Advertisement

ಇಂಗ್ಲಿಷ್‌ ಪ್ರಭಾವ ಹೆಚ್ಚಾಗಿ ಮರೆಯಾಗುತ್ತಿದೆ ಕನ್ನಡ

10:55 AM Mar 01, 2022 | Team Udayavani |

ಜೇವರ್ಗಿ: ಇಂಗ್ಲಿಷ್‌ ಪ್ರಭಾವ ಹೆಚ್ಚಾಗಿ ಕನ್ನಡ ಮರೆಯಾಗುತ್ತಿದೆ. ಹೆಚ್ಚು ಕನ್ನಡ ಪದಗಳನ್ನೇ ಬಳಸಿ ಭಾಷೆ ಉಳಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಹಿರಿಯ ವಿದ್ವಾಂಸ, ಸಾಹಿತಿ ಗೋ.ರು. ಚನ್ನಬಸಪ್ಪ ಹೇಳಿದರು.

Advertisement

ಪಟ್ಟಣದ ಹಳೆಯ ತಹಶೀಲ್‌ ಕಚೇರಿ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಕಾರ್ಯ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವ್ಯಕ್ತಿ ಪ್ರತಿಷ್ಠೆಯಿಂದ ದೇಶ ಇಂದು ಅಲ್ಲೋಲ ಕಲ್ಲೋಲವಾಗಿದೆ. ಬರಹಗಾರ ತಮ್ಮ ಗಂಭೀರ ಚಿಂತನೆಗಳಿಂದ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸಾಹಿತಿ, ರಾಜಕಾರಣಿ ಹಾಗೂ ಸನ್ಯಾಸಿ ಎಂದಿಗೂ ಅಹಂಕಾರಿಯಾಗಬಾರದು. ಸಾಹಿತ್ಯ ಸಹಜವಾಗಿ ಮೂಡಿಬರಬೇಕು. ಪ್ರಾಚೀನ ಸಾಹಿತ್ಯದ ನಂತರ ನೂರಾರು ಸಾಹಿತ್ಯ ಪ್ರಕಾರಗಳು ಹರಿದು ಬಂದಿದ್ದರೂ ಪ್ರಾಚೀನ ಸಾಹಿತ್ಯ ಗಟ್ಟಿಯಾಗಿ ಉಳಿದಿದೆ. ನಮ್ಮ ಅಭಿರುಚಿ ಹಾಳಾಗಿದೆ. ವಿಕೃತ ಮತ್ತು ವಿಲಕ್ಷಣ ಅಭಿರುಚಿಗಳು ನಮ್ಮ ಯುವ ಜನರ ದಾರಿದೀಪಗಳಾಗಿರುವುದು ದುರ್ದೈವ. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುವ ಕಾರ್ಯಕ್ರಮಗಳು ಕೇವಲ ಶಿಕ್ಷಕರು, ಅಧಿಕಾರಿಗಳು ಹಾಗೂ ಮಕ್ಕಳಿಗೆ ಸೀಮಿತವಾಗಬಾರದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಜೇರಟಗಿ ವಿರಕ್ತಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಶರಣಮ್ಮ ಸಾಯಬಣ್ಣ ತಳವಾರ, ಯಡ್ರಾಮಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಲವಂತರಾಯ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಾ, ಕನ್ನಡ ಸಾಹಿತ್ಯ ಪರಿಷತ್ತು ಯಡ್ರಾಮಿ ತಾಲೂಕು ಘಟಕದ ಅಧ್ಯಕ್ಷ ನಾಗಪ್ಪ ಸಜ್ಜನ್‌ ಭಾಗವಹಿಸಿದ್ದರು. ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್‌.ಕೆ.ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ನಾಡಗೀತೆ ನೃತ್ಯ, ಶ್ರೀ ಮಹಾಲಕ್ಷ್ಮೀ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ ಜಾನಪದ ನೃತ್ಯ, ಬಸಯ್ಯಸ್ವಾಮಿ ಹಿರೇಮಠ ಕಾಸರಭೋಸಗಾ ಜಾನಪದ ಹಾಡುಗಳನ್ನು ಹಾಡಿದರು. ಶರಣಮ್ಮ ಸುಂಬಡ ಸಿದ್ದಮ್ಮ ಚನ್ನೂರ ಹಾಗೂ ಸಂಗಡಿಗರು ಶೋಭಾನ ಹಾಡು ಹಾಡಿದರು. ಚಂದಾಸಾಬ್‌ ಜಲಾಲಸಾಬ್‌ ಚನ್ನೂರ ಭಜನೆ ಪದಗಳು, ಶಂಕರ ಹಾಗೂ ಸಂಗಡಿಗರು ಡೊಳ್ಳಿನ ಪದಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೆ„ದ ಸಾಧಕರನ್ನು ಸನ್ಮಾನಿಸಲಾಯಿತು.

Advertisement

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪ್ರೊ.ಯಶವಂತ ರಾಯ ಅಷ್ಠಗಿ, ಶಿವರಾಜ ಅಂಡಗಿ, ವಿನೋದಕುಮಾರ ಜನವರಿ, ಚನ್ನಮಲ್ಲಯ್ಯಸ್ವಾಮಿ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಸೋಮಶೇಖರಗೌಡ ಪಾಟೀಲ ಗುಡೂರ, ಚಂದ್ರಶೇಖರ ಸೀರಿ, ಶಿವಾನಂದ ಘಂಟಿಮಠ, ಪುಂಡಲೀಕ ಗಾಯಕವಾಡ, ಶಶಿ ಮಹೇಂದ್ರಕರ್‌, ನೀಲಕಂಠರಾಯಗೌಡ ಮಾಲಿಪಾಟೀಲ, ಸಂಗಯ್ಯ ಗುತ್ತೇದಾರ, ಉಮಾಕಾಂತ ಗೋಲಗೇರಿ, ಶ್ರೀಹರಿ ಕರಕಿಹಳ್ಳಿ, ಎಸ್‌.ಎ,ಪಡಶೆಟ್ಟಿ, ಸುನಂದಾ ಕಲ್ಲಾ, ಜಗನ್ನಾಥ ಇಮ್ಮಣ್ಣಿ, ಮಹಾಂತೇಶ ಪಾಟೀಲ, ಪರಮೇಶ್ವರ ಬಿರಾಳ, ಕಾಶಿನಾಥ ಸಾಹು ಮಂದೇವಾಲ, ಬಸವರಾಜ ಬಾಗೇವಾಡಿ, ವೆಂಕಟರಾವ ಮುಜುಮದಾರ, ಸಂಗಮೇಶ ಸಂಕಾಲಿ, ಎಸ್‌.ಟಿ.ಬಿರಾದಾರ, ಡಾ|ಹಣಮಂತ್ರಾವ ರಾಂಪೂರೆ, ಶರಣಗೌಡ ಜೈನಾಪೂರ, ಬಸವರಾಜ ತಿಳಗೂಳ, ಭೀಮಯ್ಯ ಗುತ್ತೇದಾರ, ಮೌನಪ್ಪ ವಿಶ್ವಕರ್ಮ, ಭೀಮರಾವ ಭಜಂತ್ರಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು. ಶಿಕ್ಷಕಿ ಸುನಂದಾ ಕಲ್ಲಾ ಸ್ವಾಗತಿಸಿದರು. ಡಾ|ಧರ್ಮಣ್ಣ ಬಡಿಗೇರ ನಿರೂಪಿಸಿದರು. ಬಸವರಾಜ ಬಾಗೇವಾಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next