ಮಹಾನಗರ: ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯದಂತೆ ಅಕ್ಷರಾಭ್ಯಾಸ ಮಾಡಲಾಯಿತು.
ಶಾರದೆಯ ವಿಗ್ರಹದೆದುರು ಹರಿ ವಾಣದಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಹೆತ್ತವರು ಮಕ್ಕಳಿಂದ ‘ಓಂ’ ಬರೆಯಿಸಿ ಶಿಕ್ಷಣಕ್ಕೆ ಓಂಕಾರ ಹಾಡಿದರು.
ಶಾಲಾ ಪ್ರಾಚಾರ್ಯೆ ವಿದ್ಯಾ ಕಾಮತ್ ಜಿ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಶಕ್ತಿ ಎಜುಕೇಶನ್ ಟ್ರಸ್ಟ್‌ನ ಆಡಳಿತಾ ಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಅಂಕಗಳಲ್ಲ. ಅಲ್ಲಿ ಮಾನವ ನಿರ್ಮಾಣದ ಕೆಲಸ ನಿರಂತರ ನಡೆಯಬೇಕು. ಮಾನ ವೀಯ ಮೌಲ್ಯಗಳ ಬೋಧನೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೊಂದಿಗೆ ಮಿಲಿತವಾಗಿರಬೇಕು. ಆದುದರಿಂದಲೇ ಶಕ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಯೋಗಾಭ್ಯಾಸ, ಧ್ಯಾನ, ಶ್ಲೋಕ ಕಂಠಪಾಠವಲ್ಲದೆ ಅದರಅರ್ಥ ವಿವರಣೆ ನೀಡಲಾಗುವುದು ಎಂದರು.
ಸ್ವಾತಿ ಭರತ್ ಸ್ವಾಗತಿಸಿ, ದೀಪ್ತಿ ವಂದಿಸಿ, ಪೂರ್ಣಿಮಾ ಆರ್. ಶೆಟ್ಟಿ ನಿರೂ ಪಿಸಿದರು.
ಶಕ್ತಿ ಎಜುಕೇಶನ್‌ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ್ ಕೆ., ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಶಕ್ತಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್., ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ನಿರ್ಮಲಾ ಸಕ್ಸೇನಾ ಉಪಸ್ಥಿತರಿದ್ದರು.