Advertisement
ಕಬಕ-ಪುತ್ತೂರು ರೈಲ್ವೇ ನಿಲ್ದಾಣ ಬಳಿಯ ಎಪಿಎಂಸಿ ಲೆವೆಲ್ ಕ್ರಾಸ್ ಗೇಟ್ ಸಂಖ್ಯೆ 105ಕ್ಕೆ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಾಣ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸಾರ್ವ ಜನಿಕ ವಲಯದ ಹಲವು ವರ್ಷಗಳ ಬೇಡಿಕೆ ಯಾಗಿದೆ. ಈ ಹಿನ್ನೆಲೆಯಲ್ಲಿ ಎಪಿಎಂಸಿ ಆಡಳಿತವು ಸಂಸದರ ಮೂಲಕ ರೈಲ್ವೇ ಇಲಾ ಖೆಗೆ ಮನವಿಯನ್ನೂ ಮಾಡಿತ್ತು.
ಮೇಲ್ಸೇತುವೆ ಅಥವಾ ಕೆಳ ಸೇತುವೆಯ ನಿರ್ಮಾಣಕ್ಕೆ ಬೇಕಾದ ಜಾಗ ವ್ಯಾಪ್ತಿ, ಪಕ್ಕದಲ್ಲೇ ನೀರು ಹರಿಯುವ ತೋಡು ಇರುವುದರಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಂದಾಜು ನಡೆಸಿದರು. ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಯಸಾಧನ ವರದಿ ಸಲ್ಲಿಸಲಾಗುವುದು. ಅನಂತರ ಸರ್ವೇ ಕಾರ್ಯ ಸೇರಿದಂತೆ ಮುಂದಿನ ಕೆಲಸಗಳು ನಡೆಯಲಿವೆ ಎಂದು ಎಂಜಿನಿಯರ್ ನವಾಹತ್ ಸಿಂಗ್ ತಿಳಿಸಿದ್ದಾರೆ.
Related Articles
Advertisement
ನೈಜ ಸಮಸ್ಯೆಯ ದರ್ಶನ!ರೈಲ್ವೇ ಕ್ರಾಸಿಂಗ್‌ನಲ್ಲಿ ಆಗಾಗ ವಾಹನಗಳ ಸಂಚಾರಕ್ಕೆ ತಡೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಾಣ ಮಾಡಬೇಕೆನ್ನುವ ಸಾರ್ವಜನಿಕ ಒತ್ತಡವಿರುವುದರಿಂದ ಇಲಾಖೆಯ ಕಡೆಯಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಮಂಗಳವಾರ ಮಧ್ಯಾಹ್ನ ಎಂಜಿನಿಯರ್‌ಗಳು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲೇ ಮಂಗಳೂರು- ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬಂದಾಗ ವಾಹನಗಳ ಕ್ಯೂ ನಿಲ್ಲುವ ನೈಜ ಸಮಸ್ಯೆ ಅಧಿಕಾರಿಗಳಿಗೆ ತಿಳಿಯಿತು. ಸಮರ್ಪಕ ಆಗಲಿ
ಭವಿಷ್ಯದಲ್ಲಿ ಸಮಸ್ಯೆ ಉಂಟಾಗದಂತೆ ಸಮರ್ಪಕವಾಗಿ ಸೇತುವೆ ನಿರ್ಮಾಣ ಆಗಬೇಕು. ಮೇಲ್ಸೇತುವೆಗೆ 30 ಕೋಟಿ ರೂ. ವೆಚ್ಚ ಮತ್ತು ಹೆಚ್ಚು ಅವಧಿ ತೆಗೆದುಕೊಳ್ಳುತ್ತದೆ. ಕೆಳ ಸೇತುವೆ ನಿರ್ಮಾಣ ಮಾಡಿದರೆ 10 ಕೋಟಿ ರೂ. ವೆಚ್ಚದಲ್ಲಿ 1 ವರ್ಷದ ಅವಧಿಯಲ್ಲಿ ನಿರ್ಮಾಣ ಮಾಡಬಹುದು ಎಂದು ರೈಲ್ವೇ ಬಳಕೆದಾರರ ಹೋರಾಟ ಸಮಿತಿಯ ಸುದರ್ಶನ್ ಮುರ ಮನವಿ ಮಾಡಿದರು.