Advertisement

ಕೋವಿಡ್ ವಿರುದ್ಧ ರಾಮ, ಸೀತೆಯರಂತೆ ಗೆದ್ದು ಬರೋಣ ಎಂದ ಇಂಗ್ಲೆಂಡ್‌ ಪ್ರಧಾನಿ

10:19 PM Nov 07, 2020 | sudhir |

ಲಂಡನ್‌: “ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಮ, ಸೀತೆಯಂತೆ ವಿಜಯಶಾಲಿಗಳಾಗಿ ಬರೋಣ’ ಎಂದು ಯು.ಕೆ. ಪ್ರಧಾನಿ ಬೋರಿಸ್‌ ಜಾನ್ಸನ್‌ ಹೇಳಿದ್ದಾರೆ.

Advertisement

ವರ್ಚುವಲ್‌ ದೀಪಾವಳಿ ಹಿನ್ನೆಲೆಯಲ್ಲಿ ಮಾತನಾಡಿದ ಬೋರಿಸ್‌, “ರಾವಣನನ್ನು ಸೋಲಿಸಿದ ನಂತರ ಭಗವಾನ್‌ ರಾಮ ಮತ್ತು ಆತನ ಪತ್ನಿ ಸೀತೆ ಮರಳುವ ಹಾದಿಯಲ್ಲಿ ಲಕ್ಷಾಂತರ ಹಣತೆಗಳು ಬೆಳಗಿದ್ದವು. ನಾವು ಕೂಡ ಕೊರೊನಾವನ್ನು ಸೋಲಿಸಿ, ನಮ್ಮ ಬದುಕಿನ ಹಾದಿಯಲ್ಲಿ ಗೆಲುವಿನ ಬೆಳಕು ಕಾಣೋಣ’ ಎಂದಿದ್ದಾರೆ.

“ನಮ್ಮ ಮುಂದಿನ ಹಾದಿಗಳ ತುಂಬಾ ದೊಡ್ಡ ಸವಾಲುಗಳೇ ಇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಅವುಗಳನ್ನು ಯಶಸ್ವಿಯಾಗಿ ಎದುರಿಸುತ್ತೇವೆಂಬ ನಂಬಿಕೆ ನನಗಿದೆ. ದೀಪಾವಳಿ ನಮಗೆ ಈ ಸಂದೇಶ ರವಾನಿಸುತ್ತದೆ. ಕತ್ತಲೆ ವಿರುದ್ಧ ಬೆಳಕು, ಕೆಟ್ಟದವರ ವಿರುದ್ಧ ಒಳ್ಳೆಯತನ, ಅಜ್ಞಾನದ ವಿರುದ್ಧ ಜ್ಞಾನ ಗೆದ್ದೇ ಗೆಲ್ಲುತ್ತದೆ’ ಎಂದಿದ್ದಾರೆ. ಕೊರೊನಾ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡಿನಲ್ಲಿ 2ನೇ ಲಾಕ್‌ಡೌನ್‌ ಘೋಷಿಸಲಾಗಿದೆ.

ಇದನ್ನೂ ಓದಿ:ತುಮಕೂರು :ತನಿಖೆಯ ವೇಳೆ ಪೋಲೀಸರ ಮೇಲೆ ಮಚ್ಚಿನಿಂದ ದಾಳಿ ನಡೆಸಿದ ಆರೋಪಿ ಕಾಲಿಗೆ ಗುಂಡಿನ ಏಟು!

Advertisement

Udayavani is now on Telegram. Click here to join our channel and stay updated with the latest news.

Next