Advertisement

ಇಂಗ್ಲೆಂಡ್‌ ವನಿತಾ ಕ್ರಿಕೆಟ್‌ ತಂಡ ಭಾರತಕ್ಕೆ

01:10 AM Jan 18, 2019 | Team Udayavani |

ಹೊಸದಿಲ್ಲಿ: ಟಿ20 ಸರಣಿಗಾಗಿ ಇಂಗ್ಲೆಂಡ್‌ ವನಿತಾ ತಂಡ ಮುಂದಿನ ಫೆಬ್ರವರಿಯಲ್ಲಿ ಭಾರತಕ್ಕೆ ಬರಲಿದೆ.

Advertisement

ಐಸಿಸಿ ವನಿತಾ ಚಾಂಪಿಯನ್‌ಶಿಪ್‌ ತಯಾರಿಗಾಗಿ ನಡೆಯಲಿರುವ ಈ ಸರಣಿಯು 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಒಳಗೊಂಡಿದೆ. ಏಕದಿನ ಸರಣಿ ಫ್ರೆಬವರಿ 22ರಿಂದ ಹಾಗೂ ಟಿ20 ಸರಣಿ ಮಾರ್ಚ್‌ 4ರಿಂದ ಆರಂಭವಾಗಲಿದೆ.

“ಫೆ. 22, 25 ಮತ್ತು 28ರಂದು ನಡೆಯುವ ಏಕದಿನ ಪಂದ್ಯಗಳು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ಹಾಗೂ ಮಾರ್ಚ್‌  4, 7 ಮತ್ತು 9ರಂದು ನಡೆಯುವ ಟಿ20 ಪಂದ್ಯಗಳು ಗುವಾಹಟಿಯ ಬಸ್ರಾಪುರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿವೆ’ ಎಂದು ಬಿಸಿಸಿಐನ ಕಾರ್ಯದರ್ಶಿ ಅಮಿತಾಬ್‌ ಚೌಧರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next