Advertisement
ಇದು ಲೀಡ್ಸ್‌ನಲ್ಲಿ ನಡೆಯುವ ಪ್ರಸಕ್ತ ವಿಶ್ವಕಪ್ ಕೂಟದ ಮೊದಲ ಪಂದ್ಯವಾದ್ದರಿಂದ ಇಲ್ಲಿನ ಟ್ರ್ಯಾಕ್ ಹೇಗೆ ವರ್ತಿಸೀತು ಎಂದು ಇನ್ನಷ್ಟೇ ತಿಳಿಯಬೇಕಿದೆ.
Related Articles
1996ರ ಚಾಂಪಿಯನ್ ಆಗಿರುವ ಶ್ರೀಲಂಕಾ ಅನಂತರದ ಕೆಲವು ಕೂಟಗಳಲ್ಲಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿಯನ್ನೆತ್ತಲು ವಿಫಲವಾಗಿತ್ತು. ಸಂಗಕ್ಕರ, ಜಯವರ್ಧನ ಅವರಂಥ ಘಟಾನುಘಟಿ ಬ್ಯಾಟ್ ಮನ್‌ಗಳ ಹೊರತಾಗಿಯೂ ಲಂಕಾ ಫೈನಲ್‌ನಲ್ಲಿ ಎಡವಿತ್ತು. ಈ ಸಲವಂತೂ ತನ್ನ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ದುರ್ಬಲ ತಂಡವನ್ನು ಕಟ್ಟಿಕೊಂಡು ಬಂದಿದೆ. ನಿರೀಕ್ಷೆಯಂತೆ ಶೋಚನೀಯ ಪ್ರದರ್ಶನವನ್ನೇ ನೀಡುತ್ತಿದೆ.
Advertisement
ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ 5 ವಿಕೆಟ್‌ಗಳನ್ನು 14 ರನ್ನಿಗೆ ಕಳೆದುಕೊಂಡದ್ದು, ಅಫ್ಘಾನ್ ವಿರುದ್ಧ 36.5 ಓವರ್‌ಗಳಲ್ಲಿ 201ಕ್ಕೆ ಕುಸಿದದ್ದು, ಇಲ್ಲಿ ಅಂತಿಮ 7 ವಿಕೆಟ್‌ಗಳನ್ನು 36 ರನ್ನಿಗೆ ಉದುರಿಸಿಕೊಂಡದ್ದೆಲ್ಲ ಶ್ರೀಲಂಕಾದ ಕಳಪೆ ಪ್ರದರ್ಶನದ ಕೆಲವು ನಿದರ್ಶನಗಳು. ಇಂಥ ತಂಡ ಜೋಫÅ ಆರ್ಚರ್, ಮಾರ್ಕ ವುಡ್ ದಾಳಿಯನ್ನು ಹೇಗೆ ನಿಭಾಯಿಸೀತೆಂಬುದೇ ದೊಡ್ಡ ಪ್ರಶ್ನೆ.
ಆಂಗ್ಲರ ಭೋರ್ಗರೆತಜಾಸನ್ ರಾಯ್ ಗೈರಲ್ಲೂ ಇಂಗ್ಲೆಂಡ್ ಸಿಡಿಲಬ್ಬರದ ಪ್ರದರ್ಶನ ನೀಡಿದ್ದಕ್ಕೆ ಅಫ್ಘಾನ್ ಪಂದ್ಯ ಸಾಕ್ಷಿಯಾಗಿತ್ತು. ನಾಯಕ ಇಯಾನ್ ಮಾರ್ಗನ್ 17 ಸಿಕ್ಸರ್ ಬಾರಿಸಿದ್ದನ್ನು ಕಲ್ಪಿಸಿಕೊಂಡರೇನೇ ಎದುರಾಳಿ ಬೆಚ್ಚಿಬೀಳುವಂಥ ಸನ್ನಿವೇಶ ಸೃಷ್ಟಿಯಾಗಿದೆ. ಈ ಮುಖಾಮುಖೀಯಲ್ಲಿ ಆತಿಥೇಯ ತಂಡ 6ಕ್ಕೆ 397 ರನ್ ಸೂರೆಗೈದಿತ್ತು. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧ 6ಕ್ಕೆ 386 ರನ್ ಪೇರಿಸಿತ್ತು. ಸಂಭಾವ್ಯ ತಂಡಗಳು
ಶ್ರೀಲಂಕಾ: ದಿಮುತ್ ಕರುಣರತ್ನೆ (ನಾಯಕ), ಕುಸಲ್ ಪೆರೆರ, ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವ, ತಿಸರ ಪೆರೆರ, ಮಿಲಿಂದ ಸಿರಿವರ್ಧನ/ಸುರಂಗ ಲಕ್ಮಲ್, ಇಸುರು ಉದಾನ, ಲಸಿತ ಮಾಲಿಂಗ, ವುವಾನ್ ಪ್ರದೀಪ್. ಇಂಗ್ಲೆಂಡ್
ಜೇಮ್ಸ್ ವಿನ್ಸ್, ಜಾನಿ ಬೇರ್‌ಸ್ಟೊ, ಜೋ ರೂಟ್, ಇಯಾನ್ ಮಾರ್ಗನ್ (ನಾಯಕ), ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಮೊಯಿನ್ ಅಲಿ, ಲಿಯಮ್ ಪ್ಲಂಕೆಟ್/ಆದಿಲ್ ರಶೀದ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಜೋಫÅ ಆರ್ಚರ್.