ಹೆಬ್ರಿ: ಮಕ್ಕಳನ್ನು ಕೇವಲ ಅಂಕ ಗಳಿಕೆಯ ವಸ್ತುವನ್ನಾಗಿಸದೆ ಸಂಗೀತ, ಚಿತ್ರ ಕಲೆ, ನೃತ್ಯ ಮೊದಲಾದ ಪಠ್ಯೇತರ ಚಟುವಟಿಕೆ ಗಳಲ್ಲಿ ತೊಡಗಿಸಿ ಅವರ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿ ಈಗಾಗಲೇ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದರ ಮೂಲಕ ಹೆಸರುವಾಸಿ ಯಾದ ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಚಿತ್ರಕಲೆ, ಟ್ರಾÂಕ್ ಸಂಗೀತ, ಶಾಸ್ತ್ರೀಯ ಸಂಗೀತ ಮೊದಲಾದ ಪಠ್ಯೇತರ ಚಟುವಟಿಕೆಯ ತರಗತಿಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಹೆಬ್ರಿ ವಲಯ ಅರಣ್ಯ ಅಧಿಕಾರಿ ಲೋಹಿತ್ ಹೇಳಿದರು.
ಅವರು ಜು. 2ರಂದು ಹೆಬ್ರಿ ಶ್ರೀರಾಮ್ ಟವರ್‌ನಲ್ಲಿರುವ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಆರಂಭ ಗೊಂಡ ಸಂಗೀತ ನಮ್ಮದು ಧ್ವನಿ ನಿಮ್ಮದು ಕಾರ್ಯಕ್ರಮದಡಿಯಲ್ಲಿ ಟ್ರಾÂಕ್ ಹಾಡುಗಳಿಗೆ ಧ್ವನಿ ಸೇರಿಸಿ ಹಾಡುವ ವಿಶೇಷ ಸಂಗೀತ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಅರ್ಧಕ್ಕೆ ನಿಲ್ಲಿಸಬೇಡಿ: ಮಕ್ಕಳ ಪ್ರತಿಭೆ ಯನ್ನು ಆರಂಭದಲ್ಲಿಯೇ ಗುರುತಿಸಲು ಸಾಧ್ಯವಿಲ್ಲ ನಿರಂತರ ಪ್ರಯತ್ನ ಹಾಗೂ ತರ ಬೇತಿಯ ಮೂಲಕ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಸಂಗೀತ ಹಾಗೂ ಇತರ ಯಾವುದೇ ಕ್ಷೇತ್ರಗಳಲ್ಲಿ ತರಬೇತಿಗೆ ಕಳುಹಿಸಿದಾಗ ಅರ್ಧಕ್ಕೆ ನಿಲ್ಲಿಸಬೇಡಿ ಎಂದು ಪ್ರಶಸ್ತಿ ಪುರಸ್ಕೃತ ಗಾಯಕ ಮುಟ್ಲಪಾಡಿ ಉದಯ ಶೆಟ್ಟಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ಮಾತನಾಡಿ ಪ್ರತಿ ರವಿವಾರ ಬೆಳಗ್ಗೆ 10ರಿಂದ 1ರ ತನಕ ಟ್ರಾÂಕ್ ಹಾಡುಗಳಿಗೆ ಧ್ವನಿ ಸೇರಿಸಿ ಹಾಡುವ ವಿಶೇಷ ಸಂಗೀತ ತರಗತಿ ನಡೆಯಲಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಸಂಗೀತ ತರಬೇತುದಾರ ಉದಯ್ ಅಜೆಕಾರು, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಕಲಾವಿದ ಪುನೀತ್ ಎಸ್. ಮೈಸೂರು, ಪ್ರಕಾಶ್ ಶೆಟ್ಟಿ ಕಲ್ಲಿಲ್ಲು, ಸುನೀತಾ ಅರುಣ್ ಹೆಗ್ಡೆ ಮೊದಲಾದವರಿದ್ದರು. ರಮ್ಯಾ ಕಾಪೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.