Advertisement

ರಿಯಲ್‌ ಎಸ್ಟೇಟ್‌ ಕಾಯ್ದೆ ಜಾರಿ; ಕರ್ನಾಟಕದಲ್ಲಿಲ್ಲ

10:24 AM May 01, 2017 | |

ಹೊಸದಿಲ್ಲಿ: ಬಹುನಿರೀಕ್ಷಿತ ರಿಯಲ್‌ ಎಸ್ಟೇಟ್‌ ಕಾಯ್ದೆಯು ದೇಶದ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಮವಾರದಿಂದ ಜಾರಿಗೆ ಬರಲಿದ್ದು, ಮನೆ ಖರೀದಿಸ ಬಯಸುವವರು ನಿರಾಳರಾಗಲಿದ್ದಾರೆ.

Advertisement

ಆದರೆ, ಕರ್ನಾಟಕ, ಗುಜರಾತ್‌, ಉತ್ತರಪ್ರದೇಶ ಸೇರಿದಂತೆ ಇನ್ನೂ ಹಲವು ರಾಜ್ಯಗಳು ಈ ಕಾಯ್ದೆಯ ನಿಯಮಾವಳಿಗಳ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ, ಇಲ್ಲಿ ಹೊಸ ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್ಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ. ಇದರಿಂದಾಗಿ, ಈಗಾಗಲೇ ಬಿಕ್ಕಟ್ಟಿನಲ್ಲಿರುವ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಇನ್ನಷ್ಟು ಹೊಡೆತ ಬೀಳಲಿದೆ.

ಕಾಯ್ದೆಯನ್ವಯ, ಎಲ್ಲ ಹಾಲಿ ಯೋಜನೆಗಳನ್ನು ಜುಲೈ 2017ರೊಳಗೆ ರಾಜ್ಯದ ನಿಯಂತ್ರಣಾ ಪ್ರಾಧಿಕಾರದಲ್ಲಿ ನೋಂದಾಯಿಸಬೇಕು. ನೋದಣಿಯಾಗದೇ ಯಾವುದೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವಂತಿಲ್ಲ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಇನ್ನೂ ಪ್ರಾಧಿಕಾರವನ್ನೇ ರಚಿಸಿಲ್ಲ. ಪಾರ ದರ್ಶಕತೆ, ಹೊಣೆಗಾರಿಕೆ ಉದ್ದೇಶದಿಂದ ಈ ಕಾಯ್ದೆ ಜಾರಿ ಮಾಡಲಾಗಿದೆ. ಇದರ ಅನುಷ್ಠಾನವು ಗ್ರಾಹಕನೇ ದೊರೆ ಎಂಬ ಹೊಸ ಯುಗದ ಆರಂಭ ಎಂದು ಕೇಂದ್ರ ಬಣ್ಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next