Advertisement
ಶ್ರೀ ಕೃಷ್ಣಮಠ, ಪರ್ಯಾಯ ಅದಮಾರು ಮಠದ ವತಿಯಿಂದ ರವಿವಾರ ರಾಜಾಂಗಣದಲ್ಲಿ ನಡೆದ “ವಿಶ್ವಾರ್ಪಣಮ್’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿದರು.
Related Articles
Advertisement
ಕೊರೊನಾ ಕಾಲಘಟ್ಟದಲ್ಲಿಯೂ ಆಚಾರ್ಯ ಮಧ್ವರಿದ್ದು ಶ್ರೀಈಶ ಪ್ರಿಯತೀರ್ಥರು ಪರ್ಯಾಯ ಪೂಜಾವಧಿ ನೆರವೇರಿಸಿಕೊಂಡರು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಇರುವೆಗಳು ಸಿಹಿ ಇರುವಲ್ಲಿ ಹೋಗು ವಂತೆ ಅದಮಾರು ಶ್ರೀಗಳು ಕೃಷ್ಣನ ಪೂಜೆಯನ್ನು ಶ್ರದ್ಧೆಯಿಂದ ಮಾಡಿದರು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಎಂದರು.
ನಾವು ಹೊರಗೆ ಅನುರೇಣು ತೃಣ ಕಾಷ್ಠದಲ್ಲಿ ದೇವರನ್ನು ನೋಡುತ್ತೇವೆ. ಆದರೆ ನಮ್ಮೊಳಗಿರುವ ದೇವರನ್ನು ಕಾಣಬೇಕು ಎನ್ನುವುದು ಶ್ರೀಕೃಷ್ಣನ ಸಂದೇಶ. ಇಂತಹ ಗುಣವನ್ನು ಹೊಂದಿರುವುದರಿಂದಲೇ ಅದಮಾರು ಶ್ರೀಗಳ ಪರ್ಯಾಯ ಯಶಸ್ವಿಯಾಗಿದೆ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನುಡಿದರು.
ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಅತಿಥಿಗಳಾಗಿ ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಬೃಜ್ ಮೋಹನ್ ಶರ್ಮ, ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣ ಆಸ್ರಣ್ಣ, ನಿವೃತ್ತ ಅಧಿಕಾರಿ ಟಿ. ಶ್ಯಾಮ ಭಟ್, ಉದ್ಯಮಿ ಸಿ.ಆರ್. ಬಾಲಕೃಷ್ಣ ಭಟ್ ಚೆನ್ನೈ ಪಾಲ್ಗೊಂಡರು.
ಶಾಸಕ ಕೆ. ರಘುಪತಿ ಭಟ್, ಪಿಪಿಸಿ ಸಂಸ್ಕೃತ ಪ್ರಾಧ್ಯಾಪಕ ಡಾ| ಟಿ.ಎಸ್.ರಮೇಶ್, ವಿದ್ವಾಂಸ ವಿ| ಹೆರ್ಗ ರವೀಂದ್ರ ಭಟ್, ಕಲಾವಿದ ಪ್ರಾದೇಶ ಆಚಾರ್ಯ ಬೆಂಗಳೂರು, ಯಕ್ಷಗಾನ ಕಲಾವಿದ ವಾಸುದೇವ ರಂಗಾ ಭಟ್ಟ, ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಕಲಾ ಸಂಘಟಕ ಪುರುಷೋತ್ತಮ ಅಡ್ವೆ ಅವರನ್ನು ಸಮ್ಮಾನಿಸಲಾಯಿತು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿ ಕುತ್ಪಾಡಿ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರ್ವಹಿಸಿದರು.