Advertisement
ಶಾಲೆಯಲ್ಲಿ ಕಳೆದ ವರ್ಷ 110 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, 39 ವಿದ್ಯಾರ್ಥಿಗಳು 1ನೇ ತರಗತಿಗೆ ಸೇರ್ಪಡೆಗೊಂಡಿದ್ದರು. ಈ ಬಾರಿ ಶಾಲೆಯ ಶೇ. 50 ಕ್ಕಿಂತಲೂ ಹೆಚ್ಚು ಅಂದರೆ ಬರೋಬ್ಬರಿ 63 ವಿದ್ಯಾರ್ಥಿ ಗಳು 1ನೇ ತರಗತಿಗೆ ಸೇರ್ಪಡೆಗೊಂಡಿದ್ದಾರೆ. ಆಂಗ್ಲ ಮಾಧ್ಯಮ ಶಿಕ್ಷಣದಿಂದ ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
ಉತ್ತಮ ಮೂಲ ಸೌಕರ್ಯ
ಆಂಗ್ಲ ಮಾಧ್ಯಮ ಶಿಕ್ಷಣ ಹಿನ್ನೆಲೆಯಲ್ಲಿ ಶಾಲೆಯ ಒಬ್ಬ ಶಿಕ್ಷಕರಿಗೆ ತರಬೇತಿ ನಡೆದಿದ್ದು, ಒಟ್ಟು 5 ಮಂದಿ ಶಿಕ್ಷಕರು ಬೋಧನೆ ನಡೆಸುತ್ತಿದ್ದಾರೆ. ಮೂಲ ಸೌಕರ್ಯ ಉತ್ತಮ ಸ್ಥಿತಿಯಲ್ಲಿದ್ದು, ಹೊಸ ಕಟ್ಟಡಗಳು ಶಾಲೆಗೆ ಮೆರುಗು ನೀಡುತ್ತಿವೆ.
– ಶಕುಂತಳಾ ಎಸ್. ಉಳ್ಳಾಲ್ ಮುಖ್ಯ ಶಿಕ್ಷಕಿ
ವಿದ್ಯಾರ್ಥಿಗಳು ಹೆಚ್ಚಳ
ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಳ್ಳುತ್ತಿರುವುದರಿಂದ ನಮ್ಮ ಮಕ್ಕಳು ಕೂಡ ಇಂಗ್ಲಿಷ್ ಶಿಕ್ಷಣ ಪಡೆಯುವಂತಾಗಿದೆ. ಇದು ಸರಕಾರದ ಉತ್ತಮ ನಿರ್ಧಾರವಾಗಿದ್ದು, ಮುಂದಿನ ದಿನಗಳಲ್ಲಿ ಪುದು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವುದಕ್ಕೆ ಅನುಕೂಲವಾಗಲಿದೆ.
– ರಮ್ಲಾನ್, ಎಸ್‌ಡಿಎಂಸಿ ಅಧ್ಯಕ್ಷರು
ಮನೆ ಮನೆ ಅಭಿಯಾನ
ಒಂದು ಹಂತದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಕುಸಿದಿದ್ದು, ಬಳಿಕ ಮನೆ ಮನೆಗೆ ತೆರಳಿ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವಂತೆ ಮನವಿ ಮಾಡಲಾಗಿತ್ತು. ಹೀಗಾಗಿ ಪ್ರಸ್ತುತ ವರ್ಷದಲ್ಲಿ ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೂಲ ಸೌಕರ್ಯವೂ ಉತ್ತಮ ಸ್ಥಿತಿಯಲ್ಲಿದೆ.