Advertisement

ಸರಣಿ ನಿರ್ಣಾಯಕ ಪಂದ್ಯದಲ್ಲಿ 259 ರನ್ ಗಳಿಗೆ ಇಂಗ್ಲೆಂಡ್ ಆಲೌಟ್

07:43 PM Jul 17, 2022 | Team Udayavani |

ಮ್ಯಾಂಚೆಸ್ಟರ್‌ : ಇಲ್ಲಿ ಭಾನುವಾರ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು 45.5 ಓವರ್ ಗಳಲ್ಲಿ 259 ರನ್ ಗಳಿಗೆ ಆಲೌಟ್ ಮಾಡಿದೆ. ಸರಣಿ ಗೆಲ್ಲಲು ಭಾರತಕ್ಕೆ 260 ರನ್‌ಗಳ ಅಗತ್ಯವಿದೆ.

Advertisement

ನಾಯಕ ಜೋಸ್ ಬಟ್ಲರ್ ಅರ್ಧಶತಕ ಗಳಿಸಿದರು ಮತ್ತು ಇಂಗ್ಲೆಂಡ್ ಬ್ಯಾಟರ್‌ಗಳ ನಡುವಿನ ಸಣ್ಣ ಬಹು ಪಾಲುದಾರಿಕೆಗಳು 259 ಕ್ಕೆ ತಲುಪಿಸಿದವು. ಜೋಸ್ ಬಟ್ಲರ್ 60 ರನ್ (80) ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಜಡೇಜಾಗೆ ಕ್ಯಾಚ್ ನೀಡಿದರು.

ಜೇಸನ್ ರಾಯ್ 41, ಬೆನ್ ಸ್ಟೋಕ್ಸ್ 27, ಮೊಯಿನ್ ಅಲಿ 34, ಲಿಯಾಮ್ ಲಿವಿಂಗ್‌ಸ್ಟೋನ್ 27, ಡೇವಿಡ್ ವಿಲ್ಲಿಕ್ 18, ಕ್ರೇಗ್ ಓವರ್‌ಟಾಂಕ್ 32 ರನ್ ಕೊಡುಗೆ ಸಲ್ಲಿಸಿದರು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತದ ಪರ ಹಾರ್ದಿಕ್ ಪಾಂಡ್ಯ 7 ಓವರ್ ಎಸೆದು 24 ರನ್ ನೀಡಿ 4 ವಿಕೆಟ್ ಕಬಳಿಸಿದರು. ಚಾಹಲ್ 3, ಸಿರಾಜ್ 2, ಜಡೇಜಾ 1 ವಿಕೆಟ್ ಪಡೆದರು.

1-1ರಿಂದ ಸರಣಿ ಸಮಬಲವಾಗಿದ್ದು, ಈ ಪಂದ್ಯ ಗೆದ್ದವರು ಸರಣಿ ಜಯಿಸುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next