ಬಿಹಾರ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜನತಾ ದಳ-ಯುನೈಟೆಡ್ (ಜೆಡಿಯು) ಎಂಎಲ್‌ಸಿ ರಾಧಾ ಚರಣ್ ಶಾ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ರಾತ್ರಿ ಬಿಹಾರದ ಭೋಜ್‌ಪುರ ಜಿಲ್ಲೆಯ ಅರಾದಲ್ಲಿರುವ ಅವರ ನಿವಾಸದಲ್ಲಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಧಾ ಚರಣ್ ಶಾ ಅವರ ನಿವಾಸಕ್ಕೆ ದಾಳಿ ಮಾಡಿದ ಕೇಂದ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದು ಬಳಿಕ ದಾಖಲೆಗಳ ಆಧಾರದ ಮೇಲೆ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡುದುಕೊಂಡಿದ್ದಾರೆ ಎನ್ನಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಶಾ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಕಳೆದ ಐದು ತಿಂಗಳಲ್ಲಿ ಶಾ ಅವರ ಮನೆಯ ಮೇಲೆ ದಾಳಿ ನಡೆದಿರುವುದು ಇದು ಎರಡನೇ ಭಾರಿಯಾಗಿದೆ.
ಶಾ ಅವರಿಗೆ ಸಂಬಂದಿಸಿದ ಹೊಟೇಲ್, ರೆಸಾರ್ಟ್, ಶಾಲೆಗಳಲಿಗೂ ದಾಳಿ ನಡೆಸಿದ ಅಧಿಕಾರಿಗಳ ತಂಡ ಅಲ್ಲಿಯೂ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಕಳೆದ ಆಗಸ್ಟ್ 28 ರಂದು ಇಡಿ ಶಾ ಮತ್ತು ಅವರ ಮಗನಿಗೆ ಸಮನ್ಸ್ ಜಾರಿ ಮಾಡಿದ್ದು, 15 ದಿನಗಳ ಒಳಗೆ ಪಾಟ್ನಾದಲ್ಲಿರುವ ಏಜೆನ್ಸಿಯ ಬಿಹಾರ ಕಚೇರಿಯ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಬಳಿಕ ಇಡಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿತ್ತು.
ಇದನ್ನೂ ಓದಿ: Mangaluru ಯಶಸ್ವಿನಿ ಯಶಸ್ಸಿಗೆ ಕರಾವಳಿಯ ಕುಟುಂಬ ವ್ಯವಸ್ಥೆ ತೊಡಕು!