Advertisement

ಭಕ್ತರ ಅನುಕೂಲತೆಗಾಗಿ ವ್ಯವಸ್ಥೆ ಜಾರಿ: ನಿತ್ಯಾನಂದ ಮುಂಡೋಡಿ

10:34 PM Oct 04, 2019 | mahesh |

ಸುಬ್ರಹ್ಮಣ್ಯ: ದೇಗುಲಕ್ಕೆ ಆಗಮಿಸುವ ಭಕ್ತರಲ್ಲಿ ಅನೇಕ ಮಂದಿಗೆ ನೆಲಹಾಸಿನ ವ್ಯವಸ್ಥೆಯಲ್ಲಿ ಕುಳಿತು ಭೋಜನ ಪ್ರಸಾದ ಸ್ವೀಕಾರ ಕಷ್ಟಕರವಾಗಿತ್ತು. ಇದನ್ನು ಮನಗಂಡ ಆಡಳಿತ ಮಂಡಳಿ ಷಣ್ಮುಖ ಭೋಜನ ಶಾಲೆಯಲ್ಲಿ ಏಕ ಕಾಲದಲ್ಲಿ 500 ಮಂದಿ ಟೇಬಲ್‌ನಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಜಾರಿಗೆ ತಂದಿದೆ ಎಂದು ಕುಕ್ಕೆ ಶ್ರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

Advertisement

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಣ್ಮುಖ ಭೋಜನ ಶಾಲೆಗೆ ಅಳವಡಿಸಿರುವ 39.5 ಲಕ್ಷ ರೂ. ವೆಚ್ಚದ ಸ್ಟೈನ್‌ಲೆಸ್‌ ಸ್ಟೀಲ್‌ ಟೇಬಲ್‌ ಹಾಗೂ ಬೆಂಚುಗಳ ಭೋಜನ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿದರು.

ಅನಂತರ ನಾಮಫ‌ಲಕ ಅನಾವರಣ ಗೊಳಿಸಲಾಯಿತು. ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್‌, ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್‌, ಮಹೇಶ್‌ ಕುಮಾರ್‌ ಕರಿಕ್ಕಳ, ರಾಜೀವಿ ಆರ್‌. ರೈ, ಮಾಧವ ಡಿ., ಜಿಲ್ಲಾ ಧಾರ್ಮಿಕ ಸಮಿತಿ ಸದಸ್ಯೆ ವಿಮಲಾ ರಂಗಯ್ಯ, ದೇಗುಲದ ಅಧೀಕ್ಷಕ ಬಾಲಸುಬ್ರಹ್ಮಣ್ಯ, ಎಂಜಿನಿಯರ್‌ ಉದಯ ಕುಮಾರ್‌, ಕೆಎಸ್‌ಎಸ್‌ ಕಾಲೇಜು ಪ್ರಾಂಶುಪಾಲ ಉದಯ ಕುಮಾರ್‌ ಕೆ., ಭೋಜನ ಶಾಲೆಯ ತಂಬಾ ನಾರ್ಯ, ದಿನೇಶ್‌ ಉಪಸ್ಥಿತರಿದ್ದರು.

ಅಶಕ್ತರಿಗೆ ನೆರವಾಗಲು ಹೊಸ ವ್ಯವಸ್ಥೆ
ಕ್ಷೇತ್ರಕ್ಕಾಗಮಿಸುವ ಭಕ್ತರಲ್ಲಿ ವಯೋವೃದ್ಧರು, ಅಶಕ್ತರು, ಅನಾರೋಗ್ಯ ಇನ್ನಿತರ ಸಮಸ್ಯೆಗಳಿಗೆ ಒಳಗಾದವರು ಸೇರಿರುತ್ತಾರೆ. ಅವರೆಲ್ಲ ನೆಲದಲ್ಲಿ ಕುಳಿತು ಊಟ ಮಾಡುವಾಗ ತೊಂದರೆ ಅನುಭವಿಸುತ್ತಿದ್ದರು. ಅಂತಹವರಿಗೆ ಅನುಕೂಲವಾಗಲೆಂದು ಈ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಈ ವ್ಯವಸ್ಥೆಯ ಬಳಕೆಯಿಂದ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿ ತೃಪ್ತಿದಾಯಕವಾಗಿ ಮರಳುತ್ತಾರೆ ಎಂದು ನಿತ್ಯಾನಂದ ಮುಂಡೋಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next