Advertisement
ಜಿಲ್ಲಾ ಚುನಾವಣಾಧಿಕಾರಿಯವರ ಅಧೀನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾ ರರು, ಮಂಗಳೂರು ಪಾಲಿಕೆಯ ಅಧಿ ಕಾರಿಗಳಿಗೆ ವಿವಿಧ ಹೊಣೆ ವಹಿಸಲಾಗಿದೆ.
Related Articles
Advertisement
ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳ ಲ್ಲೂ ಕಟ್ಟಡ ಪರವಾನಿಗೆ ಪಡೆಯು ವುದು, ನೀರು, ಒಳಚರಂಡಿ ಸಂಬಂ ಧಿಸಿದ ದೂರು ದುಮ್ಮಾನಗಳನ್ನು ಬಗೆಹರಿ ಸಲು ಅಧಿಕಾರಿಗಳು ಸಿಗುವುದು ತುಸು ಕಷ್ಟ. ಇನ್ನು ಮುಂದೆ ಅಧಿಕಾರಿಗಳಿಗೆ ಕರ್ತವ್ಯದ ಜತೆಯಲ್ಲೇ ತರಬೇತಿ, ಸಭೆಗಳು ನಿರಂತರವಾಗಿ ನಡೆಯುತ್ತಲೇ ಇರಲಿವೆ.ಅದರ ನಡುವೆ ಅಧಿಕಾರಿಗಳು ಚುನಾವಣೆ ನೆಪ ಹೇಳಿ ಕೆಲಸ ಮಾಡದಿರುವ ಸಾಧ್ಯತೆಗಳೂ ಇವೆ. ಹಾಗಾಗಿ ತುರ್ತು ಕೆಲಸಗಳಿಗಾಗಿ ಒಂದು ಡೆಸ್ಕ್ ಹಾಗೂ ಅಧಿಕಾರಿಗಳನ್ನು ಮಹಾನಗರಪಾಲಿಕೆಯಲ್ಲಿ ನಿಯೋಜನೆ ಮಾಡಬೇಕು ಎನ್ನುತ್ತಾರೆ ನಾಗರಿಕ ಹಿತರಕ್ಷಣ ವೇದಿಕೆಯ ಜಿ. ಹನುಮಂತ ಕಾಮತ್.
ಕುಡಿಯುವ ನೀರಿನ ಬಿಸಿಚುನಾವಣೆಗೆ ಈ ಬಾರಿ ಕುಡಿಯುವ ನೀರಿನ ಬಿಸಿಯೂ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಕಳೆದ ನಾಲ್ಕಾರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರ್ಚ್‌ನಲ್ಲಿ ಮಳೆಯೇ ಆಗದಿರುವುದು ಕುಡಿಯುವ ನೀರಿನ ತತ್ವಾರ ಹೆಚ್ಚಲು ಕಾರಣ. ಇಂತಹ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ಅಧಿಕಾರಿಗಳಿಲ್ಲದೆ ಹೋದರೂ ಅದು ಚುನಾವಣೆಗೆ ಹಿನ್ನಡೆ ತರುವ ಸಾಧ್ಯತೆಯೂ ಇಲ್ಲದಿಲ್ಲ. ಅಧಿಕಾರಿಗಳಿಗೆ ಚುನಾವಣ
ಕೆಲಸ ಇದ್ದರೂ ಅವರು ದೈನಂದಿನ ಜನರ ಸೇವೆಗಳನ್ನು ಕೈಬಿಡು ವಂತಿಲ್ಲ, ಈ ಬಗ್ಗೆ ನಾನು ಎಲ್ಲ ಅಧಿಕಾರಿ ಗಳಿಗೆ ಸೂಚನೆ ನೀಡಲಿ ದ್ದೇನೆ. ನೀರಿನ ಸಮಸ್ಯೆ ಇರ ಬಹುದು, ಯಾವುದೇ ಇತರ ಸೇವೆಗಳಿರ ಬಹುದು, ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಪ್ರತ್ಯೇಕ ಕೌಂಟರ್ ಮಾಡುವಂತೆ ಸೂಚಿಸಿದ್ದೇನೆ.
– ರವಿಕುಮಾರ್ ಎಂ.ಆರ್, ದ.ಕ ಜಿಲ್ಲಾಧಿಕಾರಿ ಯಾವತ್ತಿನಂತೆ ಚುನಾವಣ ಕರ್ತವ್ಯದಲ್ಲಿ ಸರಕಾರಿ ಅಧಿಕಾರಿಗಳು ಪಾಲ್ಗೊಳ್ಳಬೇಕಾಗುತ್ತದೆ. ಕೆಲವು ಸೇವೆಗಳಲ್ಲಿ ವ್ಯತ್ಯಯ ಆಗುತ್ತದೆ ನಿಜ, ಆದಷ್ಟೂ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗು ವುದು.
– ಚನ್ನಬಸಪ್ಪ, ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ