Advertisement

ಮುಂದಿನ ವರ್ಷದಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂಜಿನಿಯರ್ಸ್ ದಿನ ಆಚರಣೆ: ಸಿಎಂ ಬೊಮ್ಮಾಯಿ

02:19 PM Sep 15, 2022 | Team Udayavani |

ಬೆಂಗಳೂರು: ಸರ್ಕಾರವೇ ಇಂಜಿನಿಯರಿಂಗ್ ದಿನಾಚರಣೆ ಆಚರಿಸಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ. ಮುಂದಿನ ವರ್ಷದಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂಜಿನಿಯರ್ಸ್ ದಿನ ಆಚರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಕರ್ನಾಟಕ ಇಂಜಿನಿಯರ್ಸ್ ಸೇವಾ ಸಂಘ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿದರು.

ಇದನ್ನೂ ಓದಿ:ಸುಕೇಶ್ ಚಂದ್ರಶೇಖರ್ ಕೇಸ್ ಗೆ ಹೊಸ ಟ್ವಿಸ್ಟ್: ಜೈಲಿನಲ್ಲಿ ಭೇಟಿಯಾಗಿದ್ದರು ನಾಲ್ವರು ನಟಿಯರು

ಬಳಿಕ ಮಾತನಾಡಿದ ಅವರು, ಸರ್ ಎಂ. ವಿಶ್ವೇಶ್ವರಯ್ಯ ಅವರು ಜೀವನಪೂರ್ತಿ ಜನರಿಗಾಗಿ ಬದುಕಿದ್ದಾರೆ. ನಿಜವಾಗಿ ನಾಡು ಕಟ್ಟಿದವರು ಅವರು. ಡ್ಯಾಂ ಕಟ್ಟಿದ್ದು ಮಾತ್ರವಲ್ಲದೇ ಅನೇಕ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿದರು. ಮೈಸೂರು ರಾಜರ ಆಶ್ರಯದಲ್ಲಿ ಅನೇಕ ಕೆಲಸ ಮಾಡಿದ್ದಾರೆ. ಕೆ.ಆರ್‌.ಎಸ್ ಡ್ಯಾಂ ನಿರ್ಮಾಣ ಮಾಡಿ ಅನೇಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲೇ ಸರ್ ಎಂ ವಿಶ್ವೇಶ್ವರಯ್ಯ ಅನೇಕ ಸೇವೆ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

Koo App

ಮಹಾನ್‌ ಮೇಧಾವಿ, ಅಸಾಮಾನ್ಯ ತಂತ್ರಜ್ಞ, ಭಾರತ ರತ್ನ ಸರ್.‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣೆಗಳು. ಅವರ ಜನ್ಮದಿನದ ಸ್ಮರಣಾರ್ಥ ಇಂಜಿನಿಯರ್‌ಗಳು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಅಭಿಯಂತರರ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಎಲ್ಲಾ ಪರಿಶ್ರಮಿ ಇಂಜಿನಿಯರ್‌ಗಳಿಗೆ ಅಭಿಯಂತರರ ದಿನದ ಶುಭಾಶಯಗಳು. #EngineersDay

BJP KARNATAKA (@BJP4Karnataka) 15 Sep 2022

Advertisement

Udayavani is now on Telegram. Click here to join our channel and stay updated with the latest news.

Next