Advertisement
ಬ್ರಿಸ್ಟನ್‌ನ ಗಾಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯ 1988ರ ಬಳಿಕ ನಡೆದ ಯಾವುದೇ ಟೆಸ್ಟ್ ಪಂದ್ಯಗಳಲ್ಲಿ ಸೋಲಿಲ್ಲ. ಇಂಗ್ಲೆಂಡ್ ಈ ಕ್ರೀಡಾಂಗಣದಲ್ಲಿ 1986ರಿಂದ ಯಾವುದೇ ಟೆಸ್ಟ್ ಪಂದ್ಯ ಗೆದ್ದಿಲ್ಲ. ಆದರೆ ಈ ಆ್ಯಶಸ್ ಸರಣಿ ವೇಳೆ ಇತಿಹಾಸ ಬದಲಿಸಲು ಇಂಗ್ಲೆಂಡ್ ಪ್ರಯತ್ನಿಸಲಿದೆ. ಯಾಕೆಂದರೆ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಇತ್ತೀಚೆಗಿನ ದಿನಗಳಲ್ಲಿ ಅಮೋಘ ಆಟದ ಪ್ರದರ್ಶನ ನೀಡುತ್ತಿರುವುದು ಆಗಿದೆ. ಕಳೆದ ಐದು ಆ್ಯಶಸ್ ಸರಣಿಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ಇಂಗ್ಲೆಂಡ್ ಈ ಬಾರಿಯೂ ಗೆಲ್ಲುವ ಉತ್ಸಾಹದೊಂದಿಗೆ ಆಸ್ಟ್ರೇಲಿಯಕ್ಕೆ ಆಗಮಿಸಿದೆ.
Related Articles
Advertisement
ಪಿಚ್: ಇಲ್ಲಿನ ಪಿಚ್ ಎರಡು ಅಥವಾ ಮೂರನೇ ದಿನ ವೇಗ ಮತ್ತು ಬೌನ್ಸ್‌ಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದ್ದು ಆಬಳಿಕ ನಿಧಾನಗತಿಯ ಬೌಲರ್‌ಗಳಿಗೆ ಸಹಕಾರಿಯಾಗಬಹುದು.
ಅಂಕಿ-ಅಂಶಗಾಬಾ ಪಿಚ್‌ನಲ್ಲಿ 1988ರ ಬಳಿಕ ಆಸ್ಟ್ರೇಲಿಯ ಟೆಸ್ಟ್ ಪಂದ್ಯದಲ್ಲಿ ಸೋಲನ್ನು ಕಂಡಿಲ್ಲ. ಇದೇ ವೇಳೆ ಇಂಗ್ಲೆಂಡ್ ಇಲ್ಲಿ 1986ರಿಂದ ಯಾವುದೇ ಟೆಸ್ಟ್ ಪಂದ್ಯ ಗೆದ್ದಿಲ್ಲ. ಉಭಯ ರಾಷ್ಟ್ರಗಳ ನಡುವೆ ನಡೆದ ಕಳೆದ ಐದು ಸರಣಿಗಳಲ್ಲಿ ಇಂಗ್ಲೆಂಡ್ ನಾಲ್ಕು ಆ್ಯಶಸ್ ಸರಣಿಯನ್ನು ಗೆದ್ದಿದೆ. 2015ರಲ್ಲಿ ನಡೆದ ಈ ಹಿಂದಿನ ಆ್ಯಶಸ್ ಸರಣಿ ವೇಳೆ ಆಸ್ಟ್ರೇಲಿಯ ಪರ ಆಡಿದ ಸ್ಮಿತ್, ವಾರ್ನರ್, ಲಿಯೋನ್, ಹ್ಯಾಝೆಲ್‌ವುಡ್, ಮಾರ್ಷ್ ಮತ್ತು ಸ್ಟಾರ್ಕ್ ಹಾಗೂ ಇಂಗ್ಲೆಂಡ್ ಪರ ಆಡಿದ ಕುಕ್, ರೂಟ್, ಬೇರ್‌ಸ್ಟೋ, ಮೊಯಿನ್, ಬ್ರಾಡ್ ಮತ್ತು ಆ್ಯಂಡರ್ಸನ್ ಈ ಬಾರಿ ಆಡುತ್ತಿದ್ದಾರೆ. ಕ್ರೆಗ್ ಮೆಕ್‌ಡರ್ಮಟ್ ಅವರ ದಾಖಲೆಯನ್ನು ಮುರಿಯಲು ಲಿಯೋನ್ ಅವರಿಗೆ ಇನ್ನು 23 ವಿಕೆಟ್ ಪಡೆಯುವ ಅಗತ್ಯವಿದೆ. ಒಂದು ವೇಳೆ ಈ ಸಾಧನೆ ಮಾಡಿದರೆ ಅವರು ಆಸ್ಟ್ರೇಲಿಯದ ಪರ ಗರಿಷ್ಠ ಟೆಸ್ಟ್ ವಿಕೆಟ್ ಕಿತ್ತ ಸಾಲಿನಲ್ಲಿ ಆರನೇ ಸ್ಥಾನ ಪಡೆಯಲಿದ್ದಾರೆ. ಆಸ್ಟ್ರೇಲಿಯ: ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್, ಡೇವಿಡ್ ಮಿಲ್ಲರ್, ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್ (ನಾಯಕ), ಪೀಟ್ ಹ್ಯಾಂಡ್‌ಕಾಂಬ್, ಶಾನ್ ಮಾರ್ಷ್, ಟಿಮ್ ಪೈನೆ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ನಥನ್ ಲಿಯೋನ್, ಜೋಶ್ ಹ್ಯಾಝೆಲ್‌ವುಡ್., ಗ್ಲೆನ್ ಮ್ಯಾಕ್ಸ್‌ವೆಲ್. ಇಂಗ್ಲೆಂಡ್: ಅಲಸ್ಟೇರ್ ಕುಕ್, ಮಾರ್ಕ್ ಸ್ಟೋನ್‌ಮ್ಯಾನ್, ಜೇಮ್ಸ್ ವಿನ್ಸ್, ಜೋಸ್ ರೂಟ್ (ನಾಯಕ), ಡೇವಿಡ್ ಮಲನ್, ಮೊಯಿನ್ ಅಲಿ, ಜಾನಿ ಬೇರ್‌ಸ್ಟೋ, ಕ್ರಿಸ್ ವೋಕ್ಸ್, ಜ್ಯಾಕ್ ಬಾಲ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.