Advertisement
ಈ ನಿಯಮದಡಿ ಕೊರೊನಾ ಸೋಂಕಿಗೆ ಸಂಬಂಧಿಸಿ ದಂತೆ ಗಂಟಲು ದ್ರಾವಣ, ರಕ್ತ ಮಾದರಿ ಗಳನ್ನು ತೆಗೆಯಲು ಹಾಗೂ ಪರೀಕ್ಷಿಸಲು ಯಾವುದೇ ಖಾಸಗಿ ಪ್ರಯೋಗಾಲಯಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ಅಧಿಕಾರವಿಲ್ಲ. ಅಂತಹ ಎಲ್ಲ ಮಾದರಿಗಳನ್ನು ಭಾರತ ಸರಕಾರದ ಮಾರ್ಗ ಸೂಚಿ ಯಂತೆ ಸಂಗ್ರಹಿಸಿ ಸಂಬಂಧಿತ ಪ್ರಯೋ ಗಾಲಯಗಳಿಗೆ ಕಳುಹಿಸುವಂತೆ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಕೊರೊನಾ ಸೋಂಕು ಶಂಕಿತ ವೃದ್ಧ (76) ಸೋಂಕು ಲಕ್ಷಣ ಜತೆಗೆ ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾವಿಗೀಡಾಗಿದ್ದಾರೆ.
Related Articles
ಈ ನಡುವೆ, ಕಲಬುರಗಿಯಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದು ಆತಂಕ ಸೃಷ್ಟಿಸಿತ್ತು. ಸೌದಿ ಅರೇಬಿಯಾ ದಿಂದ ಮರಳಿದ್ದ ಇವರು ಜ್ವರದಿಂದ ಬಳಲುತ್ತಿದ್ದು, ಕೊರೊನಾ ಸೋಂಕು ಪರೀಕ್ಷೆಗೆ ಒಳಪಟ್ಟಿದ್ದರು. ವರದಿ ಬರುವ ಮೊದಲೇ ಅವರು ಸಾವನ್ನಪ್ಪಿದ್ದಾರೆ.
Advertisement
ಕೊರೊನಾ ಶಂಕಿತ ವೃದ್ಧ ತೀವ್ರ ಅಸ್ತಮಾ, ಅಧಿಕ ರಕ್ತದೊತ್ತಡದಂತಹ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವ ರಿಗೆ ನ್ಯುಮೋನಿಯಾ ಕೂಡ ಇತ್ತು. ಸಾರ್ವಜನಿಕರು ಅನಗತ್ಯ ಭಯ ಪಡ ಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಭಯದಿಂದ ಬರಬೇಡಿರಾಜ್ಯದ ಬಹುತೇಕ ಕಡೆ ನಮಗೂ ಕೊರೊನಾ ತಗಲಿರಬಹುದು ಎಂಬ ಭಯದಿಂದ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅನಗತ್ಯ ಭಯಪಡದೆ ಸೋಂಕಿನ ಲಕ್ಷಣಗಳಿದ್ದರೆ ಮಾತ್ರ ಆಸ್ಪತ್ರೆ ಕಡೆ ಬನ್ನಿ. ಇಲ್ಲದಿದ್ದರೆ ವಿದೇಶದಿಂದ ಬಂದ 28 ದಿನ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಬಳಿಕ ಮುಕ್ತವಾಗಿ ಹೊರಗಡೆ ಓಡಾಟ ನಡೆಸಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಸಲಹೆ ನೀಡಿದರು. ಸೋಂಕಿತರ ಸಂಖ್ಯೆ ಏರಿಕೆಯಾಗಿಲ್ಲ
ರಾಜ್ಯದ ಎರಡು ವಿಮಾನ ನಿಲ್ದಾಣ ಹಾಗೂ ಎರಡು ಬಂದರುಗಳಲ್ಲಿ ಜ. 21ರಿಂದ ಮಾ. 10ರ ವರೆಗೂ ಒಟ್ಟು ಒಂದು ಲಕ್ಷ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ಈ ಪೈಕಿ 1,142 ಮಂದಿಯನ್ನು ಅವಲೋಕನಕ್ಕೆ ನೋಂದಾಯಿಸಿಕೊಳ್ಳಲಾಗಿತ್ತು. ಇದರಲ್ಲಿ 287 ಮಂದಿಯ 28 ದಿನಗಳ ಅವಲೋಕನ ಅವಧಿ ಮುಕ್ತಾಯವಾಗಿದೆ. 526 ಮಂದಿ ಸೋಂಕು ಪರೀಕ್ಷೆ ಮಾಡಿದ್ದು, 441 ಮಂದಿ ವರದಿ ನೆಗೆಟಿವ್ ಬಂದಿವೆ. ಸದ್ಯ 11 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ನಾಲ್ವರು ಸೋಂಕಿತರನ್ನು ಹೊರತುಪಡಿಸಿ ರಾಜ್ಯದಲ್ಲಿ ಹೊಸದಾಗಿ ಯಾರಲ್ಲೂ ಕೊರೊನಾ ಸೋಂಕು ದೃಢಪಟ್ಟಿಲ್ಲ ಎಂದು ಸಚಿವ ಶ್ರೀರಾಮುಲು ಮಾಹಿತಿ ನೀಡಿದರು. ದೇಶದಲ್ಲಿ ಕೊರೊನಾ ಸೋಂಕು ತಗಲಿದವರ ಸಂಖ್ಯೆ ಬುಧವಾರ 66ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ
ದೇಶ ಹೊಸ ಪ್ರಕರಣ ಒಟ್ಟು
ಚೀನ 22 3158
ಇಟಲಿ 168 631
ಇರಾನ್ 63 354