ಬೆಂಗಳೂರು: ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದಸೀಟು ಗಳಿಗೆ 2019-20ನೇ ಸಾಲಿನಲ್ಲಿ ಶೇ.10 ರಷ್ಟು ಶುಲ್ಕ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರಿಂದ ಎರಡು ವರ್ಷಗಳಲ್ಲಿ ಎಂಜಿನಿಯರಿಂಗ್ ಪದವಿ ಕೋರ್ಸ್‌ನ ಶುಲ್ಕ ಶೇ.18ರಷ್ಟು ಹೆಚ್ಚಳ ಮಾಡಿದಂತಾಗಿದೆ.
ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಕರ್ನಾಟಕ ಖಾಸಗಿ ಎಂಜಿನಿಯರಿಂಗ್ ಕಾಲೇಜಗಳ ಆಡಳಿತ ಮಂಡಳಿ ಒಕ್ಕೂಟದ ಸದಸ್ಯ ರೊಂದಿಗೆ ಶನಿವಾರ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಮುಖ್ಯ ಮಂತ್ರಿಗಳು ಹಾಗೂ ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಜತೆಗೆ ಚರ್ಚಿಸಿ ಅಂತಿಮವಾಗಿ ಎಂಜಿನಿ ಯ ರಿಂಗ್ ಪದವಿ ಕೋರ್ಸ್‌ಗಳ ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
2018-19ನೇ ಸಾಲಿನಲ್ಲಿ ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ನಿರ್ಧರಿಸಿದ್ದೆವು. ಆದರೆ, ನಿವೃತ್ತ ನ್ಯಾ.ಶೈಲೇಂದ್ರ ಕುಮಾರ್ ಅವರ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿಯು ಶೇ.8ರಷ್ಟು ಶುಲ್ಕ ಹೆಚ್ಚಳಕ್ಕಷ್ಟೇ ಅವಕಾಶ ನೀಡಿದ್ದರಿಂದ ಅಷ್ಟಕ್ಕೆ ಅಂತಿಮಗೊಳಿಸಿದ್ದೆವು. ಯುಜಿಸಿ ವೇತನ ಪರಿಷ್ಕರಣೆಯ ಜತೆಗೆ ಇತರೆ ಭತ್ಯೆಗಳು ಹೆಚ್ಚಾಗಿದ್ದು, ಕಾಲೇಜು ನಿರ್ವಹಣೆಯೂ ಕಷ್ಟವಾಗುತ್ತಿರುವುದರಿಂದ ಈ ಬಾರಿಯಾದರೂ ಶೇ.15ರಷ್ಟು ಏರಿಕೆ ಮಾಡುವಂತೆ ಆಡಳಿತ ಮಂಡಳಿಯವರು ಕೋರಿಕೊಂಡಿದ್ದರು. ಅಂತಿಮವಾಗಿ ಶೇ.10 ಏರಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.
ಸರ್ಕಾರಿ ಕಾಲೇಜುಗಳಲ್ಲಿ ವ್ಯತ್ಯಾಸವಿಲ್ಲ: ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಖಾಸಗಿ ಎಂಜಿನಿಯರಿಂಗ್ ಕೋಟಾದ ಸೀಟಿನ ಶುಲ್ಕ 59,400 ರೂ. ಹಾಗೂ 53,460 ರೂ. ಇತ್ತು. 2019-20ರಲ್ಲಿ ಅದು 65,340 ರೂ. ಹಾಗೂ 58,806ರೂ.ಗೆ ಏರಿಕೆಯಾಗಲಿದೆ. ಹಾಗೆಯೇ ಖಾಸಗಿ ಸೀಟು(ಕಾಮೆಡ್-ಕೇ ಸೀಟು) 2018-19ರಲ್ಲಿ 1,30,680 ರೂ. ಹಾಗೂ 1,83,600 ರೂ. ಇತ್ತು. 2019-20ಕ್ಕೆ ಅದು 1,43,748 ರೂ. ಹಾಗೂ 2,01,960 ರೂ.ಗೆ ಹೆಚ್ಚಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಆನ್‌ಲೈನ್‌ಸೇವೆ; ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳು ಸೇವಾಸಿಂಧು ಯೋಜನೆಯ ಮೂಲಕ ಪ್ರವೇಶ ಸಾರಾಂಶ, ವ್ಯಾಸಂಗ ಪ್ರಮಾಣ ಪತ್ರ, ಗ್ರಂಥಾಲಯ ಬಾಕಿ ಪ್ರಮಾಣ ಪತ್ರ, ಬೇಬಾಕಿ ಪ್ರಮಾಣ ಪತ್ರ ಹಾಗೂ ತಾತ್ಕಾಲಿಕ ಪದವಿ ಪ್ರಮಾಣ ಪತ್ರ ಪಡೆಯಬಹುದು ಎಂದು ಸಚಿವಜಿ.ಟಿ.ದೇವೇಗೌಡ ವಿವರಿಸಿದ ರು.
ಸಂಪ್ರದಾನ ಇ-ಪೋರ್ಟಲ್ ಲೋಕಾರ್ಪಣೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಮೂಲ
ಸೌಕರ್ಯ ಸುಧಾರಣೆಗಾಗಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ನಿಧಿ ಸಂಗ್ರಹಿಸಲು ಸಂಪ್ರದಾನ ಇ-ಪೋರ್ಟಲ್ ಲೋಕಾರ್ಪಣೆ ಮಾಡಲಾಯಿತು. ದಾನಿಗಳು ನೇರವಾಗಿ ಈ ವೆಬ್‌ಸೈಟ್ ಮೂಲಕ ತಮಗೆ ಬೇಕಾದ ಕಾಲೇಜಿಗೆ ಅನುದಾನ ನೀಡಬಹುದು. ಎಂದು ಸಚಿವರು ವಿವರಿಸಿದರು.
ಖಾಸಗಿ ಎಂಜಿನಿಯರಿಂಗ್ ಕಾಲೇಜು ಗಳ ಆಡಳಿತ ಮಂಡಳಿಯಿಂದ ಶುಲ್ಕ ಹೆಚ್ಚಳಕ್ಕೆ ಒತ್ತಡ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜತೆಗೆ ಚರ್ಚೆ ಮಾಡಿ ಶೇ.10ರಷ್ಟು ಶುಲ್ಕ
ಹೆಚ್ಚಳಕ್ಕೆ ನಿರ್ಧರಿಸಿದ್ದೇವೆ.
● ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ