ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಭಾರತಕ್ಕೆ ಇದೀಗ ಆಂಗ್ಲರ ಸವಾಲು ಎದುರಾಗಿದೆ. ಆದರೆ ಆಸೀಸ್‌ಗಿಂತ ಆಂಗ್ಲರ ತಂಡ ಬಲಿಷ್ಟ ಎನ್ನುವುದನ್ನು ಭಾರತ ಇಲ್ಲಿ ಮರೆಯುವಂತಿಲ್ಲ. ಈಗಾಗಲೇ ಶ್ರೀಲಂಕಾ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದಿರುವ ಇಂಗ್ಲೆಂಡ್ ಕೇವಲ ತವರಿನಲ್ಲಿ ಮಾತ್ರವಲ್ಲದೆ ತವರಿನಾಚೆಗೂ ಅದರಲ್ಲೂ ಸ್ಪಿನ್ ಪಿಚ್ ಸ್ನೇಹಿಯಾದ ಏಷ್ಯಾ ಖಂಡದಲ್ಲಿ ಈ ಪರಾಕ್ರಮ ಮೆರೆದು ತಾವೆಷ್ಟು ಬಲಿಷ್ಟ ಎನ್ನುದನ್ನು ಸಾಭೀತು ಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಆಂಗ್ಲರ ಸವಾಲನ್ನು ಭಾರತ ಕಡೆಗಣಿಸುವಂತಿಲ್ಲ
ಸಮರ್ಥ ತಂಡ :
ಶಿಸ್ತಿನ ಆಟದ ಮೂಲಕ ಹೆಸರುವಾಸಿಯಾಗಿರುವ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಮರ್ಥವಾಗಿದೆ. ತಂಡ ಎಷ್ಟೇ ಕ್ಷಿಪ್ರ ಕುಸಿತ ಕಂಡರು ಓರ್ವ ಆಟಗಾರ ಮಾತ್ರ ತಂಡಕ್ಕೆ ನೆರವಾಗುವ ಮೂಲಕ ಆಸರೆಯಾಗಬಲ್ಲರು ಈ ಕಾರಣದಿಂದಲೇ ಇಂಗ್ಲೆಂಡ್ ಅಪಾಯಕಾರಿ ಎನ್ನಲಡ್ಡಿಯಿಲ್ಲ. ವಿಶ್ವ ಚಾಂಪಿಯನ್ ತಂಡದಲ್ಲಿ ವಿಶಿಷ್ಟ ಬಗೆಯ ಆಟಗಾರರಿದ್ದಾರೆ. ನಾಯಕ ಜೋ ರೂಟ್ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ಮೂಲಕವು ಎದುರಾಳಿಗೆ ಕಂಟಕವಾಗಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ಜಾಸ್ ಬಟ್ಲರ್, ಸಿಬ್ಲಿ ಉತ್ತಮ ಬ್ಯಾಟಿಂಗ್ ನಡೆಸುವಲ್ಲಿ ಸಮರ್ಥರಿದ್ದಾರೆ.
ಅಪಾಯಕಾರಿ ಸ್ಟೋಕ್ಸ್ :
ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ತುಂಬಾನೆ ಅಪಾಯಕಾರಿ ಬ್ಯಾಟಿಂಗಿಗೂ ಸೈ ಬೌಲಿಂಗಿಗೂ ಸೈ ಎನಿಸಿಕೊಳ್ಳುವ ಆಟಗಾರ. ಏಕಾಂಗಿಯಾಗಿ ಹೋರಾಡಿ ಪಂದ್ಯಕ್ಕೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಈ ಆಟಗಾರನಲ್ಲಿದೆ ಕಳೆದ ಆ್ಯಶಸ್ ಮತ್ತು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ತೋರಿದ ಪ್ರದರ್ಶನವೆ ಇದಕ್ಕೆ ಉತ್ತಮ ನಿದರ್ಶನ.
ಬಲಿಷ್ಠ ಬೌಲಿಂಗ್ ಪಡೆ :
ಭಾರತ ತಂಡದ ಬೌಲಿಂಗಿಗೆ ಹೋಲಿಸಿದರೆ ಪ್ರವಾಸಿ ಆಂಗ್ಲರ ಬೌಲಿಂಗ್ ಹೆಚ್ಚು ಬಲಿಷ್ಟವಾಗಿದೆ. ಇಲ್ಲಿ ಘಾತಕ ವೇಗಿಗಳಾದ ಸ್ಟುವರ್ಟ್ ಬ್ರಾಡ್, ಜೋಫ್ರ ಆರ್ಚರ್, ಜೇಮ್ಸ್ ಆ್ಯಂಡರ್ಸನ್, ಕ್ರಿಸ್ ವೋಕ್ಸ್ ಪ್ರಮುಖ ಅನುಭವಿ ವೇಗಿಗಳಾಗಿದ್ದಾರೆ ಜತೆಗೆ ಬೆನ್ ಸ್ಟೋಕ್ಸ್ ಕೂಡ ಇವರೀಗೆ ಉತ್ತಮ ಸಾಥ್ ನೀಡುತ್ತಿರುವುದರಿಂದ ಬೌಲಿಂಗ್ ವಿಭಾಗವೂ ಕೂಡ ತುಂಬಾನೆ ಬಲಿಷ್ಟವಾಗಿದೆ. ಸ್ಪಿನ್ ವಿಭಾಗದಲ್ಲಿ ಲೀಚ್, ಪಾರ್ಟ್ ಟೈಮ್ ಬೌಲರ್, ನಾಯಕ ಜೋ ರೂಟ್ ಕೂಡ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
– ಅಭಿ