Advertisement

ಇಂಜಿನಿಯರ್‌ ವೃತ್ತಿಗಿದೆ ಅತ್ಯುನ್ನತ ಗೌರವ

10:01 AM Sep 16, 2017 | |

ಜಗಳೂರು: ಸಮಾಜದಲ್ಲಿ ಇಂಜಿನಿಯರ್‌ ವೃತ್ತಿಗೆ ತನ್ನದೇ ಆದ ಗೌರವವಿದೆ. ಹೀಗಾಗಿ ನಿರ್ವಹಿಸುವ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗದ ಸಹಾಯಕ ಕಾರ್ಯಪಾಲ ಅಭಿಯಂತರ ಚಂದ್ರಶೇಖರ್‌ ಕರೆ ನೀಡಿದರು.ಇಲ್ಲಿನ ಜಿಪಂ ಇಂಜಿನಿಯರಿಂಗ್‌ ಕಚೇರಿಯಲ್ಲಿ ಇಂಜಿನಿಯರ್‌ ದಿನಾಚರಣೆಯ ಅಂಗವಾಗಿ ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

Advertisement

ಸರ್‌.ಎಂ.ವಿಶ್ವೇಶ್ವರಯ್ಯನವರು ತಮ್ಮ ವೃತ್ತಿಯಲ್ಲಿ ದಕ್ಷತೆ ಮತ್ತು ಪ್ರಾಮಾಣಕತೆ ಮೆರೆಯುವುದರ ಮೂಲಕ ಇಂಜಿನಿಯರ್‌ ವೃತ್ತಿಗೆ ಗೌರವ ತಂದುಕೊಟ್ಟರು. ಕೆಆರ್‌ಎಸ್‌ನಂತಹ ಬೃಹತ್‌ ನೀರಾವರಿ ಕಾಮಗಾರಿಗಳು ಅವರ ಪ್ರತಿಭೆಗೆ ನಿದರ್ಶನವಾಗಿವೆ. ಅವರ ತಾಂತ್ರಿಕತೆಯ ಕೌಶಲ್ಯವನ್ನು ವಿಶ್ವವೇ ಇತ್ತ ತಿರುಗಿ ನೊಡುವಂತೆ ಮಾಡಿದೆ ಎಂದರು.

ತಾಪಂ ಸದಸ್ಯ ಶಂಕರ್‌ನಾಯ್ಕ ಮಾತನಾಡಿ ಸರ್‌ ಎಂ.ವಿಶ್ವೇಶ್ವರಯ್ಯನವರು ಸೇವಾ ಮನೋಭಾವನೆ ಹೊಂದಿದ್ದರು. ತಮ್ಮ ಜೀವಿತಾವಧಿ ಯಲ್ಲಿ ಅವರೆಂದು ಲಾಭವನ್ನು ನಿರೀಕ್ಷಿಸಲಿಲ್ಲ. ಅಂತಹ ದಕ್ಷ ಪ್ರಾಮಾಣಿಕರ ಹೆಸರಿನಲ್ಲಿ ಇಂಜಿನಿಯರ್‌ ದಿನಾಚರಣೆ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದರು.

ಸಹಾಯಕ ಇಂಜಿನಿಯರ್‌ಗಳಾದ ಮಹಾಂತೇಶ್‌, ದಯಾನಂದಸ್ವಾಮಿ, ಕಿರಿಯ ಇಂಜಿನಿಯರ್‌ಗಳಾದ ಮಂಜುನಾಥ್‌, ನಂದೀಶ್‌, ನಾಗರಾಜ್‌, ಹನುಮಂತಪ್ಪ, ಸಿಬ್ಬಂದಿ ಹುಲಿಯಪ್ಪ ರೆಡ್ಡಿ, ಖಾದರ್‌ ಸಾಬ್‌, ಗೋವಿಂದರೆಡ್ಡಿ, ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ, ಗುತ್ತಿಗೆದಾರರಾದ ಹಾಲೇಶ್‌, ಮಾರಪ್ಪನಾಯಕ, ಪಟೇಲ್‌ ಮಾರಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next