ನಾನು ಒಂದು ಇಂಜಿನಿಯರ್ ಸ್ಟೂಟೆಂಡ್ ಎಂದು ಹೇಳುವುದಕ್ಕೆ ಹೆಮ್ಮೆ ಪಡುತ್ತಿದ್ದೇನೆ. ಮೊದಲ ಸಲ ನಾನು ಕಾಲೇಜ್‌ಗೆ ಹೋದಾಗ ತುಂಬಾ ಭಯವಾಗಿತ್ತು. ಏಕೆಂದರೆ ಅಲ್ಲಿನ ಸ್ಟೂಡೆಂಟ್ಸ್ ಹೇಗಿರಬಹುದು, ಲೆಕ್ಚರರ್ ಹೇಗಿರಬಹುದು ಅಂತ. ಆದರೆ, ದಿನ ಕಳೆದ ಹಾಗೆ ಕ್ಲಾಸ್‌ನಲ್ಲಿ ಎಲ್ಲರೂ ಪರಿಚಯವಾದರು. ಹೀಗೆಯೇ ಒಂದು ತಿಂಗಳಾದ ಮೇಲೆ ಇಂಟರ್‌ನಲ್ ಪರೀಕ್ಷೆ ಬಂದೇಬಿಟ್ಟಿತು. ಎಲ್ಲರೂ ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್ ತೆಗೆದ್ವಿ . ನಾವು ಎಷ್ಟೇ ಮೋಜು-ಮಸ್ತಿ ಮಾಡಿದರೂ ಪರೀಕ್ಷೆ ಸಮಯದಲ್ಲಿ ತುಂಬಾ ಗಂಭೀರವಾಗಿರುತ್ತಿದ್ದೆವು. ಪರೀಕ್ಷೆ , ಮಾರ್ಕ್ಸ್, ಎಟೆಂಡೆನ್ಸ್ ಶಾಟೇಜ್ ಇವೆಲ್ಲದರ ನಡುವಲ್ಲೂ ಕೆಲವು ಆಚರಣೆಗಳನ್ನು ಆಚರಿಸುತ್ತಿದ್ದೆವು. ಓಣಂ, ದೀಪಾವಳಿ ಹೀಗೆ ಕೆಲವು ಹಬ್ಬಗಳನ್ನು ಆಚರಿಸಿ ಖುಷಿ ಪಡುತ್ತಿದ್ದೆವು. ಕೆಲವೊಮ್ಮೆ ಕ್ಲಾಸ್‌ನಲ್ಲಿ ಬಂಕ್ ಮಾಡಿ ಗಮ್ಮತ್ ಮಾಡಿದ್ದೂ ಉಂಟು. ಕೆಲವರು ಹಾಜರಿ ಕಡಿಮೆ ಇದೆ ಎಂದು ಹಾಜರಿ ಲಿಸ್ಟ್‌ಗೆ ಸಹಿ ಹಾಕಿ ಸುಸ್ತಾದವರೂ ಇದ್ದಾರೆ. ಮತ್ತೆ ಪುನಃ ಪರೀಕ್ಷೆ, ಲ್ಯಾಬ್ ಎಕ್ಸಾಮ್ಸ್ ಅಂತೆಲ್ಲ ಎಕ್ಸಾಮ್ ಮುಗಿಸಿ ಕೊನೆಗೂ ಫಸ್ಟ್ ಸೆಮ್ ಮುಗಿದು ಸೆಕೆಂಡ್ ಸೆಮ್‌ಗೆ ಕಾಲಿಟ್ಟೆವು. ಆಗ ನಾವು ಇನ್ನೂ ಚುರುಕಾಗಿದ್ದೆವು. ಸಂತೋಷದಿಂದ ಕಾಲೇಜ್‌ಗೆ ಬಂದು, ಪಾಠ ಕೇಳಿ, ಅದರ ನಡುವೆ ಲೆಕ್ಚರ್ನವರಿಗೆ ಹಿಂದಿನಿಂದ ತಮಾಷೆ ಮಾಡಿ, ಕೆಲವು ಸ್ಟೂಡೆಂಟ್ಸ್‌ನವರಿಗೆ ಕಮೆಂಟ್ ಹೊಡುª , ಟೀಸಿಂಗ್, ಕಾಪಿ ಹೊಡೆದದ್ದು ಉಂಟು. ಹೀಗೆ ಹಲವಾರು ತರೆಲ ಕೆಲಸಗಳನ್ನು ಮಾಡ್ತಿದ್ದೆವು.
ಮತ್ತೆ ಕಾಲೇಜ್ ಡೇಯಲ್ಲಿ ನಾವು ಹಾಕಿದ ಸ್ಟೆಪ್ ಮರೆಯೋಕೆ ಸಾಧ್ಯವಿಲ್ಲ. ಇಂಜಿನಿಯರ್ ಅಂದ್ರೆ ನೆನಪಾಗೋದು ಕೈಯಲ್ಲಿ ಒಂದು ಬುಕ್, ಬೆನ್ನಿಗೆ ಒಂದು ಬ್ಯಾಗ್ ಹಾಕಿ ಕಾಲೇಜ್‌ಗೆ ಹೋಗಿ, ಮತ್ತೆ ಪುನಃ ಮನೆಗೆ ಬರುವುದು ಅಲ್ಲ. ಕಾಲೇಜಿನಲ್ಲಿ ಅವರ ಲೋಕವೇ ಬೇರೆ. ಮತ್ತೆ ಮತ್ತೆ ಪರೀಕ್ಷೆಗಳು ಎನ್ನುವ ಭೂತ ಬಂದೇಬಿಡ್ತದೆ. ಪರೀಕ್ಷೆ ಹತ್ತಿರ ಬರುವಾಗ ಒಂದು ವಾರ ಮುಂಚೆಯೇ ಝೆರಾಕ್ಸ್ ನೋಟ್ಸನ್ನು ಹುಡುಕಬೇಕು. ಅದನ್ನು ಓದಿ ಮನದಟ್ಟು ಮಾಡಿಕೊಳ್ಳಬೇಕು. ಆಮೇಲೆ ಸೆಮಿಸ್ಟರ್ ರಜೆ. ನಾವು ಪ್ರೈಮರಿಯಲ್ಲಿ ಇರುವಾಗ “ರಜೆ ಯಾವಾಗ ಬರ್ತದೆ’ ಅಂತ ಕಾಯ್ತಿದ್ವಿ. ಆದ್ರೆ ಈಗ “ರಜೆ ಯಾಕಪ್ಪ ಬರ್ತದೆ’ ಅಂತ ಅನ್ನಿಸ್ತದೆ. ರಜೆ ಸಿಕ್ಕಿದ ತಕ್ಷಣ “ರಜೆಯಲ್ಲಿ ಎಲ್ಲಿಗೆ ಹೋಗುವುದು’ ಎನ್ನುವ ಪ್ಲ್ರಾನ್ ಮಾಡ್ತೇವೆ. ಆಮೇಲೆ ಫ್ರೆಂಡ್ಸ್ ಜೊತೆ ಸುತ್ತಾಡಿ ಅಂತೂ ಇಂತೂ ಒಂದು ತಿಂಗಳು ರಜೆ ಕಳೆದು ಸೆಕೆಂಡ್ ಇಯರ್‌ಗೆ ಕಾಲಿಡ್ತೇವೆ. ಆಗ ನಾವು ಒಂದು ವರ್ಷ ಸೀನಿಯರ್ ಎಂಬ ಅಹಂಕಾರ. ಮತ್ತೆ ಪುನಃ ಕಾಲೇಜ್, ಕ್ಲಾಸ್, ಲೆಕ್ಚರ್. ಮೋಜುಮಸ್ತಿ ಇದೇ ಪುನರಾವರ್ತನೆ. ಒಂದು ರೀತಿಯ ಸುಂದರವಾದ ಜೀವನ.
ಇಂಜಿನಿಯರ್‌ಗಳಿಂದ ದೇಶಕ್ಕೆ ಒಳಿತಾಗಿದೆಯೇ ಹೊರತು ನಷ್ಟವಾಗಲಿಲ್ಲ. ಇಂಜಿನಿಯರ್ ಲೈಫ್ನ ಅನುಭವಿಸಿ ಒಳ್ಳೆ ಇಂಜಿನಿಯರ್ಗಳಾಗಿ. ನಮ್ಮ ಕಾಲೇಜ್‌ನಲ್ಲಿ ಕಳೆದ ನೆನಪುಗಳು ಹಾಗೂ ಕಾಲೇಜ್‌ನ ಜೀವನ ಹಾಗೇ ಇರಲಿ ಅನ್ನಿಸ್ತದೆ. ಆದರೆ ಲೈಫ್ ಈಸ್ ಲೈಕ್ ಎ ರಿವರ್. ಇಟ್ ನೆವರ್ ಸ್ಟಾಪ್ಸ್. ನಮಗೆ ಸಿಕ್ಕ ಜೀವನವನ್ನು ಸಂತೋಷದಿಂದ ಸ್ವೀಕರಿಸಿ ಅನುಭವಿಸಬೇಕು.
ನಿಶಾ
ದ್ವಿತೀಯ ಬಿಇ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೂಡುಬಿದ್ರಿ