Advertisement

ತವರಲ್ಲೇ ಮುಖಭಂಗ: ಇಂಗ್ಲೆಂಡ್ ವಿರುದ್ಧ ಎಡವಿದ ಆಸ್ಟ್ರೇಲಿಯ

11:18 PM Oct 12, 2022 | Team Udayavani |

ಕ್ಯಾನ್‌ಬೆರಾ: ಟಿ20 ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ತವರಲ್ಲೇ ಮುಖಭಂಗ ಅನುಭವಿಸಿದೆ.

Advertisement

ವಿಶ್ವಕಪ್‌ ಕ್ಷಣಗಣನೆ ಮೊದಲ್ಗೊಂಡ ಹೊತ್ತಿನಲ್ಲೇ ಬದ್ಧ ಎದುರಾಳಿ ಇಂಗ್ಲೆಂಡ್‌ ಎದುರಿನ ದ್ವಿತೀಯ ಪಂದ್ಯವನ್ನೂ 8 ರನ್ನುಗಳಿಂದ ಕಳೆದುಕೊಂಡು ಸರಣಿ ಸೋತಿದೆ.

ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ 7 ವಿಕೆಟಿಗೆ 178 ರನ್‌ ಪೇರಿಸಿದರೆ, ಆಸ್ಟ್ರೇಲಿಯದಿಂದ 6 ವಿಕೆಟಿಗೆ 170 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲೂ ಇಂಗ್ಲೆಂಡ್‌ 8 ರನ್‌ ಜಯ ಸಾಧಿಸಿತ್ತು. ಅಂತಿಮ ಮುಖಾಮುಖಿ ಶುಕ್ರವಾರ ನಡೆಯಲಿದೆ.

ಇಂಗ್ಲೆಂಡ್‌ ಪರ ಡೇವಿಡ್‌ ಮಲಾನ್‌ ಕೇವಲ 49 ಎಸೆತಗಳಿಂದ 82 ರನ್‌ ಸಿಡಿಸಿದರೆ (7 ಫೋರ್‌, 4 ಸಿಕ್ಸರ್‌), ಮೊಯಿನ್‌ ಅಲಿ 27 ಎಸೆತ ಎದುರಿಸಿ 44 ರನ್‌ ಬಾರಿಸಿದರು (4 ಬೌಂಡರಿ, 2 ಸಿಕ್ಸರ್‌).
ದೊಡ್ಡ ಮೊತ್ತವನ್ನು ಬೆನ್ನಟ್ಟಿ ಹೊರಟ ಆಸ್ಟ್ರೇಲಿಯಕ್ಕೆ ಆಂಗ್ಲರ ಬೌಲಿಂಗ್‌ ಒಗಟಾಗಿ ಕಾಡಿತು. ಅದರಲ್ಲೂ ಸ್ಯಾಮ್‌ ಕರನ್‌ ಹೆಚ್ಚು ಘಾತಕವಾಗಿ ಎರಗಿದರು (25ಕ್ಕೆ 3). ಅವರ ಅಂತಿಮ ಓವರ್‌ನಲ್ಲಿ ಆಸೀಸ್‌ 22 ರನ್‌ ತೆಗೆಯಬೇಕಾದ ಒತ್ತಡಕ್ಕೆ ಸಿಲುಕಿತು. ಕಮಿನ್ಸ್‌ ಮೊದಲ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದರು. ಆದರೆ ಉಳಿದ ಎಸೆತಗಳಲ್ಲಿ ಕರನ್‌ ಉತ್ತಮ ನಿಯಂತ್ರಣ ಸಾಧಿಸಿದರು. ಮಿಚೆಲ್‌ ಮಾರ್ಷ್‌ ಸರ್ವಾಧಿಕ 45, ಟಿಮ್‌ ಡೇವಿಡ್‌ 40 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ 7 ವಿಕೆಟಿಗೆ 178 (ಮಲಾನ್‌ 82, ಮೊಯಿನ್‌ 44, ಸ್ಟೋಯಿನಿಸ್‌ 34ಕ್ಕೆ 3, ಝಂಪ 26ಕ್ಕೆ 2). ಆಸ್ಟ್ರೇಲಿಯ-6 ವಿಕೆಟಿಗೆ 170 (ಮಾರ್ಷ್‌ 45, ಡೇವಿಡ್‌ 40, ಕರನ್‌ 25ಕ್ಕೆ 3).

Advertisement

ಪಂದ್ಯಶ್ರೇಷ್ಠ: ಡೇವಿಡ್‌ ಮಲಾನ್‌.

Advertisement

Udayavani is now on Telegram. Click here to join our channel and stay updated with the latest news.

Next