Advertisement

England ಅನುಭವಿ ವೇಗಿ ಆ್ಯಂಡರ್ಸನ್‌ ವಿದಾಯ ಘೋಷಣೆ

12:23 AM May 12, 2024 | Team Udayavani |

ಲಂಡನ್‌: ಇಂಗ್ಲೆಂಡ್‌ನ‌ ಅನುಭವಿ ವೇಗಿ, 41 ವರ್ಷದ ಜೇಮ್ಸ್‌ ಆ್ಯಂಡರ್ಸನ್‌ ಅಂತಾ ರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ. ಮುಂಬರುವ ವೆಸ್ಟ್‌ ಇಂಡೀಸ್‌ ಎದುರಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯವೇ ಕೊನೆಯದು ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Advertisement

“ಈ ಬೇಸಗೆಯ ಮೊದಲ ಟೆಸ್ಟ್‌ ಲಾರ್ಡ್ಸ್‌ನಲ್ಲಿ ನಡೆಯಲಿದ್ದು, ಇದೇ ನನ್ನ ಕೊನೆಯ ಟೆಸ್ಟ್‌ ಆಗಲಿದೆ. ಬಾಲ್ಯ ದಿಂದಲೂ ಪ್ರೀತಿಸುತ್ತಿದ್ದ ಕ್ರೀಡೆಯನ್ನು ದೇಶಕ್ಕಾಗಿ 20 ವರ್ಷಗಳ ಕಾಲ ಆಡಿದ ಹೆಮ್ಮೆ ನನ್ನದು. ಕೊನೆಯ ಹೆಜ್ಜೆಗೆ ಇದೇ ಸೂಕ್ತ ಸಮಯ ಎಂದು ತಿಳಿದಿದೆ’ ಎಂಬುದಾಗಿ ಆ್ಯಂಡರ್ಸನ್‌ ಹೇಳಿದ್ದಾರೆ.

ಟೆಸ್ಟ್‌ ಚರಿತ್ರೆಯಲ್ಲಿ 700 ಪ್ಲಸ್‌ ವಿಕೆಟ್‌ ಉರುಳಿಸಿದ ವಿಶ್ವದ ಕೇವಲ 3ನೇ ಬೌಲರ್‌ ಹಾಗೂ ಏಕೈಕ ವೇಗಿ ಎಂಬ ಹೆಗ್ಗಳಿಕೆ ಜೇಮ್ಸ್‌ ಆ್ಯಂಡರ್ಸನ್‌ ಅವರದು.

Advertisement

Udayavani is now on Telegram. Click here to join our channel and stay updated with the latest news.

Next