿನಲ್ಲಿ “ಹುಚ್ಚು ಸ್ವಾರ್ಥಿ’ ಅಂತ ಬೈಯ್ಯುತ್ತಾರೆ. ಛಿಜಟಜಿsಠಿ ವ್ಯಕ್ತಿಯನ್ನು ನೋಡುವಾಗ ಜಿಗುಪ್ಸೆ ಹುಟ್ಟಬಹುದು. ಆದರೆ egocentric ನನ್ನು ಸಹಿಸಿಕೊಳ್ಳುವುದೇ ಕಷ್ಟ. ಅವೆಲ್ಲ ಹಾಗಿರಲಿ. egomaniacನಂತೂ ಭಾರೀ ಡೇಂಜರ್‌ ಮನುಷ್ಯನೇ ಸರಿ. ಅವನ ನಿರ್ಧಾರಗಳಲ್ಲಿ ಕೊಂಚ ಹುಚ್ಚುತನವೇ ಸೇರಿರುತ್ತದೆ. ಇತರರಿಗೆ ಆತ ಅಪಾಯಕಾರಿ.

Advertisement

“ನಾನು ಡ್ರೆಸ್‌ ಆಲ್ಟರ್‌ ಮಾಡಬೇಕು’ ಎಂದು ಮಕ್ಕಳು ಹೇಳುವುದನ್ನು ಕೇಳಿಯೇ ಇರುತ್ತೀರಿ. ಇದೊಂದು ಸಾಮಾನ್ಯವಾಗಿ ಬಳಸುವ ವಾಕ್ಯ. alter ಎಂಬುದೂ ಲ್ಯಾಟಿನ್‌ ಪದವೇ. ಆದ್ದರಿಂದಲೇ altruist ಎಂದರೆ ಇತರರಿಗಾಗಿ ಯೋಚನೆ ಮಾಡುವವನು. alter ಎಂಬುದಕ್ಕೆ ಇಂಗ್ಲಿಷ್‌ನಲ್ಲಿ otherr ಎಂಬುದು ಸಮಾನಾರ್ಥ ಪದ. others ಎಂದರೆ ಇತರರು ಎಂದರ್ಥ ತಾನೇ.

ಒಂದನ್ನು ಬಿಟ್ಟು ಇನ್ನೊಂದನ್ನು ಆಯ್ಕೆ ಮಾಡುವುದು ಎಂದರೆ ಅದನ್ನು alternate (ಒಂದಾದ ಮೇಲೊಂದು)ಎಂದೆನ್ನಬಹುದು. “ಪ್ರತೀ ತಿಂಗಳ ಒಂದು ಶುಕ್ರವಾರ ಬಿಟ್ಟು ಮತ್ತೂಂದು ಶುಕ್ರವಾರ ಬತೇìನೆ’ ಎನ್ನುವುದಕ್ಕೆ alternate ಶುಕ್ರವಾರಗಳಲ್ಲಿ ಬರುತ್ತೇನೆ ಎಂದು ಚಿಕ್ಕದಾಗಿ ಹೇಳುವುದಿಲ್ಲವೇ ಹಾಗೆ. ಇನ್ನೊಬ್ಬರ ವಾದವನ್ನು ಒಪ್ಪದೇ ಭಾರೀ ದೊಡ್ಡ ಜಗಳವಾದಾಗ ಅದು altercation (ವಾಗ್ವಾದ).

ಈಗ alter ego ಎಂಬ ಪದದ ಬಗ್ಗೆ ಯೋಚಿಸಿದಾಗ ಸುಲಭವಾಗಿ ಅರ್ಥ ಹೊಳೆಯಬಹುದು. ಇಬ್ಬರು ವ್ಯಕ್ತಿಗಳು ಒಂದೇ ರೀತಿ ಯೋಚಿಸುತ್ತ, ಸ್ನೇಹಶೀಲರಾಗಿದ್ದರೆ, “ಅವನು ನನ್ನ alter ego (ಬದಲಿ ಪ್ರಾಣ)ಇದ್ದ ಹಾಗೆ ಮಾರಾಯ’ ಎಂದು ಪರಸ್ಪರರನ್ನು ಪ್ರೀತಿಯಿಂದ ಬಣ್ಣಿಸಿಕೊಳ್ಳುವುದುಂಟು.
ಹಾಗಾದರೆ ಇಂಟ್ರೋವರ್ಟ್‌, ಎಕ್ಸ್‌ಟ್ರೋವರ್ಟ್‌ ಆಂಬಿವರ್ಟ್‌ ಎಂಬ ಪದಗಳಲ್ಲಿ ಪದೇ ಪದೇ vert ಎಂದು ಅಂತ್ಯವಾಗುತ್ತವಲ್ಲ. vert ಎಂದರೇನು ಹಾಗಾದರೆ? ಇದರ ಸುತ್ತ ಇನ್ನೆಷ್ಟು ಪದಗಳು ಇವೆ?
ಮುಂದಿನ ವಾರ ಸಿಗುವ.

ಸ್ವಯಂಪ್ರಭಾ ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next