Advertisement

ಆಂಗ್ಲ ವ್ಯಾಮೋಹ ಕಾಯಿಲೆ

06:00 AM Sep 29, 2018 | Team Udayavani |

ಪಣಜಿ: “ಇಂಗ್ಲೀಷ್‌ ಭಾಷಾ ವ್ಯಾಮೋಹ’ ಒಂದು ಕಾಯಿಲೆಯಿದ್ದಂತೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ. ಎನ್‌ಐಟಿ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, “”ಇದೇ ತಿಂಗಳ ಆರಂಭದಲ್ಲಿ ನಾನು ಭಾಗವಹಿಸಿದ್ದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಇಂಗ್ಲೀಷ್‌ ಭಾಷೆ ಒಂದು ರೋಗವೆಂದು ನಾನು ಹೇಳಿದ್ದಾಗಿ ಕೆಲ ಮಾಧ್ಯಮಗಳು ಹೇಳಿವೆ. ಆದರೆ, ನಾನು ಇಂಗ್ಲೀಷ್‌ ವ್ಯಾಮೋಹ ಒಂದು ರೋಗ ಎಂದು ಹೇಳಿದ್ದೆನಷ್ಟೇ ಎಂದರು. ಈಗಲೂ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಇಂಗ್ಲೀಷ್‌ ವ್ಯಾಮೋಹ ಬಿಟ್ಟು ನಾವು ಶ್ರೀಮಂತ ಸಂಸ್ಕೃತಿಯನ್ನು ಗೌರವಿಸಬೇಕಿದೆ ಹಾಗೂ ಮಾತೃಭಾಷೆಗಳನ್ನು ಬೆಳೆಸಬೇಕಿದೆ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next