Advertisement

ವೇಗಿ ಆ್ಯಂಡರ್ಸನ್‌ಗೆ 6 ವಾರ ವಿಶ್ರಾಂತಿ

06:30 AM Jun 11, 2018 | |

ಲಂಡನ್‌: ಇಂಗ್ಲೆಂಡ್‌ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್ಸನ್‌ ಬಲ ಭುಜದ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದ ಅವರು 6 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ.

Advertisement

ಆ. ಒಂದರಿಂದ ಭಾರತದ ವಿರುದ್ಧ ಇಂಗ್ಲೆಂಡ್‌ ತವರಿನಲ್ಲಿ 5 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಈ ಕೂಟವನ್ನು ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ಅವರಿಗೆ ವಿಶ್ರಾಂತಿ ನೀಡಿದೆ. 

ಇದೇ ವೇಳೆ ಮಾತನಾಡಿರುವ ಕೋಚ್‌ ಟ್ರೆವರ್‌ ಬೈಲಿಸ್‌, “ಭಾರತ ವಿರುದ್ಧದ ಸರಣಿಗೆ ಅಣಿಯಾಗಬೇಕಿದೆ. ಆ್ಯಂಡರ್ಸನ್‌ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next