Advertisement
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಕುಕ್-ಜೆನ್ನಿಂಗ್ಸ್ ಜೋಡಿ ಮೊದಲ ವಿಕೆಟಿಗೆ 60 ರನ್ ಗಳಿಸಿ ಉತ್ತಮ ಅಡಿಪಾಯ ನಿರ್ಮಿಸಿತು. ಜೆನ್ನಿಂಗ್ಸ್ ಗಳಿಕೆ 23 ರನ್. ಈ ಜೋಡಿಯನ್ನು ಜಡೇಜ ಬೇರ್ಪಡಿಸಿದರು. ಮತ್ತೆ ವನ್‌ಡೌನ್‌ನಲ್ಲಿ ಬಂದ ಮೊಯಿನ್ ಅಲಿ ಈ ಬಾರಿ ವಿಫಲರಾಗಲಿಲ್ಲ (50). ದ್ವಿತೀಯ ವಿಕೆಟಿಗೆ 73 ರನ್ ಒಟ್ಟುಗೂಡಿತು. ಸ್ಕೋರ್ 133ಕ್ಕೆ ಏರಿದಾಗ 190 ಎಸೆತಗಳಲ್ಲಿ 71 ರನ್ ಬಾರಿಸಿದ ಕುಕ್ ಬುಮ್ರಾಗೆ ಬೌಲ್ಡ್ ಆದರು.
ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಭಾರತ 2 ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬದಲು ಹನುಮ ವಿಹಾರಿ ಮತ್ತು ರವೀಂದ್ರ ಜಡೇಜ ಅವಕಾಶ ಪಡೆದರು. ಆಂಧ್ರಪ್ರದೇಶದ 24ರ ಹರೆಯದ ಹನುಮ ವಿಹಾರಿ ಭಾರತದ 292ನೇ ಟೆಸ್ಟ್ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ನಾಯಕ ವಿರಾಟ್ ಕೊಹ್ಲಿಯಿಂದ “ಟೆಸ್ಟ್ ಕ್ಯಾಪ್’ ಪಡೆದರು. ಇಂಗ್ಲೆಂಡ್ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಸೌತಾಂಪ್ಟನ್ ಗೆಲುವಿನ ಬಳಗದೊಂದಿಗೆ ಆಡಲಿಳಿಯಿತು.