Advertisement

ಇಂಗ್ಲಿಷ್‌ ಟೀಚರ್‌

12:29 PM Oct 10, 2017 | |

ಪರಭಾಷೆಯನ್ನು ಪಾಸು ಮಾಡಲೇ ಬೇಕಾದ ಒತ್ತಡ, ಅನಿವಾರ್ಯತೆಯಲ್ಲಿರೋ ವಿದ್ಯಾರ್ಥಿನಿಯರ ಕಷ್ಟದ ಮಾದರಿಗಳು ಇಲ್ಲಿವೆ. ಇಂಗ್ಲಿಷ್‌ ಕ್ಲಾಸಿನಲ್ಲಿ ಏನೇನಾಗುತ್ತೆ? ಇಂಗ್ಲಿಷ್‌ ಅಂದ್ರೆ ಕಬ್ಬಿಣದ ಕಡಲೆ ಎನ್ನುವ ವಿದ್ಯಾರ್ಥಿಗಳ ಪಡಿಪಾಟಲು ಹೇಗಿರುತ್ತೆ? ಅಂಥ ಮಜಾ ಪ್ರಸಂಗಗಳನ್ನು ಇಲ್ಲಿ ಇಂಗ್ಲಿಷ್‌ ಟೀಚರ್ರೇ ಹೇಳಿದ್ದಾರೆ ಕೇಳಿ…

Advertisement

ನಾನು ಹಳ್ಳಿಯ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಸೇರಿದ ಹೊಸತು. ಉತ್ಸಾಹದಲ್ಲಿ ಇಡೀ ರಾತ್ರಿ ಕನ್ನಡಿಯೆದುರು ನಿಂತು ಪಾಠ ಮಾಡಿ, ಪ್ರಾಕ್ಟಿಸ್‌ ಮಾಡಿಕೊಳ್ಳುತ್ತಿದ್ದೆ. ಒಂದೊಂದು ಕ್ಲಾಸು ಮುಗಿಸಿ ಬಂದಾಗಲೂ ಅದ್ಭುತವಾಗಿ ಪಾಠ ಮಾಡಿದೆ ಎನ್ನುವ ಹೆಮ್ಮೆಯಲ್ಲಿ ಸ್ಟಾಫ್ ರೂಮಿಗೆ ಬಂದು ಕೂರುತ್ತಿದ್ದೆ. ಹೀಗೇ ಹತ್ತು ಹದಿನೈದು ದಿನಗಳು ಕಳೆದಿರಬೇಕು. ಒಂದು ದಿನ ಸಂಜೆ ಇಬ್ಬರು ವಿದ್ಯಾರ್ಥಿನಿಯರು, “ಮೇ ಐ ಕಮಿನ್‌ ಮಯಾಮ್‌?’ ಅಂದರು. “ಏನಮ್ಮಾ?’ ಅಂದೆ. “ಡೌಟ್‌ ಮಯಾಮ್‌’ ಅಂದಳು ಒಬ್ಬಳು. “ಯು ಡೌಟ್‌ ವಾಟ್‌?’ ಅಂದೆ ಹುಬ್ಬೇರಿಸಿ. “ಡೌಟ್‌ ಯು ಮಯಾಮ್‌’ ಅಂದಳು. 

ಯೂನಿವರ್ಸಿಟಿಯಲ್ಲಿ ಓದಿ ಬಂದ ನನ್ನನ್ನು ಕಾಲೇಜು ಕಲಿಯಲು ಬಂದ ಬಾಲೆ ಅನುಮಾನಿಸುತ್ತಾಳೆಂದರೆ… ಕ್ಲಾಸಿನಲ್ಲಿ ನಾನೇನಾದರೂ ವ್ಯಾಕರಣ ತಪ್ಪು ಮಾತಾಡಿದೆನಾ ಅಂತ ಯೋಚಿಸುತ್ತಾ ನಿಂತೆ.  “ಕನ್ನಡ ಟಾಕಿಂಗ್‌ ಮಯಾಮ್‌’ ಅಂದವಳೇ ಒಬ್ಬ ವಿದ್ಯಾರ್ಥಿನಿ, “ನೀವು ಕ್ಲಾಸಿನಲ್ಲಿ ಪೂರ್ತಿ ಇಂಗ್ಲಿಷಿನಲ್ಲೇ ಮಾತಾಡ್ತೀರ. ನಮ ಗೆ ಏನೂ ಅರ್ಥ ಆಗಲ್ಲ. ನಾವು ಕನ್ನಡ ಮೀಡಿಯಂ ಓದಿದ್ದು ಮಯಾಮ್‌’.

“ಅಂದರೆ, ಇಷ್ಟು ದಿನ ಪಾಠ ಮಾಡಿದ್ದೆಲ್ಲ?..’ ನನಗೆ ವಿಪರೀತ ಬೇಸರವಾಯಿತು. ಇಂ ಗ್ಲಿಷನ್ನು ಕನ್ನಡದಲ್ಲಿ ಪಾಠ ಮಾಡಿ ಮಯಾಮ್‌’ ಅಂದರು. “ಆವಾಗಿಂದ ಮಯಾಮ್‌, ಮಯಾಮ್‌ ಅಂತಿದ್ದೀರ. ಅದು ಮ್ಯಾಮ್‌ ಅಂತ. ಹೇಳಿ ಒಮ್ಮೆ’ ಎಂದೆ. “ಮ್ಯಾಮ್‌ ಅನ್ನೋಕೆ ನಾಚಿಕೆ ಆಯ್ತದೆ ಮಯಾಮ್‌’ ಅಂತ ನಿಜವಾಗಿಯೂ ಒಬ್ಬಳು ನಾಚಿಕೊಂಡಳು.  “ಸರಿ, ನಿಧಾನವಾಗಿ ಕಲಿತುಕೊಳ್ಳಿ ಪರವಾಗಿಲ್ಲ’ ಅಂದೆ ತಲೆಬಿಸಿಯಿಂದ.   “ಟ್ಯಾಂಕ್ಯೂ ಮಯಾಮ್‌’ ಅಂತ ಮುಗ್ಧ ಖುಷಿ ವ್ಯಕ್ತಪಡಿಸಿ ಹೊರಟರು. ಹಳ್ಳಿಮಕ್ಕಳ ಮನಸ್ಸಿನ ಭಾಷೆ ಅರ್ಥಮಾಡಿಕೊಳ್ಳದ ಬಗ್ಗೆ ಖೇದವೆನ್ನಿಸಿತು.

ಒಮ್ಮೆ ಕ್ಲಾಸಿನಲ್ಲಿ ಪಾಠ ಮಾಡುವಾಗ ಹುಡುಗಿಯೊಬ್ಬಳು ಎದ್ದು ನಿಂತು. “ಮೇಮ್‌, ನಾನು ಇಂಗ್ಲಿಷ್‌ ಬುಕ್‌ ಓದುವಾಗ ಮಧ್ಯ ಮಧ್ಯದಲ್ಲಿ “ಫ‌**’ ಎನ್ನುವ ಪದ ಬರುತ್ತದೆ. ಅದಕ್ಕೆ ಅರ್ಥ ಏನು ಮೇಮ್‌ ?’ ಅಂದಳು. ಅವಳಿಗೆ ತಾನು ಇಂಗ್ಲಿಷ್‌ ಬುಕ್‌ ಓದುತ್ತೇನೆ ಅಂತ ಹೇಳಿಕೊಳ್ಳುವ ಆಸೆ. ಹುಡುಗರೆಲ್ಲಾ “ಓಹೋ’ ಅಂತ ಕಿರುಚಿಕೊಂಡು, ಒದ್ದಾಡಿ ಬಿದ್ದಾಡಿ ನಗಾಡಿದರು!

Advertisement

ನಾನು ಎಲ್ಲರನ್ನೂ ಕಂಟ್ರೋಲಿಗೆ ತಂದುಕೊಳ್ಳುತ್ತಾ “ಡಿಕ್ಷನರಿ ಇದ್ದರೆ ಅದರಲ್ಲಿ ಮೀನಿಂಗ್‌ ನೋಡಮ್ಮಾ. ಈ ಥರ ಡೌಟ್ಸ್‌ ಬಂದರೆ ನನ್ನ ಸ್ಟಾಫ್ ರೂಮಿಗೆ ಬಂದು ಕೇಳು. ಕ್ಲಾಸ್‌ಗೆ ಡಿಸ್ಟರ್ಬ್ ಆಗೋದು ಬೇಡ’ ಅಂದೆ, ಗಂಭೀರವಾಗಿ. ಕಡೆಗೂ ಆ ಹುಡುಗಿಗೆ ತಾನೇನು ಕೇಳಬಾರದ್ದು ಕೇಳಿದೆ ಎಂಬುದು ಗೊತ್ತಾಗಲೇ ಇಲ್ಲ!

ಇಬ್ಬರು ಹುಡುಗಿಯರು ಅದೇನೋ ಜಗಳ ಮಾಡಿಕೊಂಡು ನನ್ನ ಬಳಿ ಬಂದರು. “ಮೇಮ್‌, ಶಿಲೈಡ್‌ ವಿಥ್‌ ಮಿಯೆಸ್ಟರ್‌ ಡೇ’ ಅಂದಳು. ನಾನು ನಗೆ ಹತ್ತಿಕ್ಕಿಕೊಂಡು ಕೇಳಿದೆ. “ಯಾಕಮ್ಮಾ, ನೀನು ನಿನ್ನೆ ರಾತ್ರಿ ಅವಳ ಜೊತೆ ಮಲಗಿಕೊಂಡೆ?’ ಅಂದೆ. “ ಶ್ಶೀ, ಮೇಮ್‌. ಇವಳ ಜೊತೆ ಯಾರು ಮಲ ಗ್ತಾರೆ. ನಂಗೆ ಸುಳ್ಳು ಹೇಳಿದಳು. ಎ ಷ್ಟ್ ಸು ಳ್‌ ಹೇಳ್ತಾಳೆ ಗೊತ್ತಾ? ’ ಅಂದಳು. “ಸುಳ್ಳು ಹೇಳಿದಳು ಅಂತ ಹೇಳ್ಳೋಕೆ ಲೈಡ್‌ ಟು ಮಿ ಅಂತ ಹೇಳಬೇಕು. ಲೈಡ್‌ ವಿಥ್‌ ಮಿ ಅಲ್ಲ’ ಅಂದೆ!

“ಸ್ವಂತ ಪರಿಚಯ ಮಾಡಿಕೊಳ್ಳಿ’ ಎನ್ನುವ ಪ್ರಶೆಗೆ ಒಬ್ಬ ವಿದ್ಯಾರ್ಥಿನಿಯ ಉತ್ತರ. “ಅಡ್ಮಿಟೆಡ್‌ ಕಾಲೇಜ್‌. ಮೈ ಮದರ್‌ ಅಂಡ್‌ ಫಾದರ್‌ ಬಿಕೇಮ್‌ ಅಡ್ಮಿಟೆಡ್‌ ಟು ಮಿ. ಸೇಮ್‌ ಡೇ. ಆಲ್‌ ಆಮ್‌ ವಾಸ್‌ ಹ್ಯಾಪಿ. ಐ ವೆಂಟ್‌ ಬಿಕೇಮ್‌ ಐಪಿಎಸ್‌ ಆಫೀಸ್‌. ಮೈ ಸಿಸ್ಟರ್‌ ವಾಸ್‌ ಸ್ಟಾಂಡಿಂಗ್‌ ವಿಲೇಜ್‌. ಮೈ ಅದರ್‌ ಸಿಸ್ಟರ್‌ ಸ್ಟಾಂಡಿಂಗ್‌ ಅದರ್‌ ವಿಲೇಜ್‌. ಐ ಸ್ಟಾಂಡ್‌ ಹಾಸ್ಟೆಲ್‌. ಐ ಮಿಸೆಸ್‌ ಹೋಮ್‌. ಐ ಮಿಸೆಸ್‌ ಮದರ್‌ ಆಲ್ಸೊà’. (ನಾನು ಕಾಲೇಜನ್ನು ಅಡ್ಮಿಟ್‌ ಮಾಡಿದೆ. ನನಗೆ ನನ್ನ ಅಪ್ಪ ಅಮ್ಮ ಅಡ್ಮಿಟ್‌ ಆದರು. ಒಂದೇ ದಿನ. ನಾನು ಐಪಿಎಸ್‌ ಆಫೀಸ್‌ ಆದೆ. ನನ್ನ ಅಕ್ಕ ನಿಲ್ಲುವ ಹಳ್ಳಿಯಾದಳು. ನನ್ನ ಇನ್ನೊಬ್ಬ ಅಕ್ಕ ಇನ್ನೊಂದು ನಿಲ್ಲುವ ಹಳ್ಳಿಯಾದಳು. ನಾನು ಹಾಸ್ಟೆಲ್‌ ನಿಂತೆ. ನಾನು ಮನೆಯ ಮಿಸೆಸ್‌. ನಾನು ನಮ್ಮ ಅಮ್ಮನ ಮಿಸೆಸ್‌ ಸಹ!) 

ಬರೆಯುತ್ತಾ ಹೋದರೆ ಇಂಥ ಹತ್ತು ಹಲವು ಹಾಸ್ಯ ಪ್ರಸಂಗಗಳಿವೆ. ಜೊತೆಗೇ ಹೊರೆಯಾಗುವ ಒಂದು ಪರಭಾಷೆಯನ್ನು ಪಾಸು ಮಾಡಲೇಬೇಕಾದ ಒತ್ತಡ, ಅನಿವಾರ್ಯತೆಯಲ್ಲಿರುವ ವಿದ್ಯಾರ್ಥಿನಿಯರ ಕಷ್ಟವೂ ಅರ್ಥವಾಗುತ್ತದೆ. ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಪೂರ್ತಿ ಸರಿಯಾದ ಉತ್ತರಗಳನ್ನು ಬರೆದಿದ್ದ. ಕನ್ನಡವನ್ನು ಇಂಗ್ಲಿಷ್‌ ಸ್ಪೆಲ್ಲಿಂಗ್‌ನಲ್ಲಿ ಬರೆದಿದ್ದ. ಮಾ ರ್ಕ್ಸ್   ಕೊ ಟ್ಟಿದ್ದರೆ ಆ ವಿ ದ್ಯಾರ್ಥಿಗೆ 60-70 ಬರಬಹುದಿತ್ತು. ಬೋರ್ಡ್‌ ಚೇರ್‌ಮನ್‌ ಬಳಿ “ಪಾಸು ಮಾಡಬಹುದೇ? ಈ ವಿದ್ಯಾರ್ಥಿಯ ಎಲ್ಲಾ ಉತ್ತರಗಳು ಸರಿಯಿವೆ. ಬಹುಶಃ ಇಂಗ್ಲಿಷ್‌ ಒಂದೇ ತೊಡಕು’ ಎಂದೆ. “ಸಾಧ್ಯವಿಲ್ಲ. ಪರೀಕ್ಷೆ ಮಾಡುತ್ತಿರುವುದೇ ಇಂಗ್ಲಿಷ್‌ ಭಾಷೆಯ ಬಗ್ಗೆ ಅಲ್ಲವೇ?’ ಅಂತ ಕೇಳಿ ದ ರು. ಒಲ್ಲದ ಮನಸ್ಸಿನಿಂದ ಫೇಲ್‌ ಮಾಡಬೇಕಾಯಿತು. 

ಕಲಿಕೆ, ಭಾಷೆ, ನಾವು ನಿಜಕ್ಕೂ ಕಲಿಯಬೇಕಿರುವುದು ಏನನ್ನು ಎಂಬ ಪ್ರಶ್ನೆಗಳು ಬಹಳ ಆಳವಾದವು ಎಂಬುದಷ್ಟೇ ಮನವರಿಕೆಯಾದ ವಿಷಯ.

ಸುನೀತಾ ಎಚ್‌.ಡಿ.

Advertisement

Udayavani is now on Telegram. Click here to join our channel and stay updated with the latest news.

Next