Advertisement

England vs West Indies ಟೆಸ್ಟ್‌: ಕಾವೆಮ್‌ ಹಾಜ್‌ ಚೊಚ್ಚಲ ಶತಕ

11:56 PM Jul 19, 2024 | Team Udayavani |

ನಾಟಿಂಗ್‌ಹ್ಯಾಮ್‌: ಕಾವೆಮ್‌ ಹಾಜ್‌ ಅವರ ಚೊಚ್ಚಲ ಶತಕ ಮತ್ತು ಅಲಿಕ್‌ ಅಥನಾಜ್‌ ಅವರ ಅಮೋಘ ಬ್ಯಾಟಿಂಗ್‌ ಸಾಹಸದಿಂದ ಇಂಗ್ಲೆಂಡ್‌ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ದಿಟ್ಟ ಆಟವಾಡಿದೆ. ಆತಿಥೇಯರ 416 ರನ್ನಿಗೆ ಉತ್ತರವಾಗಿ 5 ವಿಕೆಟಿಗೆ 351 ರನ್‌ ಗಳಿಸಿ ದ್ವಿತೀಯ ದಿನದಾಟ ಮುಂದುವರಿಸಿದೆ.

Advertisement

ವೆಸ್ಟ್‌ ಇಂಡೀಸ್‌ ಮೊದಲ 3 ವಿಕೆಟ್‌ಗಳನ್ನು 84 ರನ್ನಿಗೆ ಕಳೆದುಕೊಂಡಿತು. ಆದರೆ 4ನೇ ವಿಕೆಟಿಗೆ ಜತೆಗೂಡಿದ ಅಲಿಕ್‌ ಅಥನಾಜ್‌ ಮತ್ತು ಕಾವೆಮ್‌ ಹಾಜ್‌ 175 ರನ್‌ ಜತೆಯಾಟ ನಡೆಸಿ ತಂಡವನ್ನು ಮೇಲೆತ್ತಿದರು. ಅಥನಾಜ್‌ 82 ರನ್‌ ಕೊಡುಗೆ ಸಲ್ಲಿಸಿದರು. ನಾಯಕ ಕ್ರೆಗ್‌ ಬ್ರಾತ್‌ವೇಟ್‌ 45 ರನ್‌ ಮಾಡಿದರು. ಹಾಜ್‌ 120 ರನ್‌ ಗಳಿಸಿ ಔಟಾದರು. ಜೇಸನ್ ಹೋಲ್ಡರ್ 23 ಮತ್ತು ಜೋಶುವಾ ಡ ಸಿಲ್ವಾ 32 ಆಟವಾಡುತ್ತಿದ್ದಾರೆ. ವೆಸ್ಟ್ ಇಂಡೀಸ್ 65 ರನ್ ಮಾತ್ರ ಹಿನ್ನಡೆಯಲ್ಲಿದೆ

Advertisement

Udayavani is now on Telegram. Click here to join our channel and stay updated with the latest news.

Next