Advertisement
ಸೋಮವಾರ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆದ ಈ ಸಣ್ಣ ಮೊತ್ತದ ಜಿದ್ದಾಜಿದ್ದಿ ಸೆಣಸಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸ್ಮತಿ ಮಂಧನಾ ಸಾರಥ್ಯದ ಆತಿಥೇಯ ತಂಡ 49 ಓವರ್‌ಗಳಲ್ಲಿ 154 ರನ್ನಿಗೆ ಕುಸಿಯಿತು. ಜವಾಬಿತ್ತ ಇಂಗ್ಲೆಂಡ್ ಕೂಡ ಕುಸಿತ ಕಾಣುತ್ತ ಹೋದರೂ ಅಂತಿಮವಾಗಿ 37.3 ಓವರ್‌ಗಳಲ್ಲಿ 8 ವಿಕೆಟಿಗೆ 157 ರನ್ ಹೊಡೆದು ಜಯ ಸಾಧಿಸಿತು.
ಚೇಸಿಂಗ್‌ಗೆ ಇಳಿದ ಆಂಗ್ಲ ವನಿತೆಯರ ಮೇಲೆ ಆತಿಥೇಯರು ಘಾತಕ ಬೌಲಿಂಗ್ ದಾಳಿಯನ್ನೇ ನಡೆಸಿದ್ದರು. 11 ರನ್ ಆಗುವಷ್ಟರಲ್ಲಿ 4 ಪ್ರಮುಖ ವಿಕೆಟ್ ಉರುಳಿ ಹೋಗಿತ್ತು. 79 ರನ್ ಆಗುವಾಗ 7 ವಿಕೆಟ್ ಪತನಗೊಂಡಿತು. ಆಗ ಪಂದ್ಯ ಭಾರತದ ಕೈಯಲ್ಲೇ ಇತ್ತು. ಆದರೆ ಒಂದೆಡೆ ಕ್ರೀಸಿಗೆ ಗಟ್ಟಿಯಾಗಿ ಅಂಟಿಕೊಂಡು ನಿಂತ ಮಧ್ಯಮ ಕ್ರಮಾಂಕದ ಆಟಗಾರ್ತಿ ಹೀತರ್ ನೈಟ್ ಅಜೇಯ 64 ರನ್ ಹೊಡೆದು (80 ಎಸೆತ, 9 ಬೌಂಡರಿ) ತಂಡವನ್ನು ದಡ ತಲುಪಿಸಿಯೇ ಬಿಟ್ಟರು. ಅವರಿಗೆ ಕೆಳ ಸರದಿಯ ಅನ್ಯಾ ಶ್ರಬೊÕàಲ್ (23) ಮತ್ತು ಲಾರೆನ್ ವಿನ್‌ಫೀಲ್ಡ್ (ಔಟಾಗದೆ 23) ಉತ್ತಮ ಬೆಂಬಲವಿತ್ತರು. ನೈಟ್-ವಿನ್‌ಫೀಲ್ಡ್ ನಡುವಿನ ಮುರಿಯದ 9ನೇ ವಿಕೆಟ್ ಜತೆಯಾಟದಲ್ಲಿ 39 ರನ್ ಒಟ್ಟುಗೂಡುವುದರೊಂದಿಗೆ ಭಾರತ ಗೆಲುವಿನಿಂದ ದೂರ ಸರಿಯಬೇಕಾಯಿತು. ಭಾರತದ ಬ್ಯಾಟಿಂಗ್ ಸರದಿಯಲ್ಲಿ 28 ರನ್ ಮಾಡಿದ ಮಿನ್ನು ಮಣಿ ಅವರದೇ ಹೆಚ್ಚಿನ ಗಳಿಕೆ. ಭಾರತಿ ಫುಲ್ಮಾಲಿ 23, ಹಲೀìನ್ ಡಿಯೋಲ್ 23, ನಾಯಕಿ ಸ್ಮತಿ ಮಂಧನಾ 19 ರನ್ ಹೊಡೆದರು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಮಂಡಳಿ ಅಧ್ಯಕ್ಷರ ಇಲೆವೆನ್-49 ಓವರ್‌ಗಳಲ್ಲಿ 154 (ಮಿನ್ನು 28, ಫುಲ್ಮಾಲಿ 23, ಹಲೀìನ್ 23, ಶ್ರಬೊÕàಲ್ 30ಕ್ಕೆ 4, ಎಲ್ವಿಸ್ 20ಕ್ಕೆ 2). ಇಂಗ್ಲೆಂಡ್-37.3 ಓವರ್‌ಗಳಲ್ಲಿ 8 ವಿಕೆಟಿಗೆ 157 (ನೈಟ್ ಔಟಾಗದೆ 64, ವಿನ್‌ಫೀಲ್ಡ್ ಔಟಾಗದೆ 23, ಶ್ರಬೊಲ್ 23, ಕೋಮಲಾ ಜಂಜಾದ್ 14ಕ್ಕೆ 3, ರೀಮಾಲಕ್ಷ್ಮೀ ಎಕ್ಕಾ 24ಕ್ಕೆ 2, ತನುಜಾ ಕನ್ವರ್ 34ಕ್ಕೆ 2).