Advertisement

ರೋಸ್‌ ಬೌಲ್‌ನಲ್ಲಿ ಇಂಗ್ಲೆಂಡ್‌ Vs ವಿಂಡೀಸ್‌

11:59 PM Jun 13, 2019 | Team Udayavani |

ಸೌತಾಂಪ್ಟನ್‌: ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ತಮ್ಮ ಏಕದಿನ ಸಮರವನ್ನು ಕೆರಿಬಿಯನ್‌ನಿಂದ “ರೋಸ್‌ಬೌಲ್‌ ಸ್ಟೇಡಿಯಂ’ಗೆ ವಿಸ್ತರಿಸಲಿವೆ. ಶುಕ್ರವಾರ ಇಲ್ಲಿ ವಿಶ್ವಕಪ್‌ ಕೂಟದ ದೊಡ್ಡ ಪಂದ್ಯವೊಂದು ನಡೆಯಲಿದೆ.

Advertisement

ಕಳೆದ ಫೆಬ್ರವರಿಯಲ್ಲಿ ಈ ಎರಡೂ ತಂಡಗಳು ಕೆರಿಬಿಯನ್‌ ದ್ವೀಪದಲ್ಲಿ ಪರಸ್ಪರ ಎದುರಾಗಿದ್ದವು. ತೀವ್ರ ಪೈಪೋಟಿಯಿಂದ ಕೂಡಿದ 5 ಪಂದ್ಯಗಳ ಸರಣಿ 2-2 ಅಂತರದಿಂದ ಸಮಬಲದಲ್ಲಿ ಮುಗಿದಿತ್ತು. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಈ ಮಳೆ ಸೌತಾಂಪ್ಟನ್‌ನಲ್ಲೂ ಕಾಣಿಸಿಕೊಂಡರೆ ಅಚ್ಚರಿಪಡಬೇಕಾಗಿಲ್ಲ.

ಗೇಲ್‌ ಸ್ಫೋಟಿಸಬೇಕಿದೆ…
ಕಳೆದ ಕೆರಿಬಿಯನ್‌ ಸಮರದ 4ಇನ್ನಿಂಗ್ಸ್‌ಗಳಲ್ಲಿ “ಯುನಿವರ್ಸ್‌ ಬಾಸ್‌’ ಕ್ರಿಸ್‌ ಗೇಲ್‌ 424 ರನ್‌ ಜತೆಗೆ 39 ಸಿಕ್ಸರ್‌ ಬಾರಿಸಿ ಮೆರೆದಿದ್ದರು. ಬಲಿಷ್ಠ ಇಂಗ್ಲೆಂಡ್‌ ವಿರುದ್ಧ ಅವರದೇ ನೆಲದಲ್ಲಿ ವಿಂಡೀಸ್‌ ಮೇಲುಗೈ ಸಾಧಿಸಬೇಕಾದರೆ ಗೇಲ್‌ ಮತ್ತೂಮ್ಮೆ ಸ್ಫೋಟಿಸಬೇಕಾದ ಅಗತ್ಯವಿದೆ. ಆಗ ಮಧ್ಯಮ ಕ್ರಮಾಂಕದ ಆಟಗಾರರಿಗೂ ಹೆಚ್ಚಿನ ಸ್ಫೂರ್ತಿ ಲಭಿಸುತ್ತದೆ.ಇನ್ನೊಂದು ಕುತೂಹಲವೆಂದರೆ ಕ್ರಿಸ್‌ ಗೇಲ್‌ ಮತ್ತು ಮೂಲತಃ ವಿಂಡೀಸಿನವರೇ ಆದ ಪ್ರಚಂಡ ವೇಗಿ ಜೋಫ‌ ಆರ್ಚರ್‌ ನಡುವಿನ ಮುಖಾ ಮುಖೀ ಹೇಗಿದ್ದೀತು ಎಂಬುದು.

ತಮ್ಮ ಜೂನಿಯರ್‌ ಕ್ರಿಕೆಟನ್ನು ವೆಸ್ಟ್‌ ಇಂಡೀಸಿನಲ್ಲಿ ಆಡಿದ ಆರ್ಚರ್‌, ಕಳೆದ ಎಪ್ರಿಲ್‌ನಲ್ಲಷ್ಟೇ ಇಂಗ್ಲೆಂಡ್‌ ಪರ ಆಡುವ ಅರ್ಹತೆ ಸಂಪಾದಿಸಿದ್ದರು.

“ಜೋಫ‌ ಆರ್ಚರ್‌ ಅವರನ್ನು ನಾವು ಮೊದಲಿನಿಂದಲೂ ಬಲ್ಲೆವು. ಅವರು ಬಾರ್ಬಡಾಸ್‌ನವರು. ಅಂಡರ್‌-15, 17 ಮತ್ತು ಅಂಡರ್‌-19 ವಿಭಾಗದ ಪಂದ್ಯಗಳನ್ನು ಕೆರಿಬಿಯನ್‌ನಲ್ಲೇ ಆಡಿದ್ದರು. ವೇಗವೇ ಅವರ ಅಸ್ತ್ರ. ಈ ಸವಾಲನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದಿದ್ದಾರೆ ವಿಂಡೀಸ್‌ ಕೋಚ್‌ ಫ್ಲಾಯ್ಡ ರೀಫ‌ರ್‌.

Advertisement

ವೆಸ್ಟ್‌ ಇಂಡೀಸ್‌ ಈಗಾಗಲೇ 3 ಪಂದ್ಯಗಳನ್ನಾಡಿದ್ದು, ಪಾಕಿಸ್ಥಾನ ಎದುರಿನ ಆರಂಭಿಕ ಪಂದ್ಯವನ್ನಷ್ಟೇ ಗೆದ್ದಿದೆ. ಆಸ್ಟ್ರೇಲಿಯ ವಿರುದ್ಧ ಎಡವಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಅಂಕ ಹಂಚಿಕೊಂಡಿತ್ತು. ಮಂಡಿನೋವಿಗೆ ಸಿಲುಕಿದ್ದ ಆ್ಯಂಡ್ರೆ ರಸೆಲ್‌ ಆಫ್ರಿಕಾ ವಿರುದ್ಧ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಪೂರ್ತಿ ಫಿಟ್‌ನೆಸ್‌ಗೆ ಮರಳಿದರಷ್ಟೇ ಶುಕ್ರವಾರ ಆಡಬಹುದು.

ಹಳಿ ಏರಿದೆ ಇಂಗ್ಲೆಂಡ್‌
ಇಂಗ್ಲೆಂಡ್‌ ಮೂರರಲ್ಲಿ ಎರಡನ್ನು ಜಯಿಸಿದೆ. ಮಾರ್ಗನ್‌ ಪಡೆಯನ್ನೂ ಸೋಲಿಸಬಹುದು ಎಂಬುದನ್ನು ಪಾಕಿಸ್ಥಾನ ತೋರಿಸಿಕೊಟ್ಟಿದೆ. ಆದರೆ ಇಂಗ್ಲೆಂಡ್‌ ಬಾಂಗ್ಲಾವನ್ನು ಮಣಿಸಿ ಹಳಿ ಏರಿದೆ. ವಿಶ್ವಕಪ್‌ನಲ್ಲಿ ವಿಂಡೀಸ್‌ ವಿರುದ್ಧ ಅಮೋಘ ದಾಖಲೆ ಹೊಂದಿರುವ ಆಂಗ್ಲರ ಪಡೆಗೆ ಇದನ್ನು ಮುಂದುವರಿಸಿಕೊಂಡು ಹೋಗುವ ಯೋಜನೆಯಲ್ಲಿದೆ. ಹೋಲ್ಡರ್‌ ಪಡೆ ಗಂಭೀರವಾಗಿ ಆಡಿದರೆ ಇಂಗ್ಲೆಂಡ್‌ ಹಾದಿ ಕಠಿನವಾದೀತು.

ಸಂಭಾವ್ಯ ತಂಡಗಳು
ಇಂಗ್ಲೆಂಡ್‌:
ಜಾನಿ ಬೇರ್‌ಸ್ಟೊ, ಜಾಸನ್‌ ರಾಯ್‌, ಜೋ ರೂಟ್‌, ಇಯಾನ್‌ ಮಾರ್ಗನ್‌
(ನಾಯಕ), ಜಾಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌, ಆದಿಲ್‌ ರಶೀದ್‌,
ಜೋಫ‌Å ಆರ್ಚರ್‌, ಲಿಯಮ್‌ ಪ್ಲಂಕೆಟ್‌, ಮಾರ್ಕ್‌ ವುಡ್‌.
ವೆಸ್ಟ್‌ ಇಂಡೀಸ್‌: ಕ್ರಿಸ್‌ ಗೇಲ್‌, ಶೈ ಹೋಪ್‌, ಡ್ಯಾರನ್‌ ಬ್ರಾವೊ, ನಿಕೋಲಸ್‌
ಪೂರನ್‌, ಶಿಮ್ರನ್‌ ಹೆಟ್‌ಮೈರ್‌, ಆ್ಯಂಡ್ರೆ ರಸೆಲ್‌, ಜಾಸನ್‌ ಹೋಲ್ಡರ್‌ (ನಾಯಕ), ಕಾರ್ಲೋಸ್‌ ಬ್ರಾತ್‌ವೇಟ್‌, ಆ್ಯಶೆÉ ನರ್ಸ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌.

ಸಿಲ್ಲಿ ಪಾಯಿಂಟ್‌
ಈವೆರೆಗೆ ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ನಡುವಿನ 95 ಪಂದ್ಯಗಳಿಗೆ ಸ್ಪಷ್ಟ ಫ‌ಲಿತಾಂಶ ಲಭಿಸಿದೆ. ಇದರಲ್ಲಿ ಇಂಗ್ಲೆಂಡ್‌ 51, ವಿಂಡೀಸ್‌ 44ರಲ್ಲಿ ಗೆದ್ದಿವೆ.

ವಿಶ್ವಕಪ್‌ ಇತಿಹಾಸದಲ್ಲಿ ಇಂಗ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ ತನ್ನ ಏಕೈಕ ಜಯ ಸಾಧಿಸಿದ್ದು 1979ರ ಫೈನಲ್‌ನಲ್ಲಿ. ಅಂತರ 92 ರನ್‌.

ಇಂಗ್ಲೆಂಡ್‌-ವಿಂಡೀಸ್‌ ಕೊನೆಯ ಸಲ ವಿಶ್ವಕಪ್‌ನಲ್ಲಿ ಮುಖಾಮುಖೀ ಯಾದದ್ದು 2011ರಲ್ಲಿ. ಅಂದಿನ ಚೆನ್ನೈ ಪಂದ್ಯದಲ್ಲಿ ಇಂಗ್ಲೆಂಡ್‌ 18 ರನ್‌ ಗೆಲುವು ಕಂಡಿತ್ತು.

ಇಲ್ಲಿನ ರೋಸ್‌ಬೌಲ್‌ ಅಂಗಳದಲ್ಲಿ ಆಡಲಾದ ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್‌ ವಿಂಡೀಸಿಗೆ ಸೋಲುಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next