Advertisement

ಆಂಗ್ಲ ಭಾಷೆ ಅಗತ್ಯ, ಕನ್ನಡಕ್ಕೆ ಆದ್ಯತೆ

10:58 PM Jul 02, 2019 | Team Udayavani |

ಆಲಂಕಾರು: ಪ್ರಸಕ್ತ ಕಾಲ ಘಟ್ಟದಲ್ಲಿ ಆಂಗ್ಲಭಾಷೆಯನ್ನು ವ್ಯವಹಾರಕ್ಕಾಗಿ ಅಭ್ಯಸಿಸುವ ಅಗತ್ಯವಿದೆ. ಆದರೆ ಆಂಗ್ಲಭಾಷಾ ವ್ಯಾಮೋಹದ ಧಾವಂತದಲ್ಲಿ ಕನ್ನಡಭಾಷೆಗೆ ಆದ್ಯತೆ ಕಡಿಮೆ ಆಗಬಾರದು ಎಂದು ಸುಳ್ಯ ಶಾಸಕ ಎಸ್‌. ಅಂಗಾರ ಹೇಳಿದರು.

Advertisement

ಕಡಬ ತಾಲೂಕು ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಒಂದನೇ ತರಗತಿಯ ಆಂಗ್ಲ ಮಾಧ್ಯಮ ವಿಭಾಗ ಮತ್ತು ಸ್ಮಾಟ್ ಕ್ಲಾಸ್‌ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಮಕ್ಕಳು ಆಂಗ್ಲ ಭಾಷಾ ಶಿಕ್ಷಣ ಪಡೆಯಬೇಕೆನ್ನುವ ಹಂಬಲ ಹೆತ್ತವರಲ್ಲಿ ರುತ್ತದೆ. ಸರಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಣ ದೊರೆಯುವುದರಿಂದ ಬಡ ಮಕ್ಕಳು ಭಾಷೆಯನ್ನು ಕಲಿಯುವಂತಾಗಿದೆ. ಆಂಗ್ಲ ಭಾಷೆಗೆ ನೀಡುವ ಪ್ರಾಮುಖ್ಯದ ನಡುವೆ ವಿಶಿಷ್ಟ ಸಂಸ್ಕೃತಿ ಹೊಂದಿರುವ ಮಾತೃಭಾಷೆಗೂ ಆದ್ಯತೆ ನೀಡಬೇಕು. ನಮ್ಮ ಆಡಳಿತ ಸರಕಾರಗಳು ಬದಲಾದಂತೆ ತಮಗಿಷ್ಟದಂತೆ ಶಿಕ್ಷಣ ವ್ಯವಸ್ಥೆಗಳನ್ನು ರೂಪಿಸಿದ್ದರಿಂದ ಶಿಕ್ಷಣ ನೀತಿ ಗೊಂದಲಮಯವಾಗಿದೆ. ಸರಕಾರಗಳ ಧೋರಣೆಯಿಂದ ಸರಕಾರಿ ಶಾಲೆಗಳು ಮುಚ್ಚುವಂತಾಗಿದೆ. ಆ ಶಾಲೆಗಳನ್ನು ಪುನಶ್ಚೇತನಗೊಳಿಸಲು ಆಂಗ್ಲ ಮಾಧ್ಯಮ ತರಗತಿಗಳು ಆರಂಭದ ಜತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಹೊಣೆಗಾರಿಗೆ ಸರಕಾರದ ಮೇಲಿದೆ ಎಂದರು.

ಅಧಿಕಾರಿಗಳೇ ಕಾರಣ
ಸರಕಾರಿ ಯೋಜನೆಗಳನ್ನು ಅನು ಷ್ಠಾನ ಮಾಡುವಲ್ಲಿ ಅಧಿಕಾರಿಗಳ ಪ್ರಮುಖ ಪಾತ್ರವಿರುತ್ತದೆ. ಅವರು ಜವಾಬ್ದಾರಿ ಮರೆತರೆ ಯೋಜನೆಗಳು ಅಪೂರ್ಣವಾಗುತ್ತವೆ. ಇದಕ್ಕೆ ಉದಾಹಣೆ ಎಂಬಂತೆ, ಸರಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಕಲಿಕಾ ಯೋಜನೆಯಲ್ಲಿ ಕಡಬ ಸರಕಾರಿ ಮಾದರಿ ಶಾಲೆ ಸೇರ್ಪಡೆ ಗೊಂಡಿತ್ತು. ಯೋಜನೆಯನ್ನು ಅನುಷ್ಠಾನ ಗೊಳಿಸುವಲ್ಲಿ ಶಿಕ್ಷಕರು, ಮೇಲಧಿಕಾರಿಗಳು ಆಸಕ್ತಿ ತೋರದ ಕಾರಣ ಆಂಗ್ಲ ಭಾಷೆ ಶಿಕ್ಷಣ ವ್ಯವಸ್ಥೆ ಕೈತಪ್ಪಿದೆ.

ಆಲಂಕಾರು ಶಾಲೆಯಲ್ಲಿ ಐದು ಕೊಠಡಿಗಳ ಕೊರತೆಯಿದೆ. 248 ವಿದ್ಯಾರ್ಥಿಗಳು ಇದ್ದರೂ ಇಲ್ಲಿ ವಿಷಯ ತಜ್ಞ ಶಿಕ್ಷಕರಿಲ್ಲದೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಅಸಾಧ್ಯವಾಗಿದೆ. ಇದೀಗ ಕರ್ತವ್ಯ ನಿರ್ವಹಿಸುತ್ತಿರುವರೆಲ್ಲ ಕನ್ನಡ ಭಾಷಾ ಶಿಕ್ಷಕರಾಗಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಆಡಳಿತ ಉಪ ನಿರ್ದೇಶಕರಿಗೆ ಬರೆಯಲು ವಿದ್ಯಾರ್ಥಿಗಳ ಹೆತ್ತವರು ಆಗ್ರಹಿಸಿದರು. ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಶಿಕ್ಷಕ ಕೆ.ಪಿ. ನಿಂಗರಾಜು ಮನವಿ ಮಾಡಿದರು. ಶಾಲೆ ಈ ವರ್ಷ ಶತಮಾನೋತ್ಸವ ಸಂಭ್ರದಲ್ಲಿದ್ದು, 1.45 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಆಚರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

Advertisement

ಶಾಲೆಗೆ ಸೌಲಭ್ಯ ಒದಗಿಸಿ

Udayavani is now on Telegram. Click here to join our channel and stay updated with the latest news.

Next