Advertisement

England; ಲಂಕಾ ಸರಣಿಗೆ ಮೊದಲು ಗಾಯಗೊಂಡ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್

07:24 PM Aug 13, 2024 | Team Udayavani |

ಲಂಡನ್:‌ ಇಂಗ್ಲೆಂಡ್‌ ನ ಹಂಡ್ರೆಡ್‌ ಲೀಗ್‌ ನಲ್ಲಿ ಆಡಲಿಳಿದಿದ್ದ ಟೆಸ್ಟ್‌ ನಾಯಕ ಬೆನ್‌ ಸ್ಟೋಕ್ಸ್‌ ಗಾಯಗೊಂಡಿದ್ದಾರೆ. ಹಂಡ್ರೆಡ್‌ ನ ನಾರ್ಥರ್ನ್‌ ಸೂಪರ್‌ ಚಾರ್ಜರ್ಸ್‌ ತಂಡದ ಪರವಾಗಿ ಆಡುತ್ತಿದ್ದ ಸೋಕ್ಸ್‌ ಅವರನ್ನು ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಲಾಗಿದೆ.

Advertisement

33 ವರ್ಷದ ಆಲ್ ರೌಂಡರ್ ಸ್ಟೋಕ್ಸ್ ಮ್ಯಾಂಚೆಸ್ಟರ್‌ನಲ್ಲಿ ನಡೆದ ತಮ್ಮ ಪಂದ್ಯದಲ್ಲಿ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರು. ಇಬ್ಬರು ಸೂಪರ್‌ಚಾರ್ಜರ್ಸ್ ಸಿಬ್ಬಂದಿ ಸದಸ್ಯರ ಸಹಾಯದಿಂದ ಸ್ಟ್ಯಾಂಡ್‌ ಗೆ ಬಂದರು.

ಇಂಗ್ಲೆಂಡ್ ಇನ್ನು ಕೇಲವೇ ದಿನಗಳಲ್ಲಿ ಲಂಕಾ ವಿರುದ್ದ ಟೆಸ್ಟ್‌ ಸರಣಿ ಆಡಲಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಆಗಸ್ಟ್ 21 ರಂದು ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಪ್ರಾರಂಭವಾಗಲಿದೆ.

ಈತನ್ಮಧ್ಯೆ, ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಝಾಕ್ ಕ್ರಾಲಿ ಬೆರಳು ಮುರಿದ ಕಾರಣ ಶ್ರೀಲಂಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ನಡೆದ ಮೂರನೇ ಟೆಸ್ಟ್ ಗೆಲುವಿನ ಸಂದರ್ಭದಲ್ಲಿ ಕ್ಯಾಚ್ ಹಿಡಿಯಲು ಯತ್ನಿಸಿದಾಗ ಕ್ರಾಲಿ ಅವರ ಬಲಗೈ ಕಿರುಬೆರಳಿಗೆ ಗಾಯವಾಗಿತ್ತು.

Advertisement

ಲಂಕಾ ಸರಣಿಗೆ ತಂಡ

ಬೆನ್ ಸ್ಟೋಕ್ಸ್ (ನಾಯಕ), ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಜೋರ್ಡಾನ್ ಕಾಕ್ಸ್, ಬೆನ್ ಡಕೆಟ್, ಡಾನ್ ಲಾರೆನ್ಸ್, ಆಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮೀ ಸ್ಮಿತ್, ಓಲಿ ಸ್ಟೋನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

Advertisement

Udayavani is now on Telegram. Click here to join our channel and stay updated with the latest news.

Next