Advertisement

ಇಂಡಿ ತಾಲೂಕಲ್ಲಿ ವೈಭವದ ನವರಾತ್ರಿ ಉತ್ಸವ

04:45 PM Oct 04, 2019 | Naveen |

ಇಂಡಿ: ಇಂಡಿ, ಭತಗುಣಕಿ, ಅಂಜುಟಗಿ, ನಾದ ಕೆ.ಡಿ, ಬೂದಿಹಾಳ, ತಾಂಬಾ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತ್ತು ತಾಂಡಾಗಳ ದೇಗುಲಗಳಲ್ಲಿ ನವರಾತ್ರಿಯ ವಿಶೇಷ ಪೂಜೆ, ಹೋಮ ಹವನ, ದೇವಿ ಅಲಂಕಾರ ಕಂಗೊಳಿಸುತ್ತಿವೆ. ತುಳಜಾಪುರದಿಂದ ದಿವ್ಯ ಜ್ಯೋತಿ ತಂದು ಘಟಸ್ಥಾಪನೆ ಮಾಡಿ ದೇವಿ ಮೆರವಣೆಗೆ ಮಾಡಲಾಗಿದೆ.

Advertisement

ತಾಂಬಾ: ಗ್ರಾಮದ ಅಂಬಾಭವಾನಿ ಎಜ್ಯುಕೇಶನ್‌ ಟ್ರಸ್ಟ್‌ ಜಗದಂಬಾ ವಿದ್ಯಾವರ್ಧಕ ಸಂಘ ಹಾಗೂ ತಾಂಬಾ ಗ್ರಾಮದ ಸಹಯೋಗದಲ್ಲಿ ಗುರುವಾರ ನಡೆದ ನವರಾತ್ರಿ ಉತ್ಸವದಲ್ಲಿ ನವಚಂಡಿ ಹೋಮ ಕಾರ್ಯಕ್ರಮ ನಡೆಯಿತು.

ಹೋಮದಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಮತ್ತು ಪತ್ನಿ ಸುನೀತಾ ಚವ್ಹಾಣ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಮಳೆ ಚೆನ್ನಾಗಿ ಆಗಲಿ ಮತ್ತು ನೆರೆ ಸಂತ್ರಸ್ತರಿಗೆ ಆದ ಹಾನಿಯನ್ನು ಭರಿಸುವ ಶಕ್ತಿ ಜಗನ್ಮಾತೆ ದಯಪಾಲಿಸಲು ಎಂದು ಬೇಡಿಕೊಂಡಿದ್ದೇನೆ ಎಂದರು.

ದೇವಿ ಮೆರವಣೆಗೆ ತಾಂಬಾದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಕುಂಭಮೇಳ, ಆನೆ ಕುದರೆಗಳು,ಯಕ್ಷಗಾನ, ಲೇಝೀಮ, ನಾಶಿಕ ಡೋಲ, ಜಗ್ಗಲಗಿ ಡೋಲ, ಝಾಂಜ್‌ ಪಥಕ, ಕೃಷ್ಣ ಪಾರಿಜಾತ ಸೇರಿದಂತೆ ನೂರಾರು ಭಕ್ತರಿಂದ ಭವ್ಯ ಮೆರವಣೆಗೆ ನಡೆಯಿತು.

ಇಂಡಿ: ನವರಾತ್ರಿ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿತ್ತು. ಪ್ರತಿ ನಿತ್ಯ ದೇವಿಗೆ ಮೂರು ಬಾರಿ ಉಡುಗೆ ತೊಡಿಸಿ ವಿವಿಧ ಆಭರಣಗಳಿಂದ ಅಲಂಕರಿಸುತ್ತಾರೆ. ಬೆಳಗ್ಗೆ ಹೂವು ತೋರಣಗಳಿಂದ, ಮಧ್ಯಾಹ್ನ ಎಲೆ, ತುಳಸಿ ಎಲೆ, ಸಾಯಂಕಾಲ ಆಭರಣಗಳಿಂದ ಸಿಂಗರಿಸುತ್ತಾರೆ. ಬೆಳಗ್ಗೆ ಆರತಿ, ಭಕ್ತರಿಂದ ಅಭಿಷೇಕ, ಹೋಮ ಹವನಗಳು ನಡೆಯುತ್ತಿವೆ.

Advertisement

ಭತಗುಣಕಿ: ಭತಗುಣಕಿ ದೇವಸ್ಥಾನದಲ್ಲಿ ಪ್ರತಿ ಸಾಯಂಕಾಲ ಸತ್ಸಂಗ ಕಾರ್ಯಕ್ರಮ ನಡೆಯುತ್ತಿದೆ. ಮಾತೋಶ್ರೀ ವಿದ್ಯಾದೇವಿ ಸಿದ್ದಾರೂಢ ಆಶ್ರಮ ಕಲಬುರಗಿಯವರು ದಾನಮ್ಮ ದೇವಿ ಪುರಾಣ ನೀಡುವರು. ದೇವಿ ಮೆರವಣಿಗೆ, ಕುಸ್ತಿಗಳು, ಉಡಿ ತುಂಬುವ ಕಾರ್ಯಕ್ರಮ ನಡೆಯುವವು. ಪುರಾಣ ಮಹಾ ಮಂಗಲೋತ್ಸವಕ್ಕೆ 12ರಂದು ಬೀದರದ ಶಿವಕುಮಾರ ಶ್ರೀಗಳು ಮತ್ತು ವಿಜಯಪುರ -ಬಾಗಲಕೋಟೆ ನಂದಿನಿ ಹಾಲು ಒಕ್ಕೂಟದ ಅಧ್ಯಕ್ಷ ಸಂಬಾಜಿರಾವ್‌ ಮಿಸಾಳೆ ಪಾಲ್ಗೊಳ್ಳುವರು.

Advertisement

Udayavani is now on Telegram. Click here to join our channel and stay updated with the latest news.

Next