ಮುಂಬೈ: ಹಣವಂತರಿಗೆ ಪ್ರತಿಷ್ಠೆ ಎನಿಸಿರುವ Apple ಮೊಬೈಲ್ ಕಂಪನಿ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ದೇಶದ ಮೊದಲ ರಿಟೇಲ್ ಸ್ಟೋರ್ ಅನ್ನು ಮಂಗಳವಾರ (ಎ.18) ಉದ್ಘಾಟನೆಯೊಂದಿಗೆ ಆರಂಭಗೊಂಡಿದೆ.
ಇದನ್ನೂ ಓದಿ:ನೆಟ್ಟಣ: ಕಾರು- ತೂಫನ್ ಅಪಘಾತ; ಮಗು ಸೇರಿದಂತೆ ನಾಲ್ವರು ಮೃತ್ಯು
ಮುಂಬೈಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನ ಜಿಯೋ ವರ್ಲ್ಡ್ ಡೈವ್ ಮಾಲ್ ನಲ್ಲಿನ 28,000 ಸಾವಿರ ಚದರ ಅಡಿಯ Apple ಬಿಕೆಸಿ ಸ್ಟೋರ್ ನ ಗೇಟ್ ಅನ್ನು ಕಂಪನಿಯ ಸಿಇಒ ಟಿಮ್ ಕುಕ್ ತೆರೆಯುವ ಮೂಲಕ ಉದ್ಘಾಟಿಸಿದ್ದು, ಕಾಯುತ್ತಿದ್ದ ಅಭಿಮಾನಿಗಳು, ಗ್ರಾಹಕರು ಈ ಸಂದರ್ಭದಲ್ಲಿ ಕೈಬೀಸಿ ಹರ್ಷ ವ್ಯಕ್ತಪಡಿಸಿದ್ದರು.
ದೇಶದ ರಾಜಧಾನಿ ದೆಹಲಿಯಲ್ಲಿ Apple ಕಂಪನಿಯ ಎರಡನೇ ಸ್ಟೋರ್ ಗುರುವಾರ ಉದ್ಘಾಟನೆಯಾಗಲು ಸಿದ್ಧಗೊಂಡಿದೆ. ಮುಂಬೈ ಜನರ ಪ್ರೀತಿ, ಸೃಜನಶೀಲತೆ ಮತ್ತು ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ…ಇದರಿಂದಾಗಿ ನಮಗೂ ಕೂಡಾ ಭಾರತದಲ್ಲಿ ನಮ್ಮ Apple ಬಿಕೆಸಿ ಸ್ಟೋರ್ ಆರಂಭಿಸಲು ತುಂಬಾ ಉತ್ಸುಕರಾಗಿದ್ದೇವೆ ಎಂದು ಕುಕ್…ಮುಂಬೈನಲ್ಲಿ Apple ಸ್ಟೋರ್ ಉದ್ಘಾಟಿಸಿದ ನಂತರ ಟ್ವೀಟ್ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಮುಂಬೈನ Apple ಸ್ಟೋರ್ ನಲ್ಲಿ ಕಂಪನಿಯ ವಿವಿಧ ಸರಣಿಯ ಐಫೋನ್ ಗಳನ್ನು ಹಾಗೂ ಇನ್ನೂ ಹಲವು ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಗ್ರಾಹಕರು ಪಡೆಯಬಹುದಾಗಿದೆ. ಪ್ರವೇಶ ದ್ವಾರದಲ್ಲಿ ಹಲೋ ಮುಂಬಯಿ ಎಂದು ಬರೆಯಲಾಗಿದ್ದು, ಈ ಮಳಿಗೆಯಲ್ಲಿ 100 ಜನ ಸೇವಾ ಪ್ರತಿನಿಧಿಗಳಿರಲಿದ್ದು, 20 ಭಾಷೆಗಳಲ್ಲಿ ಗ್ರಾಹಕರ ಜತೆ ಸಂವಹನ ನಡೆಸಲು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.