Advertisement

ಇಂಧನ ಸುಸ್ಥಿರತೆ ಅತ್ಯಾವಶ್ಯಕ: |ಡಾ|ಅನಿಲ್‌ ಕಾಕೋಡ್ಕರ್‌

11:03 PM Oct 20, 2022 | Team Udayavani |

ಮಣಿಪಾಲ: ಹಸುರು ಹಾಗೂ ಶುದ್ಧ ಇಂಧನದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಇಂಧನದ ಸುಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಹೋಮಿ ಭಾಭಾ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ನ ಕುಲಾಧಿಪತಿ ಡಾ| ಅನಿಲ್‌ ಕಾಕೋಡ್ಕರ್‌ ತಿಳಿಸಿದರು.

Advertisement

ಮಣಿಪಾಲ ಎಂಐಟಿ ಲೈಬ್ರೆರಿ ಆಡಿಟೋರಿಯಂನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ “ರೆಲವೆನ್ಸ್‌ ಆಫ್ ನ್ಯೂಕ್ಲಿಯರ್‌ ಎನರ್ಜಿ ಇನ್‌ ಎಚೀವಿಂಗ್‌ ನೆಟ್‌ ಝೀರೋ ಸಿಒ2 ಎಮಿಶನ್‌’ ಬಗ್ಗೆ ಅವರು ಉಪನ್ಯಾಸ ನೀಡಿದರು.

ಭಾರತದಲ್ಲಿ ಕ್ಲೀನ್‌ ಅಥವಾ ಹಸುರು ಇಂಧನ ಬಳಕೆ ಪ್ರಮಾಣ ತೀರಾ ಕಡಿಮೆಯಿದೆ. ಒಟ್ಟಾರೆ ಇಂಧನ  ಬಳಕೆಯಲ್ಲಿ ಶೇ. 3.9ರಷ್ಟು ಇರ ಬಹುದು. ಕೃಷಿ, ವಸತಿಗಳಿಗಿಂತ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಳಕೆಯಾಗುತ್ತಿದೆ. ಅಣುಶಕ್ತಿ ಇಂಧನದ ಬಳಕೆಯೂ ಹೆಚ್ಚಿದೆ. ಇಂಧನದಲ್ಲಿ ಸುಸ್ಥಿರತೆ ಕಾಪಾಡಿ ಕೊಳ್ಳುವ ಜತೆಗೆ ಎಮಿಶನ್‌ನ್ನು ಶೂನ್ಯಕ್ಕೆ ಇಳಿಸುವ ಸವಾಲು ಇದೆ ಎಂದರು.

ಮುಂದೆ ಬರಬಹುದಾದ ಇಂಧನ ಸವಾಲನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ನವೀಕರಿಸ ಬಹುದಾದ ಇಂಧನದ ಮೂಲವನ್ನು ಕಾಪಾಡಿಕೊಂಡು ಸೂಕ್ತ ಪರಿಹಾರ ಹುಡುಕಬೇಕು. ಮಾನವಾಭಿವೃದ್ಧಿ ಸೂಚ್ಯಂಕದ ಆಧಾರದಲ್ಲಿ ಇಂಧನ ಬಳಕೆ ಎಷ್ಟಾಗುತ್ತಿದೆ ಮತ್ತು ಭವಿಷ್ಯದಲ್ಲಿ ಇಂಧನ ಬಳಕೆ ಎಷ್ಟಾಗಲಿದೆ ಎಂಬುದು ಮತ್ತು ಅದಕ್ಕೆ ತಕ್ಕಂತೆ ಪೂರೈಕೆಯೂ ಆಗಬೇಕು. ಇಂಧನ ಪೂರೈಕೆಯಲ್ಲಿ ಶೇ. 100ರಷ್ಟು ಎಮಿಶನ್‌ ಫ್ರೀ ಮಾಡುವ ಆವಶ್ಯಕತೆಯಿದೆ ಎಂದರು.

ನವೀಕರಿಸಬಹುದಾದ ಇಂಧನಗಳ ಸದ್ಬಳಕೆಯ ಜತೆಗೆ ಇಂಧನ ವ್ಯವಸ್ಥೆಯನ್ನು ಇನ್ನಷ್ಟು ಸದೃಢ ಗೊಳಿಸಬೇಕು. ಹಸುರು ಇಂಧನದ ಮಹತ್ವ ಮತ್ತು ಅದರಿಂದ ಪರಿಸರಕ್ಕೆ ಆಗುವ ಅನುಕೂಲತೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ಆಗಬೇಕು ಎಂದು ಹೇಳಿದರು.

Advertisement

ಎಂಐಟಿ ನಿರ್ದೇಶಕ ಕ| ಡಾ| ಅನಿಲ್‌ ರಾಣ, ಜಂಟಿ ನಿರ್ದೇಶಕ ಡಾ| ಸೋಮಶೇಖರ ಭಟ್‌, ಸಹ ನಿರ್ದೇಶಕ (ಎಫ್ಡಿ ಆ್ಯಂಡ್‌ ಡಬ್ಲೂé) ಡಾ| ಶಂಕರನಾರಾಯಣ ಭಟ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next