Advertisement

ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ 6 ಮಂದಿಯಿಂದ ಗ್ಯಾಂಗ್‌ರೇಪ್‌ 

06:21 AM Jan 08, 2019 | Team Udayavani |

ರೂರ್‌ಕೆಲಾ: 22 ರ ಹರೆಯದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ 6 ಮಂದಿ ಕಾಮುಕರು 2 ದಿನಗಳ ಕಾಲ ಗ್ಯಾಂಗ್‌ ರೇಪ್‌ ನಡೆಸಿದ ಹೇಯ ಘಟನೆ ಜಾರ್ಖಂಡ್‌ನ‌ ಚಕ್ರಧರಪುರ್‌ನ ಅರಣ್ಯದಲ್ಲಿ  ಡಿಸೆಂಬರ್‌ 30 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ಒಡಿಶಾದ ರೂರ್‌ಕೆಲಾದಾ ರೈಲ್ವೇ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ರೈಲು ನಿಲ್ದಾಣದಿಂದ ವಿದ್ಯಾರ್ಥಿನಿಯನ್ನು ಆಕೆಯ ಸಹೋದರನ ಸ್ನೇಹಿತ ಡ್ರಾಪ್‌ ಕೊಡುವ ನೆಪದಲ್ಲಿ  ಮನೆಗೆ ಕರೆದೊಯ್ದು  ಬಳಿಕ ಸ್ನೇಹಿತರನ್ನು ಕರೆಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿ ಕಾಡಿನಲ್ಲಿ ಎಸೆದು ಹೋಗಿದ್ದಾರೆ.

ಜನವರಿ 1 ರಂದು ಈ ಘಟನೆ ನಡೆದಿದ್ದು ಇದುವರೆಗೆ ಯಾವೊಬ್ಬ ಆರೋಪಿಯನ್ನೂ ಬಂಧಿಸಲಾಗಿಲ್ಲ. 

ಸದ್ಯ ವಿದ್ಯಾರ್ಥಿನಿಗೆ ರೂರ್‌ಕೆಲಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಸಹೋದರ ಮಾಧ್ಯಮಗಳಿಗೆ ತಿಳಿಸಿದ್ದಾನೆ.

ಪೊಲೀಸರು ಆರೋಪಿಗಳ ಬಂಧನಕ್ಕಾಗಿ 2 ತಂಡಗಳನ್ನು ರಚಿಸಿದ್ದಾರೆ.

Advertisement

2 ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ಸರಕಾರ ಮಹಿಳೆಯರ ಸುರಕ್ಷತೆಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದರು. 

ಕಚೇರಿಗಳ ದಾಖಲೆಯಂತೆ ಒಡಿಶಾದಲ್ಲಿ 2014 ರಿಂದ 2017 ರ ವರೆಗೆ 5,422 ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ರೇಪ್‌ ಪ್ರಕರಣಗಳು ದಾಖಲಾಗಿದ್ದು, 671 ಗ್ಯಾಂಗ್‌ರೇಪ್‌ಗ್ಳು ದಾಖಲಾಗಿವೆ.135 ಜನರಿಗೆ ಶಿಕ್ಷೆಯಾಗಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಮನೇಕಾ ಗಾಂಧಿ ಅವರು ಪಟ್ನಾಯಕ್‌ ಅವರಿಗೆ ಪತ್ರ ಬರೆದು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಸಾಧ್ಯವಗಲು ಪೊಲೀಸರಿಗೆ ತರಬೇತಿ ನೀಡಲು ಸಲಹೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next