Advertisement

ಇಂಗ್ಲೆಂಡ್‌ ಪ್ರಯಾಣಿಕರಿಗೆ ರಾಜ್ಯ ಪ್ರವೇಶ ಇನ್ನೂ ಮುಕ್ತ

12:08 PM Dec 30, 2020 | Team Udayavani |

ಬೆಂಗಳೂರು: “ರೂಪಾಂತರ ವೈರಸ್‌’ ತೀವ್ರಗೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಿಂದ ಬರುವ ಲೋಹದಹಕ್ಕಿಗಳ ಮೇಲೆ ಭಾರತ ನಿರ್ಬಂಧ ವಿಧಿಸಿದೆ. ಆದಾಗ್ಯೂ ಇಂಗ್ಲೆಂಡ್‌ನಿಂದ ಆಗಮಿಸುವ ಪ್ರಯಾಣಿಕರಿಗೆ ಪರೋಕ್ಷವಾಗಿ ರಾಜ್ಯದಲ್ಲಿ ಈಗಲೂ ಪ್ರವೇಶ ಮುಕ್ತವಾಗಿದೆ!

Advertisement

ಇಂಗ್ಲೆಂಡ್‌ನಿಂದ ನೇರವಾಗಿ ಅಥವಾ ಬೇರೆ ದೇಶಗಳ ಮೂಲಕ ಭಾರತಕ್ಕೆ ಬರುವ ವಿಮಾನಗಳ ಮೇಲೆ ಡಿ.31ರವರೆಗೆ ನಿರ್ಬಂಧ ವಿಧಿಸಿದೆ. ಇದನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಿಸುವಸುಳಿವನ್ನೂ ಸರ್ಕಾರ ನೀಡಿದೆ. ಆದರೆ, ನೆರೆಯ ಹತ್ತಾರು ರಾಷ್ಟ್ರಗಳು ಈಗಲೂ ಇಂಗ್ಲೆಂಡ್‌ವಿಮಾನಗಳಿಗೆ ನಿರ್ಬಂಧ ಹೇರಿಲ್ಲ. ಇದರ ಲಾಭ ಪಡೆದು ಕೆಲವರು ಕಣ್ತಪ್ಪಿಸಿ ಕರ್ನಾಟಕದಲ್ಲಿ ನುಸುಳಲು ಸಾಕಷ್ಟು ಅವಕಾಶಗಳಿವೆ.

ಉದಾಹರಣೆಗೆ ಬ್ರಿಟನ್‌ನಿಂದ ಅಮೆರಿಕಕ್ಕೆ ತೆರಳಿ, ಅಲ್ಲಿ ಮೂರ್‍ನಾಲ್ಕು ದಿನಗಳಿದ್ದು, ನಂತರಬೆಂಗಳೂರಿಗೆ ಯಾವುದೇ ನಿರ್ಬಂಧಗಳಿಲ್ಲದೆ ಆಗಮಿಸಬಹುದು. ಹೀಗೆ ಬಂದವರಲ್ಲಿ “ಬ್ರಿಟನ್‌ರೂಪಾಂತರ ವೈರಸ್‌’ ಸೋಂಕು ಮನೆ ಮಾಡಿರುವಸಾಧ್ಯತೆ ಇದೆ. ಆದರೆ, ಅಂತಹವರು ಪರೀಕ್ಷೆಗೊಳ  ಪಡುವುದೇ ಇಲ್ಲ. ನೇರವಾಗಿ ನಗರ ಪ್ರವೇಶಿಸುತ್ತಾರೆ. ಹಾಗಾಗಿ, ಇದು ಮತ್ತೂಂದು ಹಂತದಸೋಂಕಿನ ತೀವ್ರತೆಗೆ ಕಾರಣವಾಗುವ ಸಾಧ್ಯತೆ ಇದೆ. ವಿಶ್ವಾದ್ಯಂತ ಭಾರತವು ಸೇರಿದಂತೆ ಸುಮಾರು 40 ರಾಷ್ಟ್ರಗಳು ಇಂಗ್ಲೆಂಡ್‌ನಿಂದ ಬರುವ ವಿಮಾನಗಳ ಮೇಲೆ ನಿರ್ಬಂಧ ಹೇರಿವೆ.

ದೇಶಗಳು ಈಗಲೂ ಮುಕ್ತ ಅವಕಾಶ ಕಲ್ಪಿಸಿವೆ (ಕೆಲವು ಷರತ್ತುಬದ್ಧ ಪ್ರವೇಶ ಕಲ್ಪಿಸಿವೆ). ಆ ಪೈಕಿ ಹಲವು ದೇಶಗಳಿಂದ ಬೆಂಗಳೂರಿಗೆ ನೇರ ನಾಗರಿಕ ವಿಮಾನಯಾನ ಸೇವೆ ಇದೆ. ಇದರಿಂದಅನಾಯಾಸವಾಗಿ ಬರಬಹುದು ಎನ್ನುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು. ಈ ಬಗ್ಗೆ ಹಿಂದೆ ಆರೋಗ್ಯ ಮತ್ತು

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಅವರನ್ನು ಪ್ರಶ್ನಿಸಿ ದಾಗ, “ಹೀಗೆ ಇಂಗ್ಲೆಂಡ್‌ನಿಂದ ಬೇರೆ ದೇಶಗಳಿಗೆ ತೆರಳಿ, ನಂತರ ಭಾರತಕ್ಕೆ ಬರಲು ಆಗುವುದಿಲ್ಲ. ಯಾಕೆಂದರೆ, ರಾಜ್ಯದಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪಾಸ್‌ಪೋರ್ಟ್‌ ತಪಾಸಣೆ ಮಾಡಿ, ಖಾತ್ರಿಪಡಿಸಿ ಕೊಂಡು ಪ್ರಯಾಣಿಕರಿಗೆ ಪ್ರವೇಶ ಕಲ್ಪಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದರು.

Advertisement

ಆದರೆ, ಕೆಲವು ದೇಶಗಳು “ನಿರ್ಗಮನ ಮುದ್ರೆ’ ಒತ್ತುವುದಿಲ್ಲ. ಸ್ವತಃ ಇಂಗ್ಲೆಂಡ್‌ನ‌ಲ್ಲೇ ಈ ನಿಯಮ ಅನುಸರಿಸುವುದಿಲ್ಲ!

ಸಿಂಗಪುರ ಮಾದರಿ? :

ಸಿಂಗಪುರ ಸೇರಿದಂತೆ ಕೆಲವು ದೇಶಗಳು ಭಾರತಕ್ಕಿಂತ ಭಿನ್ನವಾಗಿ ನಿರ್ಬಂಧ ವಿಧಿಸಿವೆ. ಇಂಗ್ಲೆಂಡ್‌ ನಿಂದ ಬರುವ ವಿಮಾನಗಳು ಮಾತ್ರವಲ್ಲ;ಇಂಗ್ಲೆಂಡ್‌ನ‌ಲ್ಲಿ 14 ದಿನಗಳು ವಾಸ್ತವ್ಯ ಮಾಡಿಬಂದಿರುವ ಪ್ರಯಾಣಿಕರಿಗೂ ನಿರ್ಬಂಧ ವಿಧಿ ಸಿವೆ. ಇದರಿಂದ ಪರೋಕ್ಷವಾಗಿ ನುಸುಳುವಸಾಧ್ಯತೆಯೂ ಕಡಿಮೆ. ಇನ್ನು ಸಿಂಗಪುರದ ಮೂಲ ನಿವಾಸಿಗಳು ಮತ್ತು ಆ ದೇಶದ ಸದಸ್ಯತ್ವ ಹೊಂದಿರುವವರಿಗೆ ಪ್ರವೇಶ ಕಲ್ಪಿಸಲಾಗಿದೆ. ಆದರೆ,ಬಂದಿಳಿದವರು ಕಡ್ಡಾಯ ವಾಗಿ ಕೋವಿಡ್‌-19 ಪರೀಕ್ಷೆಗೆ ಒಳಗಾಗಬೇಕು. ಜತೆಗೆ 14 ದಿನಗಳು ಕಡ್ಡಾಯವಾಗಿ ಕ್ವಾರಂಟೈನ್‌ ಅವಧಿಯನ್ನು ಪೂರೈಸಬೇಕು ಎಂಬ ನಿಯಮ ವಿಧಿಸಲಾಗಿದೆ.

ಅನಿವಾಸಿ ಭಾರತೀಯರಿಗೆ ಕೊಂಚ ನಿರಾಸೆ :

ಇಂಗ್ಲೆಂಡ್‌ ಸೇರಿದಂತೆ ಎರಡು-ಮೂರುರಾಷ್ಟ್ರಗಳಲ್ಲಿ ರೂಪಾಂತರ ಕೋವಿಡ್ ವೈರಸ್‌ ಹಾವಳಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಮತ್ತೂಂದು ಸುತ್ತಿನ ವಲಸೆ ಶುರುವಾಗುತ್ತಿದೆ. ಈಮಧ್ಯೆಯೇ ಮಂಗಳವಾರ ಆರು ರೂಪಾಂತರವೈರಸ್‌ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು,ಇದರಲ್ಲಿ ಮೂರು ಬೆಂಗಳೂರಿನಲ್ಲೇ ಇವೆ.ಇದರಿಂದ ನಿಯಮಗಳು ಮತ್ತಷ್ಟು ಬಿಗಿಗೊಳ್ಳುವ ಸಾಧ್ಯತೆ ಇದ್ದು, ರಾಜ್ಯದ ಕಡೆ ಮುಖಮಾಡುವಉತ್ಸಾಹದಲ್ಲಿರುವ ಅನಿವಾಸಿ ಭಾರತೀಯರಿಗೆ ಇದು ತುಸು ನಿರಾಸೆ ಉಂಟುಮಾಡಲಿದೆ.

 

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next