Advertisement

ಲಂಕೆಯನ್ನು ಕ್ಲೀನ್ ಸ್ವಿಪ್‌ ಮಾಡಿದ ಇಂಗ್ಲೆಂಡ್

04:12 PM Jun 28, 2021 | Team Udayavani |

ಸೌತಾಂಪ್ಟನ್‌: ಶ್ರೀಲಂಕಾವನ್ನು 3-0 ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ಇಂಗ್ಲೆಂಡ್‌ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ.

Advertisement

ಇಲ್ಲಿನ “ರೋಸ್‌ಬೌಲ್‌ ಸ್ಟೇಡಿಯಂ’ನಲ್ಲಿ ನಡೆದ ಅಂತಿಮ ಮುಖಾಮುಖೀಯಲ್ಲಿ ಇಯಾನ್‌ ಮಾರ್ಗನ್‌ ಬಳಗ 89 ರನ್ನುಗಳ ಭರ್ಜರಿ ಜಯ ಸಾಧಿಸಿತು.

ಡೇವಿಡ್‌ ಮಲಾನ್‌-ಜಾನಿ ಬೇರ್‌ಸ್ಟೊ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಆಂಗ್ಲರ ಸರದಿಯ ಹೈಲೈಟ್‌ ಆಗಿತ್ತು. ಈ ಆರಂಭಿಕ ಜೋಡಿಯ ಶತಕದ ಜತೆಯಾಟದ ನೆರವಿನಿಂದ ಇಂಗ್ಲೆಂಡ್‌ 6 ವಿಕೆಟಿಗೆ 180 ರನ್‌ ರಾಶಿ ಹಾಕಿತು. ಇಬ್ಬರೂ ಅರ್ಧ ಶತಕ ಪೂರೈಸಿದರು.

ಇನ್ನಷ್ಟು ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿದ ಶ್ರೀಲಂಕಾ 18.5 ಓವರ್‌ಗಳಲ್ಲಿ 91 ರನ್ನಿಗೆ ಸರ್ವಪತನ ಕಂಡಿತು. ಲಂಕಾ ಸರದಿಯಲ್ಲಿ 20 ರನ್‌ ಮಾಡಿದ ಬಿನುರ ಫೆರ್ನಾಂಡೊ ಅವರದೇ ಹೆಚ್ಚಿನ ಗಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next