Advertisement
ಫ್ರಾನ್ಸ್‌ನ ಸೆಮಿಫೈನಲ್ ಎದುರಾಳಿ ಮೊರೊಕ್ಕೊ. ವಿಶ್ವಕಪ್ ಇತಿಹಾಸದಲ್ಲಿ ಸೆಮಿಫೈನಲ್ ತಲುಪಿದ ಆಫ್ರಿಕಾದ ಮೊದಲ ತಂಡವೆಂಬುದು ಮೊರೊಕ್ಕೊ ಹೆಗ್ಗಳಿಕೆ. ಅದು ಸೂಪರ್‌ಸ್ಟಾರ್ ರೊನಾಲ್ಡೊ ಅವರ ನೆಚ್ಚಿನ ಪೋರ್ಚುಗಲ್ ತಂಡವನ್ನು 1-0 ಅಂತರದಿಂದ ಹಿಮ್ಮೆಟ್ಟಿಸಿತು.
ಫ್ರಾನ್ಸ್ 17ನೇ ನಿಮಿಷದಲ್ಲೇ ಆಂಗ್ಲರ ಮೇಲೆ ಆಕ್ರಮಣಗೈದು ಮೊದಲ ಗೋಲು ಸಿಡಿಸಿತು. ಔರೇನಿಯನ್ ಶೋಮೆನಿ ಗೋಲು ವೀರ. ವಿರಾಮದ ತನಕ ಫ್ರಾನ್ಸ್ ಈ ಮುನ್ನಡೆಯನ್ನು ಕಾಯ್ದುಕೊಂಡಿತು. 54ನೇ ನಿಮಿಷದಲ್ಲಿ ಹ್ಯಾರಿ ಕೇನ್ ಪೆನಾಲ್ಟಿ ಗೋಲಿನ ಮೂಲಕ ಪಂದ್ಯವನ್ನು ಸಮಬಲಕ್ಕೆ ತರಲು ಯಶಸ್ವಿಯಾದರು. ಇದು ಹ್ಯಾರಿ ಕೇನ್ ಅವರ 53ನೇ ಅಂತಾರಾಷ್ಟ್ರೀಯ ಗೋಲ್.
Related Articles
Advertisement
ಇದನ್ನು ಕೂಡ ಸರಿದೂಗಿಸಿ ಪಂದ್ಯವನ್ನು ಮತ್ತೆ ಅರ್ಧ ಗಂಟೆಗೆ ಎಳೆಯುವ ಅವಕಾಶ ಇಂಗ್ಲೆಂಡ್ ಮುಂದಿತ್ತು. ಆದರೆ 84ನೇ ನಿಮಿಷದಲ್ಲಿ ಹ್ಯಾರಿ ಕೇನ್ ಅವರ ಪೆನಾಲ್ಟಿ ಸ್ಪಾಟ್‌ಕಿಕ್ ಒಂದು ಗೋಲುಪಟ್ಟಿಯ ಮೇಲ್ಭಾಗದಿಂದ ಹಾದುಹೋಯಿತು. ಇಂಗ್ಲೆಂಡ್ ಕೂಟದಿಂದ ನಿರ್ಗಮಿಸಿತು.
ಅಮ್ಮನೊಂದಿಗೆ ನರ್ತಿಸಿದ ಆಟಗಾರ!ಒಂದು ಕಡೆ ಕ್ವಾರ್ಟರ್ ಫೈನಲ್‌ನಲ್ಲಿ ಸೋತ ಪೋರ್ಚುಗಲ್ ಆಟಗಾರರು ಅಳುತ್ತ ಹೊರನಡೆದರೆ ಇನ್ನೊಂದು ಕಡೆ ಮೊರೊಕ್ಕೊ, ವಿಶ್ವಕಪ್ ಸೆಮಿಫೈನಲ್‌ಗೇರಿದ ಆಫ್ರಿಕಾ ಖಂಡದ ಮೊದಲ ದೇಶವೆನಿಸಿಕೊಂಡಿತು. ಇದೊಂದು ವಿಡಂಬನೆ, ವಿಪರ್ಯಾಸ ಎನ್ನದೇ ವಿಧಿಯಿಲ್ಲ. ಸೋತ ದುಃಖದಲ್ಲಿ ರೊನಾಲ್ಡೊ ಅಳುತ್ತ ಹೊರಹೋಗುವಾಗ, ಮೊರೊಕ್ಕೊ ಆಟಗಾರ ಸೋಫಿಯನ್ ಬೌಫಾಲ್ ತನ್ನ ಅಮ್ಮನನ್ನು ಅಂಕಣಕ್ಕೆ ಕರೆತಂದು ನರ್ತಿಸಿದರು. ಅಮ್ಮ ತನ್ನನ್ನು ಅತ್ಯಂತ ಕಷ್ಟಪಟ್ಟು ಸಾಕಿದ ನೆನಪು ಬೌಫಾಲ್ ಅವರಲ್ಲಿ ಇನ್ನೂ ಹಸಿಯಾಗಿತ್ತು. ತನ್ನ ಅತ್ಯಂತ ಸಂತಸದ ಸಂದರ್ಭದಲ್ಲಿ ಅವರು ತಾಯಿಯನ್ನು ನೆನಪಿಸಿಕೊಂಡು, ಇದನ್ನು ಹಂಚಿಕೊಂಡರು. ಅಳುತ್ತ ನಡೆದ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಪ್ ಗೆಲುವಿನ ಕನಸು ಶನಿವಾರ ರಾತ್ರಿ “ಅಲ್ ತುಮಾಮ ಸ್ಟೇಡಿಯಂ’ನಲ್ಲಿ ಛಿದ್ರಗೊಂಡಿದೆ. ಮೊರೊಕ್ಕೊ ವಿರುದ್ಧ ಮುಗ್ಗರಿಸಿದ ಪೋರ್ಚುಗಲ್ ಕೂಟದಿಂದ ನಿರ್ಗಮಿಸಿತು. ರೊನಾಲ್ಡೊ ಕಣ್ಣೀರಿಡುತ್ತ ಮೈದಾನ ತೊರೆದರು. ಈ ಸಂದರ್ಭದಲ್ಲಿ ಅವರನ್ನು ಮೊರೊಕ್ಕೊ ಆಟಗಾರರು ಸಮಾಧಾನಪಡಿಸಿದ ದೃಶ್ಯ ಫುಟ್‌ಬಾಲ್ ಅಭಿಮಾನಿಗಳ ಕಣ್ಣನ್ನು ತೇವಗೊಳಿಸಿತು. ವಿಶ್ವ ಫುಟ್ ಬಾಲ್‌ನಲ್ಲಿ ರೊನಾಲ್ಡೊ ಅದೆಷ್ಟೋ ಮಹಾನ್ ಸಾಧನೆ ಮಾಡಿರಬಹುದು, ಆದರೆ ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯನೆನಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಮುಂದಿನ ವಿಶ್ವಕಪ್ ವೇಳೆ ರೊನಾಲ್ಡೊಗೆ 41 ವರ್ಷ ತುಂಬುವುದರಿಂದ ಆಡುವ ಸಾಧ್ಯತೆ ಕಡಿಮೆ. ಹೀಗಾಗಿ ಅವರ ಪಾಲಿಗೆ ಇದೇ ಅಂತಿಮ ಅವಕಾಶವಾಗಿತ್ತು. ಸೋಲಿಗೆ ನಾನೇ ಹೊಣೆ: ಹ್ಯಾರಿ ಕೇನ್
ಕೊನೆಯ ಹಂತದಲ್ಲಿ ಪೆನಾಲ್ಟಿ ಹೊಡೆತವೊಂದನ್ನು ಗೋಲಾಗಿಸುವಲ್ಲಿ ವಿಫಲರಾದ ಇಂಗ್ಲೆಂಡ್ ಕಪ್ತಾನ ಹ್ಯಾರಿ ಕೇನ್, ಸೋಲಿನ ಹೊಣೆಯನ್ನು ತಾನೇ ಹೊರುವುದಾಗಿ ಹೇಳಿದ್ದಾರೆ. “ಅತ್ಯಂತ ನಿರಾಸೆಯಾಗಿದೆ. ಅನುಮಾನವೇ ಬೇಡ, ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಗೆಲ್ಲಲು ನಾವು ಗರಿಷ್ಠ ಪ್ರಯತ್ನವನ್ನೇ ಮಾಡಿದೆವು. ಬಹುಶಃ ಸಣ್ಣ ಅಂತರದಲ್ಲಿ ಇದು ವಿಫಲವಾಯಿತು ಎಂದು ಭಾವಿಸುವೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಬಹಳ ನೋವಾಗುತ್ತಿದೆ. ಈ ಆಘಾತದಿಂದ ಹೊರಬರಲು ಇನ್ನೂ ಸ್ವಲ್ಪ ಕಾಲ ಬೇಕು. ಇವೆಲ್ಲ ಕ್ರೀಡೆಯ ಭಾಗಗಳೇ ಆಗಿವೆ ಎಂದಷ್ಟೇ ಸಮಾಧಾನಪಡಬೇಕು’ ಎಂಬುದಾಗಿ ಹ್ಯಾರಿ ಕೇನ್ ಪ್ರತಿಕ್ರಿಯಿಸಿದರು. ಸೆಮಿಫೈನಲ್‌ಗೆ ಫ್ರಾನ್ಸ್ ಅಧ್ಯಕ್ಷ
ಮೊರೊಕ್ಕೊ ವಿರುದ್ಧದ ಫಿಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮಾಕ್ರಾನ್ ಕತಾರ್‌ಗೆ ತೆರಳಲಿದ್ದಾರೆ. ಫ್ರಾನ್ಸ್ ಕ್ರೀಡಾ ಸಚಿವ ಔಡಿ ಕ್ಯಾಸ್ಟೆರ ಇದನ್ನು “ಫ್ರಾನ್ಸಿàನ್‌ಫೊ ರೇಡಿಯೋ’ದಲ್ಲಿ ಖಚಿತಪಡಿಸಿದ್ದಾರೆ. ಪ್ರವಾಸದ ವಿವರ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಅಳುತ್ತಿದ್ದ ನೇಮರ್‌ಗೆ ಬಾಲಕನ ಸಾಂತ್ವನ
ನೇಮರ್ ಅವರ ವಿಶ್ವಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಅವರ ಭವಿಷ್ಯ ಮುಂದೇನು ಎನ್ನುವುದೂ ಖಚಿತವಿಲ್ಲ. ಸದ್ಯ ಅವರ ವಯಸ್ಸು 30 ಮಾತ್ರ. ಹಾಗಾಗಿ ಇನ್ನೊಂದು ವಿಶ್ವಕಪ್ ಅವರಿಗೆ ಕಷ್ಟವೇನಲ್ಲ.
ಆದರೆ ವಿಷಯ ಇದಲ್ಲ. ಸೋತ ದುಃಖದಲ್ಲಿ ನೇಮರ್ ಅಳುತ್ತಿರುವಾಗ ಎದುರಾಳಿ ಕ್ರೊವೇಶಿಯ ತಂಡದ ಆಟಗಾರನ ಪುತ್ರ ನೇಮರ್‌ಗೆ ಬಂದು ಸಮಾಧಾನ ಮಾಡಿದ್ದು. ಕ್ರೊವೇಶಿಯದ ಇವಾನ್ ಪೆರಿಸಿಕ್ ಅವರ ಪುತ್ರ ಲಿಯೊನಾರ್ಡೊ ಓಡಿಬಂದ. ಬ್ರೆಝಿಲ್ ವ್ಯವಸ್ಥಾಪಕರು ಹುಡುಗನನ್ನು ವಾಪಸ್ ಕಳಿಸುವ ಯತ್ನದಲ್ಲಿದ್ದಾಗ, ನೇಮರ್ ಹುಡುಗನನ್ನು ತಬ್ಬಿಕೊಂಡರು. ಆತ ನೇಮರ್‌ಗೆ ಸಮಾಧಾನ ಮಾಡಿದ.