Advertisement

World Cup ಕೊನೆ ಹಂತದಲ್ಲಿ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ ತಂಡದ ಸ್ಟಾರ್‌ ಆಲ್‌ ರೌಂಡರ್‌

03:50 PM Nov 01, 2023 | Team Udayavani |

ನವದೆಹಲಿ: ಇಂಗ್ಲೆಂಡ್‌ ತಂಡದ ಖ್ಯಾತ ಆಲ್‌ ರೌಂಡರ್‌ ಆಟಗಾರರೊಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದಾರೆ.

Advertisement

30 ವರ್ಷದ ಸ್ಟಾರ್‌ ಆಲ್‌ ರೌಂಡರ್‌ ಡೇವಿಡ್ ವಿಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ನೀಡುವುದಾಗಿ ಬುಧವಾರ(ನ.1 ರಂದು) ಘೋಷಿಸಿದ್ದಾರೆ.

ಈ ಕುರಿತು ಸುದೀರ್ಘವಾದ ಇನ್ಸ್ಟಾಗ್ರಾಮ್‌ ಪೋಸ್ಟ್‌ ಹಾಕಿರುವ ಅವರು, “ಸಣ್ಣ ವಯಸ್ಸಿನ ಹುಡುಗನಾಗಿದ್ದಾಗ ಇಂಗ್ಲೆಂಡ್‌ ಪರ ಕ್ರಿಕೆಟ್‌ ಆಡುವ ಕನಸು ಕಂಡಿದ್ದೆ. ಆದ್ದರಿಂದ ಬಹಳ ಎಚ್ಚರಿಗೆ ಹಾಗೂ ಯೋಚಿಸಿ ವಿಶ್ವಕಪ್‌ ನ ಕೊನೆಯ ಹಂತದಲ್ಲಿ ನಾನು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿ ಆಗುತ್ತಿದ್ದೇನೆ. ನಾನು ಅಪಾರ ಹೆಮ್ಮೆಯಿಂದ ಅಂಗಿಯನ್ನು ಧರಿಸಿದ್ದೇನೆ ಮತ್ತು ನನ್ನ ಎದೆಯ ಮೇಲಿನ ಬ್ಯಾಡ್ಜ್‌ಗೆ ನಾನು ಸಂಪೂರ್ಣವಾಗಿ ಎಲ್ಲವನ್ನು ನೀಡಿದ್ದೇನೆ. ಜಗತ್ತಿನ ಅತ್ಯುತ್ತಮ ಆಟಗಾರರನ್ನು ಒಳಗೊಂಡಿರುವ ಉತ್ತಮ ತಂಡದ ಭಾಗವಾಗಿದ್ದಕ್ಕೆ ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ನನ್ನ ಈ ಪಯಣದಲ್ಲಿ ಸುಂದರ ನೆನಪು ಹಾಗೂ ಕಷ್ಟದ ಸಮಯದಲ್ಲಿ ಜೊತೆಯಾದ ಸ್ನೇಹಿತರನ್ನು ಇಲ್ಲಿ ನಾನು ಕಂಡುಕೊಂಡಿದ್ದೇನೆ. ನನ್ನ ಹೆಂಡತಿ, ಇಬ್ಬರು ಮಕ್ಕಳು, ಅಮ್ಮ ಮತ್ತು ತಂದೆಯ ನಿಮ್ಮ ತ್ಯಾಗ ಮತ್ತು ಬೆಂಬಲವಿಲ್ಲದೆ ನನ್ನ ಕನಸುಗಳನ್ನು ಈಡೇರಿಸಲು ನಾನು ಸಾಧ್ಯವಾಗುತ್ತಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ.

“ಇನ್ನು ಉಳಿದಿರುವ ಮೂರು ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ನಾನು ಇನ್ನೂ ವಿಶ್ವಕಪ್‌ನಲ್ಲಿನ ನಮ್ಮ ಪ್ರದರ್ಶನಕ್ಕೂ ನನ್ನ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ ಇಲ್ಲ” ಎಂದು ವಿಲ್ಲಿ ಹೇಳಿದ್ದಾರೆ.

ಐಪಿಎಲ್‌, T20 ಬ್ಲ್ಯಾಸ್ಟ್‌ ಸೇರಿದಂತೆ ಜಗತ್ತಿನ ನಾನಾ ಲೀಗ್‌ ಗಳಲ್ಲಿ ಆಡುವುದನ್ನು ಮುಂದುವರೆಸುವುದಾಗಿ ವಿಲ್ಲಿ ಹೇಳಿದ್ದಾರೆ.

Advertisement

ಇಂಗ್ಲೆಂಡ್‌ ತಂಡ ಈ ಬಾರಿಯ ವಿಶ್ವಕಪ್‌ ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿ ಅಂಕಪಟ್ಟಿಯಲ್ಲೊ ಕೊನೆಯ ಸ್ಥಾನದಲ್ಲಿದೆ.

2015 ರಲ್ಲಿ ಐರ್ಲೆಂಡ್‌ ವಿರುದ್ಧದ ಪಂದ್ಯದ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಾದಾರ್ಪಣೆ  ಮಾಡಿದ ವಿಲ್ಲಿ 70 ಏಕದಿನ ಮತ್ತು 43 T20I ಗಳಲ್ಲಿ ಇಂಗ್ಲೆಂಡ್ ನ್ನು ಪ್ರತಿನಿಧಿಸಿದ್ದಾರೆ. ಅವರು ಏಕದಿನ ಪಂದ್ಯದಲ್ಲಿ 26.12ರ ಸರಾಸರಿಯಲ್ಲಿ 627 ರನ್ ಗಳಿಸಿದ್ದಾರೆ. T20I ಅವರು 51 ವಿಕೆಟ್‌ ಗಳನ್ನು ಪಡೆದಿದ್ದಾರೆ. ಏಕದಿನದಲ್ಲಿ ಅವರು, 94 ವಿಕೆಟ್‌ ಗಳನ್ನು ಪಡೆದಿದ್ದಾರೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) 2023-24 ಋತುವಿನ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ ವಿಲ್ಲಿ ಅವರ ಹೆಸರು ಕೈಬಿಟ್ಟ ಬಳಿಕ ನಿವೃತ್ತಿ ನಿರ್ಧಾರ ಬಂದಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next