Advertisement
ಉಳಿದ ಎರಡು ಹಾಡುಗಳ ಶೂಟಿಂಗ್ ಬಾಕಿ ಇತ್ತು. ಸಿನೆಮಾದ ಎಡಿಟಿಂಗ್ ಕೂಡ ಈಗಾಗಲೇ ಪೂರ್ಣವಾಗಿದೆ. ಬಾಕಿ ಉಳಿದ ಎರಡು ಹಾಡುಗಳನ್ನು ಅದ್ಧೂರಿಯಾಗಿ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ.
“ಪಿಲಿಬೈಲ್ ಯಮುನಕ್ಕ’, “ಅಮ್ಮೆರ್ ಪೊಲೀಸಾ’ ಹಿಟ್ ಆದ ಬಳಿಕ ಈಗ ನಾಲ್ಕನೇ ಸಿನೆಮಾವಾಗಿ “ಇಂಗ್ಲಿಷ್’ ಮಾಡುತ್ತಿದ್ದಾರೆ. ಖ್ಯಾತ ಉದ್ಯಮಿ, “ಮಾರ್ಚ್ 22′, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಕನ್ನಡ ಸಿನೆಮಾ ನಿರ್ಮಿಸಿದ ಹರೀಶ್ ಶೇರಿಗಾರ್ ನಿರ್ಮಾಣದಲ್ಲಿ “ಇಂಗ್ಲಿಷ್’ ರೆಡಿಯಾಗುತ್ತಿದೆ. ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್, ಸಂದೀಪ್ ಶೆಟ್ಟಿ, ಪ್ರಸನ್ನ ಬೈಲೂರು ಸಹಿತ ತುಳುನಾಡಿನ ಸ್ಟಾರ್ ಕಲಾವಿದರನ್ನು ಇಟ್ಟುಕೊಂಡು ಮಾಡಿರುವ ಸಿನೆಮಾ ಇದಾಗಿರುವುದರಿಂದ ಇಲ್ಲಿ ನಿರೀಕ್ಷೆ ಬಹಳಷ್ಟಿದೆ.
Related Articles
Advertisement