Advertisement

ನಾಟಕೀಯ ಕುಸಿತ ಕಂಡ ಆಸೀಸ್: ದ್ವಿತೀಯ ಪಂದ್ಯ ಇಂಗ್ಲೆಂಡ್ ಪಾಲು, ಸರಣಿ ಸಮಬಲ

12:03 PM Sep 14, 2020 | keerthan |

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ನಾಟಕೀಯ ಕುಸಿತ ಕಂಡ ಆಸ್ಟ್ರೇಲಿಯಾ ಹೀನಾಯ ಸೋಲನುಭವಿಸಿದೆ. ಮೊದಲ ಪಂದ್ಯ ಸೋತಿದ್ದ ಮಾರ್ಗನ್ ಪಡೆ ದ್ವಿತೀಯ ಪಂದ್ಯ ಗೆದ್ದು ಸರಣಿ ಸಮಬಲ ಪಡಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಕುಸಿತ ಕಂಡಿತು. ರೂಟ್ 39 ರನ್, ಮಾರ್ಗನ್ 42 ರನ್ ಗಳಿಸಿದರೆ ಉಳಿದವರು ಅಗ್ಗಕ್ಕೆ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ 149 ರನ್ ಗೆ ಎಂಟು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಗೆ ನೆರವಾಗಿದ್ದು ಟಾಮ್ ಕರ್ರನ್ ಮತ್ತು ಆದಿಲ್ ರಶೀದ್.

ಒಂಬತ್ತನೇ ವಿಕೆಟ್ ಗೆ ಜೊತೆಯಾದ ಇವರಿಬ್ಬರು 76 ರನ್ ಜೊತೆಯಾಟ ನಡೆಸಿದರು. ಕರ್ರನ್ 37 ರನ್ ಗಳಿಸಿದರೆ ಆದಿಲ್ ರಶೀದ್ 35 ರನ್ ಗಳಿಸಿದರು. ಅಂತಿಮವಾಗಿ ಇಂಗ್ಲೆಂಡ್ ಒಂಬತ್ತು ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತು.

ಆಸೀಸ್ ಪರ ಜಾಂಪಾ ಮೂರು ವಿಕೆಟ್ ಪಡೆದರೆ, ಸ್ಟಾರ್ಕ್ ಎರಡು ವಿಕೆಟ್ ಕಬಳಿಸಿದರು. ಹ್ಯಾಜಲ್ ವುಡ್, ಕಮಿನ್ಸ್, ಮಾರ್ಶ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ:ರೋಚಕ ಕದನದಲ್ಲಿ ಗೆದ್ದು ಬೀಗಿದ ಡೊಮಿನಿಕ್ ಥೀಮ್ ಗೆ ಚೊಚ್ಚಲ ಗ್ರಾಂಡ್ ಸ್ಲ್ಯಾಮ್ ಕಿರೀಟ

Advertisement

ಸುಲಭ ಗುರಿ ಬೆನ್ನತ್ತಿದ ಆಸೀಸ್ ಗೆ ಆರಂಭದಲ್ಲಿ ಆಘಾತ ಎದುರಾಯಿತು. ವಾರ್ನರ್ ಒಂದು ರನ್ ಗೆ ಔಟಾದರೆ, ಸ್ಟೋಯಿನಸ್ ಒಂಬತ್ತು ರನ್ ಗೆ ಔಟಾದರು. ನಾಯಕ ಫಿಂಚ್ 73 ರನ್ ಗಳಿಸಿದರೆ, ಮಾರ್ನಸ್ ಲಬುಶೇನ್ 48 ರನ್ ಗಳಿಸಿ ತಂಡವನ್ನು ಆಧರಿಸಿದರು. ಎರಡು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಆಸೀಸ್ ನಂತರ ಸತತ ವಿಕೆಟ್ ಕಳೆದುಕೊಂಡಿತು.

ಇಂಗ್ಲೆಂಡ್ ವೇಗಿಗಳ ಬೊಂಬಾಟ್ ಗೆ ಆಸೀಸ್ ಆಟಗಾರರು ಸತತ ವಿಕೆಟ್ ಕಳೆದುಕೊಂಡರು. 207 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ ಪರ ಆರ್ಚರ್, ವೋಕ್ಸ್, ಸ್ಯಾಮ್ ಕರ್ರನ್ ತಲಾ ಮೂರು ವಿಕೆಟ್ ಪಡೆದರು. ಇಂಗ್ಲೆಂಡ್ 24 ರನ್ ಅಂತರದ ಜಯ ಸಾಧಿಸಿತು.

ಇದನ್ನೂ ಓದಿ: ಕಿರುತೆರೆ, ಕ್ರಿಕೆಟ್‌ಗೂ ನಂಟು: ನಟಿಯರು, ಕ್ರಿಕೆಟಿಗರಿಗೂ ಫೈಜಲ್‌ ಪಾರ್ಟಿ

ಜೋಫ್ರಾ ಆರ್ಚರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next