Advertisement

ಮುಖ ಮುಟ್ಟಿಕೊಳ್ಳಲು ಬಿಡಲ್ಲ ಈ ವಾಚ್‌!

01:21 AM Jul 02, 2020 | Hari Prasad |

ಲಂಡನ್‌: ಸೋಂಕು ಕಾಣಿಸಿಕೊಂ­ಡಾ­ಗಿನಿಂದ ಎಲ್ಲರಿಂದಲೂ ಒಂದೇ ಸಲಹೆ, ಎಚ್ಚರಿಕೆ ಮಾತು, ‘ಮುಖ ಮುಟ್ಟಿಕೊಳ್ಳಬೇಡ’.

Advertisement

ಅದನ್ನು ನೆನಪಿಸಿಕೊಳ್ಳುವುದು ಕಷ್ಟದ ಕೆಲಸವಲ್ಲ. ಒಂದು ವಾಚ್‌ ಅನ್ನು ಕೈಗೆ ಕಟ್ಟಿಕೊಂಡರೆ ಮುಗಿಯಿತು.

ನಿಮ್ಮ ಕೈ ಮುಖದ ಬಳಿ ಹೋದೊಡನೆ, ಸದ್ದು ಮಾಡಿ ಎಚ್ಚರಿಸುತ್ತದೆ. ಇಂಗ್ಲೆಂಡ್‌ನ‌ ಬ್ರಿಸ್ಟಾಲ್‌ ನಗರದ 15 ವರ್ಷದ ಬಾಲಕ ಮ್ಯಾಕ್ಸ್‌ ಮೆಲಿಯಾ, ಬಹುದಿನಗಳ ಪರಿಶ್ರಮದ ಬಳಿಕ ಒಂದು ಸ್ಮಾರ್ಟ್‌ ಕೈಗಡಿಯಾರ­ವನ್ನು ಅಭಿವೃದ್ಧಿಪಡಿಸಿದ್ದಾನೆ.

ಆ ಗಡಿಯಾರ ಎಷ್ಟು ಸ್ಮಾರ್ಟ್‌ ಎಂದರೆ, ನೀವು ನಿಮಗೆ ಅರಿವಿಲ್ಲದೆಯೇ ನಿಮ್ಮ ಕೈ ಅನ್ನು ಮುಖದ ಬಳಿ ತೆಗೆದುಕೊಂಡು ಹೋಗುತ್ತಿದ್ದಂತೆ, ಜೋರಾಗಿ ಬೀಪ್‌ ಸದ್ದು ಮಾಡುತ್ತದೆ. ಆ ಸದ್ದು ಕೇಳಿದ ಬಳಿಕ ಎಚ್ಚೆತ್ತು ನೀವೇ ಕೈ ಹಿಂದೆ ತೆಗೆದುಕೊಳ್ಳುತ್ತೀರಿ. ಈ ಬಗ್ಗೆ ಬಾಲಕನ ತಂದೆ ಖುಷಿ ಪಟ್ಟುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next