Advertisement
ಸರಕಾರಿ ಶಾಲೆಗಳಲ್ಲಿ ಪರಿಣಾಮಕಾರಿ ಶಿಕ್ಷಣ ಸಿಗಬೇಕು ಮತ್ತು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ನಿಟ್ಟಿನಲ್ಲಿ ರಾಜ್ಯ ಸರಕಾರವು 2019-20ನೇ ಸಾಲಿನಲ್ಲಿ ರಾಜ್ಯದ ಆಯ್ದ 1,000 ಶಾಲೆಗಳ 1ನೇ ತರಗತಿಗೆ ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಮಕ್ಕಳ ಸಂಖ್ಯೆಯನ್ನು 30ಕ್ಕೆ ನಿಗದಿಗೊಳಿಸಿದ ಹಿನ್ನೆಲೆಯಲ್ಲಿ ಆಂಗ್ಲ ಶಿಕ್ಷಣ ಅರಸಿ ಬಂದ ಬಹುತೇಕ ಹೆತ್ತವರಿಗೆ ನಿರಾಶೆಯಾಗಿತ್ತು. ಇದಕ್ಕಾಗಿ ಅದೇ ಶಾಲೆಗಳಲ್ಲಿ ನಲಿಕಲಿ ಶಿಕ್ಷಣದಲ್ಲಿಯೂ ಆಂಗ್ಲ ಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಇತರ ಶಾಲೆಗಳಲ್ಲಿಯೂ ಆಂಗ್ಲ ಶಿಕ್ಷಣ ಆರಂಭವಾಗಬಹುದು ಎಂದು ಪೋಷಕರೂ ಭಾವಿಸಿದ್ದರು. ಆದರೆ ಅಂತಹ ಯಾವುದೇ ನಿರ್ಧಾರವನ್ನು ಸರಕಾರ ಮಾಡಿಲ್ಲ.
– ಎಸ್. ಸುರೇಶ್ ಕುಮಾರ್, ಶಿಕ್ಷಣ ಸಚಿವ