Advertisement

ಆರ್ಥಿಕ ಸಮಾನತೆ ಸಾಧಿಸುವ ಕೆಲಸ ನಡೆಯಲಿ: ಶ್ರೀಶೈಲ ಶ್ರೀ

05:21 PM Jul 31, 2019 | Naveen |

ಇಂಡಿ: ಭಾರತ ದೇಶ ವಿಶ್ವದಲ್ಲಿಯೇ ಅತಿ ದೊಡ್ಡ ರಾಷ್ಟ್ರ. ಇಲ್ಲಿ ಎಲ್ಲರೂ ಸಮಾನತೆ ಬಗ್ಗೆ ಮಾತನಾಡುತ್ತಾರೆ. ಆದರೆ ಆರ್ಥಿಕ ಅಸಮಾನತೆ ಇದ್ದಾಗ ಸಮಾನತೆ ಬರುವುದಿಲ್ಲ. ಆರ್ಥಿಕ ಸಮಾನತೆ ತರುವ ಕಾಯಕ ನಡೆಯಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ಪಟ್ಟಣದ ಶಾಂತೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ. ದಶಮಾನೋತ್ಸವ ಕಾರ್ಯಕ್ರಮ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಭಾರತ ದೇಶದಲ್ಲಿ ಪ್ರತಿಯೊಬ್ಬರು ಸಮಾನತೆ ಬೇಕು ಎನ್ನುತ್ತಾರೆ. ಅದರಲ್ಲಿ ಧಾರ್ಮಿಕ ಸಮಾನತೆ, ಲಿಂಗ ಸಮಾನತೆ, ಜಾತಿ ಸಮಾನತೆ ಇತ್ಯಾದಿ ಆರ್ಥಿಕ ಅಸಮಾನತೆ ಇದ್ದರೆ ಯಾವುದೇ ಕಾಲಕ್ಕೂ ಸಮಾನತೆ ಸಿಗುವದಿಲ್ಲ. ಇಂದು ಆರ್ಥಿಕವಾಗಿ ಎಲ್ಲರನ್ನು ಸರಿದೂಗಿಸುವ ಕೆಲಸ ನಡೆಯಬೇಕು. ಇಂದು ಸರಕಾರಗಳು ಮಾಡದೆ ಇರುವ ಸಹಾಯ ಸಹಕಾರ ಸಹಕಾರ ಸಂಘಗಳು ಮಾಡುತ್ತಿವೆ. ಸಹಕಾರ ಪತ್ತಿನ ಸಂಘಗಳು ರೈತರ, ದೀನ ದುರ್ಬಲರ ಸಹಾಯಕ್ಕೆ ಬರಬೇಕು ಎಂದರು.

ಶಾಂತೇಶ್ವರ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಪ್ರ ಪ್ರಥಮದಲ್ಲಿ ಅತಿ ಕಡಿಮೆ ಹಣ ಹೂಡಿಕೆಯಲ್ಲಿ ಪ್ರಾರಂಭವಾದ ಈ ಸಂಘ ಈಗ ಲಕ್ಷಾಂತರ ರೂ. ಲಾಭದಲ್ಲಿದೆ. ಸಾಕಷ್ಟು ಜನ ನಮ್ಮ ಸಂಘದ ಮೇಲೆ ವಿಶ್ವಾಸವಿಟ್ಟು ಕೋಟ್ಯಂತರ ರೂ. ಠೇವಣಿ ಮಾಡಿದ್ದಾರೆ. ಸಾಕಷ್ಟು ಜನ ಪಿಗ್ಮಿ ಮಾಡಿದ್ದಾರೆ. ಸಾವಿರಾರು ಜನ ನಮ್ಮ ಸಂಘದಿಂದ ಸಾಲ ಪಡೆದು ತಮ್ಮ ಕಾರ್ಯಗಳನ್ನು ಮಾಡಿಕೊಂಡಿದ್ದಾರೆ. ಸಂಘದ ಸದಸ್ಯರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ನಮ್ಮ ಸಂಘ ಇನ್ನಷ್ಟು ಬೆಳವಣಿಗೆಯಾಗಲು ಸಹಕರಿಸಿ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟಕ್ಕೆ ಬೆಳೆಸಿ ಶತಮಾನೋತ್ಸವ ಆಚರಿಸುವಂತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಪಾಟೀಲ ಮಾತನಾಡಿ, ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ ಸದಸ್ಯರ ಸಹಕಾರ, ಆಡಳಿತ ಮಂಡಳಿ ಒಗ್ಗಟ್ಟು ಹಾಗೂ ಸಾಲ ಪಡೆದುಕೊಂಡ ಗ್ರಾಹಕರು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡುವುದು ಅವಶ್ಯವಾಗಿರುತ್ತದೆ. ಆ ಕಾರ್ಯವನ್ನು ಶಾಂತೇಶ್ವರ ಸೌಹಾರ್ದ ಯಶಸ್ವಿಯಾಗಿ ಮುನ್ನಡೆಸುತ್ತ ಸಾಗಿದ್ದು ಇಂದು ದಶಮಾನೋತ್ಸವ ಆಚರಣೆ ಮಾಡುತ್ತಿದೆ ಎಂದರು.

Advertisement

ಹೊಟಗಿ ಬೃಹನ್ಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ನಾಗಣಸೂರಿನ ಶ್ರೀಕಂಠ ಶಿವಾಚಾರ್ಯರು, ಜೈನಾಪುರದ ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಿ ಆರ್ಶೀವಚನ ನೀಡಿದರು. ಮಂದ್ರೂಪದ ರೇಣುಕ ಶಿವಾಚಾರ್ಯರು, ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬ್ಯಾಂಕ್‌ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಆರ್‌ .ಎಂ. ಶಹಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಆರ್‌. ಶಹಾ, ಶರಣಗೌಡ ಪಾಟೀಲ, ಎಂ.ಜಿ. ಪಾಟೀಲ, ಸಿದ್ರಾಮಪ್ಪ ಉಪ್ಪಿನ್‌, ನಿಂಗಣ್ಣ ಬಿರಾದಾರ, ರಮೇಶ ಗುತ್ತೆದಾರ, ಸದಾಶಿವಗೌಡ ಬಿರಾದಾರ, ಅಶೋಕಗೌಡ ಪಾಟೀಲ, ಭೀಮರಾಯ ಮದರಖಂಡಿ, ಹನುಮಂತ ಹೊಟಗಿ, ವಿಜಯಕುಮಾರ ನಾಯಕ, ಸತ್ತಾರ ಬಾಗವಾನ, ಸೋಮಶೇಖರ ಬಿರಾದಾರ, ಈರಣ್ಣಗೌಡ ಮೈದರಗಿ, ಸಿದ್ದಪ್ಪ ದೇಸಾಯಿ, ಎಂ.ವಿ. ವಸ್ತ್ರದ, ಬಸವರಾಜ ಕಣ್ಣಿ, ಶ್ರೀಮಂತ ಇಂಡಿ, ಡಾ| ಎಂ.ಜಿ. ಪಾಟೀಲ, ಜಗದೀಶ ಕ್ಷತ್ರಿ, ಆನಂದ ಅಳ್ಳಗಿ ಸೇರಿದಂತೆ ಅನೇಕ ನಿರ್ದೇಶಕರು, ಆಡಳಿತ ಮಂಡಳಿ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next