Advertisement

27 ವರ್ಷಗಳ ಬಳಿಕ ಸೆಮಿಫೈನಲ್‌ಗೆ ಇಂಗ್ಲೆಂಡ್‌

03:02 PM Jul 04, 2019 | Team Udayavani |

ಕ್ರಿಕೆಟ್‌ ಜನಕರ ನಾಡು ಇಂಗ್ಲೆಂಡ್‌ 1992ರ ಬಳಿಕ ಇದೇ ಮೊದಲ ಸಲ ವಿಶ್ವಕಪ್‌ ಕೂಟದ ಉಪಾಂತ್ಯ ತಲುಪಿದೆ. 1992ರಲ್ಲಿ ಪಾಕ್‌ ವಿರುದ್ಧ ಫೈನಲ್‌ನಲ್ಲಿ ಇಂಗ್ಲೆಂಡ್‌ ಸೋತಿದ್ದೇ ಕೊನೆ. ಅಲ್ಲಿಂದ ಬಳಿಕ ಇಂಗ್ಲೆಂಡ್‌ ಸೆಮೀಸ್‌ ಕೂಡ ಪ್ರವೇಶಿಸಿರಲಿಲ್ಲ.

Advertisement

ಸೆಮೀಸ್‌ ಲೆಕ್ಕಾಚಾರ
ಆಸ್ಟ್ರೇಲಿಯ, ಭಾರತ ಈಗಾಗಲೇ ಸೆಮಿಫೈನಲ್‌ಗೆ ತಲುಪಿವೆ. ಇದೀಗ ಇಂಗ್ಲೆಂಡ್‌ 3ನೇ ತಂಡವಾಗಿ ಸೆಮೀಸ್‌ಗೆ ಲಗ್ಗೆ ಇಟ್ಟಿದೆ. 4ನೇ ತಂಡವಾಗಿ ನ್ಯೂಜಿಲೆಂಡ್‌ ಸೆಮೀಸ್‌ಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಪಾಕ್‌ ಸೆಮೀಸ್‌ ಪ್ರವೇಶಿಸಬೇಕಾದರೆ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 316 ರನ್‌ಗೂ ಹೆಚ್ಚಿನ ಅಂತರದಲ್ಲಿ ಗೆಲ್ಲಬೇಕು.

ಒಂದು ವೇಳೆ ಬಾಂಗ್ಲಾ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರೆ ಪಾಕ್‌ ಸೆಮಿಫೈನಲ್‌ ಕನಸು ಅಲ್ಲೇ ಛಿದ್ರಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next